ಬೆಂಗಳೂರುಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರತಿ ವರ್ಷ ನೀಡಲಾಗುವ ‘ರಮಣಶ್ರೀ ಶರಣ ಪ್ರಶಸ್ತಿ-2024’ಕ್ಕೆ ಉನ್ನತ ಸಾಧನೆ ಮಾಡಿರುವ ವ್ಯಕ್ತಿಗಳ ಹೆಸರುಗಳ ಶಿಫಾರಸುಗಳನ್ನು ಆಹ್ವಾನಿಸಿದೆ.
ಈ ಎರಡೂ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿ ವರ್ಷ ನಾಲ್ಕು ಹಿರಿಯ ಶ್ರೇಣಿ ಮತ್ತು ನಾಲ್ಕು ಉತ್ತೇಜನ ಶ್ರೇಣಿ ‘ರಮಣಶ್ರೀ ಶರಣ’ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಉತ್ತೇಜನ ಶ್ರೇಣಿ ಪ್ರಶಸ್ತಿಗೆ 45 ವರ್ಷದೊಳಗಿನವರು ಮಾತ್ರ ಅರ್ಹರಾಗಿರುತ್ತಾರೆ.
ಹಿರಿಯ ಶ್ರೇಣಿಯಲ್ಲಿ ಶರಣ ಸಾಹಿತ್ಯ ಅಧ್ಯಯನ, ಆಧುನಿಕ ವಚನ ರಚನೆ, ವಚನ ಸಂಗೀತ, ಶರಣ ಸಂಸ್ಕೃತಿ ಪ್ರಸಾರ ಮತ್ತು ಸೇವಾ ಸಂಸ್ಥೆ ಎಂಬ ನಾಲ್ಕು ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ತಲಾ 40 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ಉತ್ತೇಜನ ಶ್ರೇಣಿಯಲ್ಲಿ ಈ ನಾಲ್ಕು ವಿಭಾಗಗಳಲ್ಲಿ ತಲಾ 20 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ.ಈ ವಿಭಾಗಗಳಿಗೆ ಉನ್ನತ ಮಟ್ಟದ ಸಾಧನೆಐದಿರುವ ವ್ಯಕ್ತಿಗಳ ಹೆಸರುಗಳನ್ನು ಶಿಾರಸು ಮಾಡಬಹುದು. ತಮ್ಮ ಶಿಾರಸಿನೊಂದಿಗೆ ವ್ಯಕ್ತಿಗಳ ಪೂರ್ಣ ವಿವರ, ಪ್ರಕಟಿತ ಪುಸ್ತಕ ಮತ್ತು ಇನ್ನಿತರ ಸಾಧನೆಯ ವಿವರಗಳನ್ನು ಆ.31ರೊಳಗೆ ಕಳುಹಿಸಬೇಕು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಗದ್ದುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯರಸ್ತೆ, ಜಯನಗರ 8ನೇ ವಿಭಾಗ, ಬೆಂಗಳೂರು-560 070 ಅಥವಾ ಎಸ್. ಷಡಕ್ಷರಿ, ಅಧ್ಯಕ್ಷ, ರಮಣಶ್ರೀ ಪ್ರತಿಷ್ಠಾನ, ನಂ.16, ರಾಜಾರಾಮ, ಮೋಹನರಾಯ್ ರಸ್ತೆ, ಬೆಂಗಳೂರು-560 025 ಈ ವಿಳಾಸಕ್ಕೆ ಅರ್ಜಿಗಳನ್ನು ತಲುಪಿಸಬಹುದು. ಹೆಚ್ಚಿನ ಮಾಹಿತಿಗೆ 98450 32813 ಕರೆ ಮಾಡಬಹುದು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × five =
Remember me
