ಮೈಸೂರು:ಜಿಲ್ಲೆಗೆ ನಂಜಾಗಿ ಕಾಡಿದ್ದ ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆ ಕಾರ್ವಿುಕರಿಗೆ ಸೋಂಕು ಹರಡಿದ ಪ್ರಕರಣ ಕೊನೆಗೂ ನಿಗೂಢವಾಗಿಯೇ ಉಳಿದಿದ್ದು, ಪ್ರಕರಣದ ಹಿನ್ನೆಲೆ ತನಿಖೆಗೆ ನೇಮಿಸಲಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಕೆ.ಹರ್ಷಗುಪ್ತಾ, ಸರ್ಕಾರಕ್ಕೆ ಅಪೂರ್ಣ ವರದಿ ಸಲ್ಲಿಸುವುದರೊಂದಿಗೆ ತನಿಖೆಗೆ ತೆರೆ ಎಳೆದಿದ್ದಾರೆ.
ಕಾರ್ಖಾನೆ ಕಾರ್ವಿುಕನಿಗೆ (ಪಿ-52) ವೈರಸ್ ಹೇಗೆ ಬಂತು ಎನ್ನುವುದನ್ನು ಪತ್ತೆ ಮಾಡಿ ವಾರದಲ್ಲಿ ವರದಿ ಸಲ್ಲಿಸುವಂತೆ, ಸೋಂಕು ನಿಯಂತ್ರಣಕ್ಕೆ ನೋಡಲ್ ಅಧಿಕಾರಿಯಾಗಿ ಹರ್ಷಗುಪ್ತಾ ನೇಮಕಗೊಂಡಿದ್ದರು. ಸರ್ಕಾರದ ಆದೇಶದ ಮೇರೆಗೆ ತನಿಖೆ ಕೈಗೊಂಡರೂ ಇತರ ಇಲಾಖೆಗಳಿಂದ ಸರಿಯಾದ ಸಹಕಾರ ದೊರೆತಿಲ್ಲ. ತಾವು ಬಯಸಿದ ಮಾಹಿತಿ, ತಾಂತ್ರಿಕ ಮಾರ್ಗದರ್ಶನ ದೊರೆತಿಲ್ಲ ಎನ್ನುವ ಮೂಲಕ ತಮಗೆ ಲಭ್ಯವಾದ ಮಾಹಿತಿಯನ್ನೇ ಹರ್ಷಗುಪ್ತಾ ಸರ್ಕಾರಕ್ಕೆ ವರದಿ ರೂಪದಲ್ಲಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಹಸಿ ಹಸಿಯಾಗಿ ಹಾವನ್ನು ತಿಂದವನ ಶ್ವಾಸಕೋಶದಲ್ಲಿ ರಾಶಿರಾಶಿ ಹುಳು!
ಪ್ರಕರಣದ ತನಿಖೆಗೆ ವೈಜ್ಞಾನಿಕ ವಿಧಾನಗಳಿವೆಯೇ ಎಂದು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್​ಗೆ ಪತ್ರ ಬರೆದಿದ್ದು, ಕೋವಿಡ್ ಸಾಂಕ್ರಾಮಿಕ ರೋಗವಲ್ಲ. ಅದು ಸರ್ವವ್ಯಾಪಿ ಪಿಡುಗು. ಇದಕ್ಕೆ ನಮ್ಮಲ್ಲಿ ಕಾಯ್ದೆಯಿಲ್ಲ. ಶಂಕಿತರು, ಸೋಂಕಿತರನ್ನು ಸಂರ್ಪಸಿ ಪೊಲೀಸ್ ಮಾದರಿ ತನಿಖೆ ಕಷ್ಟ. ಈಗ ಮೂಲ ಹುಡುಕುವುದಕ್ಕಿಂತಲೂ ಹರಡುವುದನ್ನು ತಡೆಯುವುದು ಮುಖ್ಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮುಂಬೈನಿಂದ ಮಂಡ್ಯಕ್ಕೆ ತಂದ ಮೃತ ವ್ಯಕ್ತಿಗೆ ಸೋಂಕಿತ್ತೇ? ಜಿಲ್ಲಾಧಿಕಾರಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + eight =
Remember me
