ಬೆಂಗಳೂರು:ಸಂಚಾರ ವ್ಯವಸ್ಥೆ ದಕ್ಷ ನಿರ್ವಹಣೆ, ಆರೋಗ್ಯ ಪ್ರವಾಸ, ಐಟಿ-ಬಿಟಿ ಸೇರಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಬಹು ಕೋಟಿ ರೂ. ಬಂಡವಾಳ ಹೂಡಿಕೆಗೆ ಸಿಂಗಾಪೂರ ಕಂಪನಿಗಳು ಉತ್ಸುಕವಾಗಿವೆ.
ವಿಕಾಸಸೌಧದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಸಿಂಗಾಪೂರ ಉದ್ಯಮಗಳ ಅಧಿಕಾರಿಗಳ ನಿಯೋಗ ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿತು. ಇದೇ ವೇಳೆ ರಾಜ್ಯದಲ್ಲಿ ಹೂಡಿಕೆಗೆ ಅವಕಾಶಗಳು, ಅನುಕೂಲತೆ, ನೀತಿಗಳ ಕುರಿತು ಮಾಹಿತಿ ಪಡೆಯಿತು.
ಬೆಂಗಳೂರು ಸೇರಿ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಲವು ನಗರಗಳಲ್ಲಿ ಮಿತಿಮೀರಿದ ಸಂಚಾರ ದಟ್ಟಣೆ ಸಮಸ್ಯೆಯಿದೆ. ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ಸಂಚಾರ ನಿರ್ವಹಣೆ ಸವಾಲಿನ ಕೆಲಸವಾಗಿದೆ ಎಂದು ಕೃಷ್ಣಬೈರೇಗೌಡ ಪ್ರಸ್ತಾಪಿಸಿದರು.
ಸಂಚಾರ ವ್ಯವಸ್ಥೆ ದಕ್ಷ ನಿರ್ವಹಣೆಯಲ್ಲಿ ಸಿಂಗಾಪೂರ್ ಮಾದರಿಯಾಗಿದೆ. ಬೆಂಗಳೂರಿನ ಸಂಚಾರ ನಿರ್ವಹಣೆ ಮೇಲೂ ಹೂಡಿಕೆ ಮಾಡಬಹುದು. ಬಂಡವಾಳ ಹೂಡುವವರಿಗೆ ಸರ್ಕಾರದ ಎಲ್ಲ ರೀತಿ ಸಹಕಾರ ನೀಡಲಿದೆ ಎಂಬ ಭರವಸೆ ನೀಡಿದರು.
ವಿಪುಲ ಅವಕಾಶಗಳು
ಸಾರ್ವಜನಿಕ ಸಾರಿಗೆ, ರಸ್ತೆ ನಿರ್ವಹಣೆ ವಿಚಾರದಲ್ಲಿ ಸಿಂಗಾಪೂರ್ ಮುಂದಿದೆ. ರಾಜ್ಯದಲ್ಲಿ ಈ ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶವಿದೆ. ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಬೆಂಗಳೂರು ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ಐಟಿ-ಬಿಟಿ, ಡೇಟಾ ಸೈನ್ಸ್, ಆರೋಗ್ಯ ಪ್ರವಾಸ, ವಿಜ್ಞಾನ-ತಂತ್ರಜ್ಞಾನ ಮತ್ತಿತರ ವಿಭಾಗಗಳಲ್ಲಿ ಹೂಡಿಕೆಗೆ ಮುಕ್ತ ಅವಕಾಶವಿದೆ ಎಂದು ಕೃಷ್ಣಬೈರೇಗೌಡ ಮನವರಿಕೆ ಮಾಡಿಕೊಟ್ಟರು.ವಿಜ್ಞಾನ, ತಂತ್ರಜ್ಞಾನ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರು, ರಾಜ್ಯ ಸರ್ಕಾರ ಬಂಡವಾಳ ಆಕರ್ಷಣೆ, ಉದ್ಯಮಗಳ ಸ್ಥಾಪನೆ, ಉದ್ಯೋಗಗಳ ಸೃಜನೆಗೆ ಹೆಚ್ಚಿನ ಆಸಕ್ತಿವಹಿಸಿದೆ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಿದ್ದು, ಆ್ಯಪಲ್ ಹಾಗೂ ವಿಸ್ಟ್ರಾನ್ ಕಂಪನಿಗಳ ಜತೆಗೆ ರಾಜ್ಯದಲ್ಲಿ ಹೂಡಿಕೆಗೆ ಒಪ್ಪಂದಗಳಾಗಿವೆ.ಈ ಹಿನ್ನೆಲೆಯಲ್ಲಿ ಸಿಂಗಾಪೂರ್ ಉದ್ಯಮಗಳು ಹೂಡಿಕೆ ಮೊತ್ತ, ಕ್ಷೇತ್ರಗಳ ಕುರಿತು ಮೊದಲು ಸರ್ಕಾರಕ್ಕೆ ವಿವರ ಸಲ್ಲಿಸಿದರೆ, ಮುಂದಿನ ಹಂತದ ಬಗ್ಗೆ ಚರ್ಚಿಸಲು ಅನುಕೂಲವಾಗುತ್ತದೆ ಎಂದು ಕೃಷ್ಣಬೈರೇಗೌಡ ಚರ್ಚೆಯ ವೇಳೆ ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಸಿಂಗಾಪೂರ್ ಉದ್ಯಮಗಳ ಅಧಿಕಾರಿಗಳು ಮಾತನಾಡಿ ಭಾರತದ ವಿವಿಧ ಕ್ಷೇತ್ರಗಳಲ್ಲಿ 580 ಕೋಟಿ ರೂ. (70 ದಶಲಕ್ಷ ಅಮೆರಿಕ ಡಾಲರ್) ಹೂಡಿಕೆ ಮಾಡುವ ಉದ್ದೇಶವಿದೆ. ಈ ಪೈಕಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − twelve =
Remember me
