ಬೆಂಗಳೂರು:ರಾಜ್ಯದ ಐಟಿ-ಬಿಟಿ, ಬಾಹ್ಯಾಕಾಶ, ನವೋದ್ಯಮ ಸೇರಿ ವಿವಿಧ ಉದ್ಯಮಿಗಳು, ಹೂಡಿಕೆದಾರರತ್ತ ಮಧ್ಯಪ್ರದೇಶ ಗಮನಹರಿಸಿದೆ. ದೇಶದ ಪ್ರಮುಖ ಕೈಗಾರಿಕೆಗಳ ಹಬ್, ಸಿಲಿಕಾನ್ ವ್ಯಾಲಿ ಎಂದು ಗುರುತಿಸಿಕೊಂಡ ಬೆಂಗಳೂರಿಗೆ ಮಧ್ಯಪ್ರದೇಶ ಸಿಎಂ ಡಾ.ಮೋಹನ್ ಯಾದವ್ ಉನ್ನತ ನಿಯೋಗ ಬುಧವಾರ ಆಗಮಿಸಲಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸಂಜೆ ಹಾಗೂ ಗುರುವಾರ ಇಡೀ ದಿನ ನಡೆಯಲಿರುವ ವಿವಿಧ ವಲಯಗಳ ದುಂಡು ಮೇಜಿನ ಸಭೆ, ಮುಖಾಮುಖಿ ಚರ್ಚೆ, ಸಂವಾದ ಮತ್ತು ಮಧ್ಯಪ್ರದೇಶದ ಸಾಮರ್ಥ್ಯ, ಸಾಧನೆ ಅನಾವರಣ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಪ್ರದೇಶದಲ್ಲಿ 2025ರ ೆಬ್ರವರಿಯಲ್ಲಿ ‘ಇನ್ವೆಸ್ಟ್ ಮಧ್ಯಪ್ರದೇಶ, ಜಾಗತಿಕ ಹೂಡಿಕದಾರರ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ರಾಜ್ಯದ ಉದ್ಯಮಿಗಳು, ಹೂಡಿಕೆದಾರರನ್ನು ಪಾಲ್ಗೊಳ್ಳುವಂತೆ ಆಹ್ವಾನಿಸಲು ಸಿಎಂ ನೇತೃತ್ವದ ಉನ್ನತ ತಂಡ ಭೇಟಿ ನೀಡುತ್ತಿದೆ.
ಮಾಹಿತಿ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಅನ್ವಯಿಕ ಸೇವೆಗಳು, ಜವಳಿ ಮತ್ತು ಸಿದ್ಧ ಉಡುಪು, ಬಾಹ್ಯಾಕಾಶ ತಂತ್ರಜ್ಞಾನ, ವಿದ್ಯುನ್ಮಾನ ವ್ಯವಸ್ಥೆಯ ವಿನ್ಯಾಸ ಮತ್ತು ತಯಾರಿಕೆ, ಔಷಧ, ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು ವಲಯದ ಉದ್ಯಮಿಗಳು, ದಿಗ್ಗಜರು, ಪ್ರಮುಖರೊಂದಿಗೆ ಎರಡು ದಿನಗಳ ವಿಚಾರ ವಿನಿಮಯವಾಗಲಿದೆ.
ಇದೇ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಅನುಕೂಲತೆ, ಸರ್ಕಾರ ಕೈಗೊಂಡ ಉಪಕ್ರಮಗಳು, ಪ್ರೋತ್ಸಾಹಕಗಳು, ಕೈಗಾರಿಕಾ ನೀತಿ, ಹೂಡಿಕೆಗೆ ಉತ್ತೇಜನ, ಚಿತ್ರಿಕೆ ಪ್ರದರ್ಶನ, ಭೂದೃಶ್ಯಗಳ ಅನಾವರಣವಾಗಲಿದೆ.
ಆಯ್ದ ಕ್ಷೇತ್ರಗಳ ದುಂಡು ಮೇಜು ಸಭೆ, ಮುಖಾಮುಖಿ ಚರ್ಚೆಯಲ್ಲಿ ಸಿಎಂ ಡಾ.ಮೋಹನ್ ಯಾದವ್ ಖುದ್ದು ಭಾಗವಹಿಸಿ, ರಾಜ್ಯದಲ್ಲಿ ಹೂಡಿಕೆ ಮತ್ತು ಉದ್ಯಮ ಸ್ಥಾಪಿಸಲು, ಜಾಗತಿಕ ಹೂಡಿಕದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಕೋರಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
