| ಕೀರ್ತಿನಾರಾಯಣ ಸಿ. ಬೆಂಗಳೂರು
ಬಳಕೆಗೆ ಯೋಗ್ಯವಲ್ಲದೆ ಗುಜರಿಯಾಗಿರುವ ಹಾಗೂ ಕಳವಾಗಿರುವ ಲಾರಿ, ಬಸ್​ಗಳಿಗೆ ಆರ್​ಟಿಒ ಕಚೇರಿಗಳಲ್ಲಿ ನೋಂದಣಿ ಮಾಡಿಕೊಡುತ್ತಿರುವ ಅಂತಾರಾಜ್ಯ ಬೃಹತ್ ದಂಧೆಯ ಬಗ್ಗೆ ‘ವಿಜಯವಾಣಿ’ ಪ್ರಕಟಿಸಿದ ವಿಶೇಷ ವರದಿ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆ ತನಿಖೆಗೆ ಆದೇಶಿಸಿದೆ. ಏತನ್ಮಧ್ಯೆ, ಅಕ್ರಮವಾಗಿ ನೋಂದಣಿ ಮಾಡಲಾಗಿದೆ ಎನ್ನಲಾದ ಬಸ್​ಗಳಿದ್ದ ಹೊಸಕೋಟೆ ಸಮೀಪದ ಆವಲಹಳ್ಳಿಯಲ್ಲಿರುವ ಯಾರ್ಡ್ ಮೇಲೆ ಬೆಂಗಳೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ.
ನಾಗಾಲ್ಯಾಂಡ್ ಹಾಗೂ ಅರುಣಾಚಲಪ್ರದೇಶ ಆರ್​ಟಿಒ ಕಚೇರಿಯಿಂದ ವಾಹನ ವರ್ಗಾವಣೆಗೆ ವಿತರಣೆಯಾಗಿರುವ ನಕಲಿ ನಿರಾಕ್ಷೇಪಣಾ ಪತ್ರಗಳನ್ನು (ಎನ್​ಒಸಿ) ಆಧರಿಸಿ ಬೆಂಗಳೂರು ಹಾಗೂ ಕೋಲಾರ ಆರ್​ಟಿಒ ಕಚೇರಿಗಳಲ್ಲಿ ಲಾರಿ ಹಾಗೂ ಬಸ್​ಗಳನ್ನು ನೋಂದಣಿ ಮಾಡಿರುವ ಕುರಿತು ‘ಕದ್ದ ವಾಹನಕ್ಕೂ ನೋಂದಣಿ!’ ಶೀರ್ಷಿಕೆಯಡಿ ಶುಕ್ರವಾರ ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಸ್ತೆ ಸುರಕ್ಷತೆ ಮತ್ತು ಸಾರಿಗೆ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ತನಿಖೆಗೆ ಆದೇಶಿಸಿದ್ದಾರೆ. ಬೆಂಗಳೂರು ನಗರ ವಿಭಾಗದ ಜಂಟಿ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಹೊಸಕೇಟೆಯಲ್ಲಿ ಬಸ್​ಗಳ ರ್ಪಾಂಗ್ ಯಾರ್ಡ್ ಇರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಆಧರಿಸಿ ಹೊಸಕೋಟೆ ಉಪವಿಭಾಗದ ಡಿವೈಎಸ್ಪಿ ಶಂಕರ್​ಗೌಡ ಪಾಟೀಲ್ ನೇತೃತ್ವದಲ್ಲಿ ಯಾರ್ಡ್ ಮೇಲೆ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿವರೆಗೂ ದಾಳಿ ನಡೆಸಿತು.
ಯಾರ್ಡ್​ನಲ್ಲಿ ಬಸ್​ಗಳನ್ನು ನಿಲ್ಲಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ಬೇಕಾದಂತೆ ಬಸ್​ಗಳನ್ನು ವಿನ್ಯಾಸ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ. ಇತ್ತೀಚೆಗೆ 150 ಬಸ್​ಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡು, ಇದೇ ಯಾರ್ಡ್​ನಲ್ಲಿ ವಿನ್ಯಾಸ ಮಾಡಲಾಗುತ್ತಿದೆ. ಕಳೆದ ಒಂದೂವರೆ ಎರಡು ವರ್ಷದಿಂದ ಇದೇ ಜಾಗದಲ್ಲಿ ಯಾರ್ಡ್ ಮಾಡಿಕೊಳ್ಳಲಾಗಿದೆ. ಕೋಲಾರ ಆರ್​ಟಿಒದಲ್ಲೇ ಎಲ್ಲ ಬಸ್​ಗಳನ್ನು ನೋಂದಣಿ ಮಾಡಿರುವ ಕುರಿತು ಪ್ರಾಥಮಿಕ ಮಾಹಿತಿ ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆಂಧ್ರ ಮೂಲದ ವ್ಯಕ್ತಿಯೊಬ್ಬರು ಇದಕ್ಕೆ ಮಾಲೀಕರಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಂದ ಶಾಲಾ-ಕಾಲೇಜು ನಡೆಸುವವರು ಸೆಕೆಂಡ್ ಹ್ಯಾಂಡ್ ಬಸ್​ಗಳಿಗಾಗಿ ಸಂರ್ಪಸಿದಾಗ 10 ರಿಂದ 15 ಲಕ್ಷ ರೂ.ವರೆಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಪೊಲೀಸರು ದಾಳಿ ನಡೆಸಿದಾಗ ಮಾಲೀಕ ಇರಲಿಲ್ಲ. ಅಲ್ಲಿ ಕೆಲಸ ಮಾಡುವ ಹುಡುಗರಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಗೊತ್ತಾಗಿದೆ.
ಅಕ್ರಮ ನೋಂದಣಿ ದಂಧೆ ಬಗ್ಗೆ ತನಿಖೆ ನಡೆಸಲು ಆದೇಶಿಸ ಲಾಗಿದೆ. ಬೆಂಗಳೂರು ನಗರ ವಿಭಾಗದ ಜಂಟಿ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
|ಎಸ್.ಎನ್. ಸಿದ್ದರಾಮಪ್ಪ, ಸಾರಿಗೆ ಇಲಾಖೆ ಆಯುಕ್ತ
ತಳವೂರಿದವರ ಎತ್ತಂಗಡಿಯಾಗಲಿ…:ಕೋಲಾರ ಆರ್​ಟಿಒ ಕಚೇರಿಯಲ್ಲಿ ಬೋನಫೈಡ್ ಸರ್ಟಿಫಿಕೇಟ್ ದಂಧೆ ನಡೆದಿರುವುದು ಬೆಳಕಿಗೆ ಬಂದು, ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಈಗ ಅಕ್ರಮ ನೋಂದಣಿ ಪ್ರಕರಣ ಬಹಿರಂಗವಾಗಿದೆ. ಒಂದೇ ಕಚೇರಿಯಲ್ಲಿ ಎರಡು ಹಗರಣ ಬಹಿರಂಗವಾಗಿದೆ. ಆದಾಗ್ಯೂ ಇಲ್ಲಿನ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಿರಲಿ, ವರ್ಗಾವಣೆಯನ್ನೂ ಮಾಡಿಲ್ಲ. ಕೇಸ್ ವರ್ಕರ್ 2014ರಿಂದಲೂ ಇದೇ ಕಚೇರಿಯಲ್ಲಿದ್ದಾರೆ. ಗುಮಾಸ್ತ ಹುದ್ದೆಯಲ್ಲಿದ್ದವರು ಕ್ಯಾಶಿಯರ್ ಆಗಿದ್ದು, ಕಳೆದ 20 ವರ್ಷದಿಂದ ಇದೇ ಕಚೇರಿಯಲ್ಲಿದ್ದಾರೆ. ಕಚೇರಿ ಮುಖ್ಯಸ್ಥರ ಮಾತಿಗೂ ಕ್ಯಾರೆ ಎನ್ನುವುದಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಾರೆ. ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುವುದರಿಂದ ಕಚೇರಿ ಮುಖ್ಯಸ್ಥರೂ ಸೇರಿ ಎಲ್ಲರನ್ನೂ ಬೇರೆಡೆಗೆ ವರ್ಗಾವಣೆ ಮಾಡಲಿ ಎಂಬ ಒತ್ತಾಯ ಕೇಳಿಬಂದಿದೆ.
ಮೆಡಿಕಲ್ ಕಾಲೇಜು, ಶಾಲೆ ಹೆಸರಲ್ಲಿ ನೋಂದಣಿ:ಅರುಣಾಚಲಪ್ರದೇಶದಲ್ಲಿ ಅಸ್ತಿತ್ವದಲ್ಲೇ ಇಲ್ಲ ಎನ್ನಲಾದ ಶಾಲೆಯೊಂದರ ಹೆಸರಿನಲ್ಲಿರುವ 15ಕ್ಕೂ ಹೆಚ್ಚು ಬಸ್​ಗಳು ಇತ್ತೀಚೆಗೆ ಕೋಲಾರದಲ್ಲಿರುವ ವಿಐಪಿಎಸ್ ಶಾಲೆ ಹೆಸರಲ್ಲಿ ವರ್ಗಾವಣೆಯಾಗಿವೆ. ಈ ಶಾಲೆ ಹೆಸರಲ್ಲಿ ಈಗಾಗಲೇ 17 ಬಸ್​ಗಳಿವೆ. ಇನ್ನೂ ನಿರ್ಮಾಣ ಹಂತದಲ್ಲಿರುವ ಎಸ್​ಸಿಟಿ ಮೆಡಿಕಲ್ ಕಾಲೇಜು ಹಾಗೂ ಪಿಯು ಕಾಲೇಜಿನ ಹೆಸರಲ್ಲಿ 2 ತಿಂಗಳಲ್ಲಿ 150ಕ್ಕೂ ಹೆಚ್ಚು ಬಸ್​ಗಳು ನೋಂದಣಿಯಾಗಿವೆ. ಇಲ್ಲಿರುವುದೇ 250 ವಿದ್ಯಾರ್ಥಿಗಳು. 150 ಬಸ್​ಗಳು ಏಕೆ ಬೇಕು ಎಂಬುದು ಅಧಿಕಾರಿಗಳ ಪ್ರಶ್ನೆ.
ವಿಜಯವಾಣಿಯಲ್ಲಿ ಪ್ರಕಟವಾದ ವಿಶೇಷ ವರದಿ ಮಾಹಿತಿ ಆಧರಿಸಿ, ಬಸ್​ಗಳಿದ್ದ ಯಾರ್ಡ್​ಗೆ ತೆರಳಿ ಪರಿಶೀಲನೆ ನಡೆಸಲಾಯಿತು. ಹೊರರಾಜ್ಯಗಳಿಂದ ಅಕ್ರಮವಾಗಿ ಪ್ರವೇಶಿಸಿರುವ ಅಥವಾ ಅಕ್ರಮವಾಗಿ ನೋಂದಣಿಯಾಗಿರುವ ಅನುಮಾನ ಇದೆ. ಯಾರ್ಡ್​ನಲ್ಲಿ 20-30 ಬಸ್​ಗಳಿದ್ದು, ಅಕ್ರಮ ನೋಂದಣಿ ಬಗ್ಗೆ ಸಾಕ್ಷ್ಯಾಧಾರ ಸಂಗ್ರಹದ ನಂತರ ಎಫ್​ಐಆರ್ ದಾಖಲಿಸಿ, ತನಿಖೆ ಮುಂದುವರಿಸಲಾಗುತ್ತದೆ.
| ಶಂಕರಗೌಡ ಎ.ಪಾಟೀಲ್, ಹೊಸಕೋಟೆ ವಿಭಾಗ ಡಿವೈಎಸ್ಪಿ

ಪಿಕ್​ನಿಕ್​ಗೆ ತೆರಳಿದ್ದ 27 ವರ್ಷದ ಯುವಕ ಹೃದಯಾಘಾತದಿಂದ ಸಾವು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + nine =
Remember me
