| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆಯೆನ್ನಲಾದ ವಿವಿಧ ಹಗರಣಗಳ ತನಿಖೆಗಾಗಿ ಎರಡು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಕ್ಕೆ ನಿರ್ಧರಿಸಿರುವ ಸರ್ಕಾರ, ತಕ್ಷಣಕ್ಕೆ ನಾಲ್ಕು ಹಗರಣಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡಗಳನ್ನು ರಚಿಸಲಿದೆ. ನಾವು ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ತನಿಖೆ ನಡೆಸುವುದಾಗಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿತ್ತು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ತನಿಖೆಯ ಸ್ವರೂಪ, ತನಿಖಾ ತಂಡ ಹೇಗಿರಬೇಕು ಎಂಬ ನಿಯಮಾವಳಿಗಳನ್ನು ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಜತೆ ಚರ್ಚೆ ನಡೆಸಿ ಬಹುತೇಕ ಅಂತಿಮಗೊಳಿಸಿದ್ದಾರೆ. ತನಿಖೆಯನ್ನು ಹೆಚ್ಚು ದಿನ ಎಳೆಯದೇ ಬೇಗ ವರದಿ ನೀಡಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬ ಕಾರಣಕ್ಕೆ ಎಸ್​ಐಟಿ ಸ್ವರೂಪದಲ್ಲಿಯೇ ಕೆಲ ಬದಲಾವಣೆ ಮಾಡಲು ತೀರ್ವನಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ನಾಲ್ಕು ಪ್ರಕರಣಗಳು:ಈಗ ತನಿಖೆಗೆ ಆದೇಶಿಸಲಿರುವ 4 ಪ್ರಕರಣಗಳೆಂದರೆ- ಭಾರಿ ಸದ್ದು ಮಾಡಿದ್ದ ಬಿಟ್ ಕಾಯಿನ್, 40 ಪರ್ಸೆಂಟ್ ಕಮಿಷನ್, ಕರೊನಾ ಕಾಲದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದ ಖರೀದಿ ಹಾಗೂ ಕೆಐಎಡಿಬಿಯಲ್ಲಿ ನಡೆದಿರುವ ಜಮೀನು ಡಿನೋಟಿಫಿಕೇಷನ್ ಹಾಗೂ ಕೈಗಾರಿಕೆ ಆರಂಭಿಸದ ಜಮೀನು ವಾಪಸ್ ಪಡೆಯದೇ ಹರಾಜು ಕೇಸ್. ಉಳಿದ ಅನೇಕ ಪ್ರಕರಣಗಳಿದ್ದು, ಅವುಗಳಲ್ಲಿ ನ್ಯಾಯಾಂಗ ಅಥವಾ ಇಲಾಖಾ ವಿಚಾರಣೆ ನಡೆಸಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.
ಎಸ್​ಐಟಿ ರಚನೆ:ನಾಲ್ಕು ಪ್ರಕರಣಗಳಲ್ಲಿ ಮೊದಲಿಗೆ ಎಡಿಜಿಪಿ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡಗಳನ್ನು (ಎಸ್​ಐಟಿ) ರಚನೆ ಮಾಡಲಾಗುತ್ತದೆ. ಎಡಿಜಿಪಿಗಳಾದ ಸೌಮೇಂದು ಮುಖರ್ಜಿ ಹಾಗೂ ಪ್ರಣವ್ ಮೊಹಂತಿ ಅವರನ್ನು ಎರಡು ಪ್ರಕರಣಗಳ ತನಿಖಾ ಮುಖ್ಯಸ್ಥರಾಗಿ ನೇಮಕ ಮಾಡಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಬಿಟ್ ಕಾಯಿನ್ ಹಗರಣದ ಜವಾಬ್ದಾರಿಯನ್ನು ಸೌಮೇಂದು ಮುಖರ್ಜಿ ಹಾಗೂ 40 ಪರ್ಸೆಂಟ್ ಹಗರಣದ ಹೊಣೆಯನ್ನು ಮೊಹಂತಿಯವರಿಗೆ ನೀಡುವ ಸಾಧ್ಯತೆಗಳಿವೆ. ಉಳಿದ ಎರಡು ಪ್ರಕರಣಗಳಿಗೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ಹುಡುಕಲಾಗುತ್ತಿದೆ.
ತಕ್ಷಣ ಆದೇಶ:ಎಸ್​ಐಟಿ ರಚನೆಯ ಆದೇಶ ಒಂದೆರಡು ದಿನಗಳಲ್ಲಿ ಹೊರಬರಲಿದೆ. ಆ ನಂತರ ವಿಶೇಷ ನ್ಯಾಯಾಲಯ ರಚನೆಯಾಗಲಿದೆ. ಎಸ್​ಐಟಿಗಳಿಗೆ ಕಂದಾಯ ಇಲಾಖೆ, ಗೃಹ ಇಲಾಖೆ ಹಾಗೂ ಕಾನೂನು ಇಲಾಖೆಗಳಲ್ಲಿ ಪ್ರತ್ಯೇಕ ನಿಬಂಧನೆಗಳಿವೆ. ಆದ್ದರಿಂದ ಈ ಪ್ರಕರಣದಲ್ಲಿ ಮೂರನ್ನು ಸೇರಿಸಿ ಹೊಸದಾಗಿ ನಿಬಂಧನೆಗಳನ್ನು ವಿಧಿಸಲಾಗುತ್ತಿದೆ ಎಂದು ತಿಳಿದುಬಂದಿದೆ
ವಿಶೇಷ ನ್ಯಾಯಾಲಯ:ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ವಿಚಾರಣೆಗೆ ಎರಡು ವಿಶೇಷ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಸಚಿವ ಎಚ್.ಕೆ. ಪಾಟೀಲ್ ಸಮಾಲೋಚನೆ ಮಾಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಅಂದರೆ ಲೋಕಸಭಾ ಚುನಾವಣೆ ಬರುವ ಮುನ್ನ ತನಿಖೆಯನ್ನು ರ್ತಾಕ ಅಂತ್ಯಕ್ಕೆ ಮುಟ್ಟಿಸುವುದು ಸರ್ಕಾರದ ಉದ್ದೇಶವಾಗಿದೆ.



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + twelve =
Remember me
