ಬೆಂಗಳೂರು:ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿ, 30 ವರ್ಷಗಳಿಂದಲೂ ಇಲ್ಲಿ ನೆಲೆಯೂರಿರುವ ಟೊಯೋಟಾ ಕಂಪನಿ ಹೂಡಿಕೆ ಎಂದಿನಂತೆ ಮುಂದುವರಿಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೊಯೋಟಾ ಕಂಪನಿಗೆ ಮಹಾರಾಷ್ಟ್ರದಲ್ಲೂ ಹೂಡಿಕೆ ಮಾಡುತ್ತಿರುವುದನ್ನು ಬೇರೆ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ. ನಮ್ಮಲ್ಲಿ ಹೂಡಿಕೆ ಮಾಡಿದ ಮಾತ್ರಕ್ಕೆ ಅವರು ಇನ್ನೊಂದು ಕಡೆ ಬಂಡವಾಳ ಹೂಡಿಬಾರದು ಎಂದೇನಿಲ್ಲ, ಮಹಾರಾಷ್ಟ್ರದಲ್ಲಿ ಹೆಚ್ಚುವರಿ ಹೂಡಿಕೆ ಮಾಡಬಹುದು ಎಂದಿದ್ದಾರೆ.
ಟೊಯೋಟಾ ಕಂಪನಿಯು 2023ರಲ್ಲಿ 3,300 ಕೋಟಿ ರೂ. ಹೂಡಿಕೆಯೊಂದಿಗೆ ಬಿಡದಿಯಲ್ಲಿ ತನ್ನ ಮೂರನೇ ಕಾರು ತಯಾರಿಕೆ ಘಟಕ ತೆರೆಯಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2022ರಲ್ಲಿ 4,100 ಕೋಟಿ ಹೂಡಿದೆ. ಕಂಪನಿ ಕೇಂದ್ರ ಕಚೇರಿ, ಸಂಶೋಧನಾ ಕೇಂದ್ರಗಳು ನಮ್ಮಲ್ಲೇ ಇವೆ ಎಂದು ಹೇಳಿದ್ದಾರೆ.
ಉದ್ಯಮಗಳು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುವುದು ಸಹಜ ವಿದ್ಯಮಾನ. ಟಯೋಟಾ ಕೂಡ ಅದೇ ರೀತಿ ನೆರೆ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದೆ. ಇದನ್ನು ಕರ್ನಾಟಕಕ್ಕೆ ಆಗುತ್ತಿರುವ ನಷ್ಟ ಎಂದು ಭಾವಿಸುವ ಅಗತ್ಯವಿಲ್ಲವೆಂದು ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮಹಾರಾಷ್ಟ್ರದಲ್ಲಿ 20 ಸಾವಿರ ಕೋಟಿ ರೂ. ಬಂಡವಾಳ ಹೂಡಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರು ತಯಾರಿಕಾ ಘಟಕ ಸ್ಥಾಪಿಸಲು ಬುಧವಾರ ಒಪ್ಪಂದ ಮಾಡಿಕೊಂಡಿದೆ.
ಮಹಾರಾಷ್ಟ್ರದ ಮರಾಠವಾಡ ಪ್ರಾಂತದ ಔರಂಗಬಾದ್‌ನ ಛತ್ರಪತಿ ಸಾಂಭಾಜಿ ನಗರದ ಗ್ರೀನ್ ಫೀಲ್ಡ್‌ನ ಕೈಗಾರಿಕಾ ಬಡಾವಣೆಯಲ್ಲಿ ಕೆಟಿಎಂಗೆ ಬೇಕಾದ ಜಮೀನು ಹಂಚಿಕೆಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಡ್ನವಿಸ್ ಅಸ್ತು ಎಂದಿದ್ದಾರೆ.
ಈ ಒಪ್ಪಂದ ಬಳಿಕ ಕೆಟಿಎಂ ಸಮೂಹದ ಉಪ ವ್ಯವಸ್ಥಾಪಕ ನಿರ್ದೇಶಕ ಸ್ವಪ್ನೇಶ್ ಮರು ಅವರು, ಕರ್ನಾಟಕದಲ್ಲಿ ತಮ್ಮ ಕಂಪನಿ ಕೇಂದ್ರ ಕಚೇರಿ ಹೊಂದಿದೆ ಎಂದು ತಿಳಿಸಿ, ಕರ್ನಾಟಕದಲ್ಲಿ ಭವಿಷ್ಯದ ಚಟುವಟಿಕೆಗಳ ಮಾಹಿತಿ ಹಂಚಿಕೊಂಡಿದ್ದಾರೆ.
2026ರ ವೇಳೆಗೆ ಬಿಡದಿ ಮೂರನೇ ಸ್ಥಾವರ
ಬಿಡದಿಯಲ್ಲಿ 3,300 ಕೋಟಿ ರೂ. ಹೂಡಿ, ಮೂರನೇ ಕಾರು ತಯಾರಿಕೆ ಘಟಕ ಸ್ಥಾಪಿಸಲಿದ್ದು, ವಾರ್ಷಿಕ ಕಾರು ಉತ್ಪಾದನೆ ಸಾಮರ್ಥ್ಯ ಒಂದು ಲಕ್ಷಕ್ಕೆ ಏರಿಕೆಯಾಗಲಿದೆ. 2026ರ ವೇಳೆಗೆ ಮೂರನೇ ಸ್ಥಾವರ ಕಾರ್ಯಾರಂಭಿಸಲಿದ್ದು ಎರಡು ಸಾವಿರ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ.
ಪ್ರಸ್ತುತ ಬಿಡದಿಯಲ್ಲಿನ ಎರಡು ಘಟಕಗಳು ವಾರ್ಷಿಕ 3.42 ಲಕ್ಷ ವಾಹನಗಳನ್ನು ಉತ್ಪಾದಿಸುವ ತಯಾರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಇಂಗಾಲದ ಪ್ರಮಾಣ ತಗ್ಗಿಸಲೆಂದು ಎಲೆಕ್ಟ್ರಿಕ್ ಘಟಕ ವಿಸ್ತರಣೆಗಾಗಿ 4,100 ಕೋಟಿ ರೂ. ಹೂಡಿಕೆ ಒಪ್ಪಂದವನ್ನು ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಳ್ಳಲಾಗಿದೆ ಎಂದು ಸ್ವಪ್ನೇಶ್ ಮರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
