ಬೆಂಗಳೂರು:ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕೆಯುಡಬ್ಲುಎಸ್​​ಎಂಪಿ) ಅಡಿ ಬೆಂಗಳೂರಿನ ಯೋಜನಾ ಮೇಲ್ವಿಚಾರಣಾ ಘಟಕ ಹಾಗೂ ಹುಬ್ಬಳ್ಳಿ, ಬೆಳಗಾವಿ ಹಾಗೂ ಕಲಬುರಗಿಯ ಯೋಜನಾ ಅನುಷ್ಠಾನ ಘಟಕಗಳಲ್ಲಿ ಖಾಲಿ ಇರುವ ತಾಂತ್ರಿಕ, ತಾಂತ್ರಿಕೇತರ ಒಟ್ಟು 47 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ:ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು; ಸುಶಾಂತ್​ ಸಿಂಗ್​ ಬದುಕಲ್ಲಿ ರೀಲು​ ರಿಯಲ್ಲಾಗಲಿಲ್ಲ…
ಹುದ್ದೆಗಳು: ಅಧೀಕ್ಷಕ ಅಭಿಯಂತರ-3. ಕಾರ್ಯನಿರ್ವಾಹಕ ಅಭಿಯಂತರ -ಸಿವಿಲ್-2, ಇಲೆಕ್ಟ್ರಿಕಲ್-1. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ – ಸಿವಿಲ್-2, ಎಲೆಕ್ಟ್ರಿಕಲ್-2. ಸಹಾಯಕ ಅಭಿಯಂತರ- ಸಿವಿಲ್-9, – ಇಲೆಕ್ಟ್ರಿಕಲ್-3, ಎಂಐಎಸ್ ಎಕ್ಸ್​ಪರ್ಟ್-1. ವ್ಯವಸ್ಥಾಪಕ-3, ವ್ಯವಸ್ಥಾಪಕ (ಹಣಕಾಸು)/ ಹಣಕಾಸು ಪರಿಣತ-1, ಲೆಕ್ಕಪತ್ರ ಅಧೀಕ್ಷಕ/ ಲೆಕ್ಕಪತ್ರ ಅಧಿಕಾರಿ-4, ಸಾರ್ವಜನಿಕ ಸಂಪರ್ಕಾಧಿಕಾರಿ-3, ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಹಾಗೂ ಸಮುದಾಯ ಅಭಿವೃದ್ಧಿ ಪರಿಣತ-2, ಸಾಮಾಜಿಕ ಅಭಿವೃದ್ಧಿ ಮತ್ತು ಎಂ,ಇ ಪರಿಣತ-2, ಲೆಕ್ಕ ಸಹಾಯಕ-2, ಡಿಇಒ/ ಕಂಪ್ಯೂಟರ್ ಆಪರೇಟರ್-7 ಹುದ್ದೆಗಳಿವೆ.
ಇದನ್ನೂ ಓದಿ:ಮಾಜಿ ಮ್ಯಾನೇಜರ್​ ದಿಶಾ ಆತ್ಮಹತ್ಯೆ ಸುದ್ದಿ ಕೇಳಿ ತೀವ್ರ ದುಃಖಿತರಾಗಿದ್ದ ಸುಶಾಂತ್​​; ಇಂದು ತಾವೂ ಅದೇ ಹಾದಿ ತುಳಿದರು
ವಿದ್ಯಾರ್ಹತೆ, ಮೆರಿಟ್, ಅನುಭವದ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಗರಿಷ್ಠ ವಯೋಮಿತಿ 63 ವರ್ಷ ನಿಗದಿಪಡಿಸಲಾಗಿದೆ. ಸರ್ಕಾರಿ ಕಚೇರಿ, ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸಿದ ಹಾಗೂ ಕೆಯುಐಡಿಎಫ್​​ಸಿ ಸಂಸ್ಥೆಯಲ್ಲಿ ಈ ಮೊದಲು ಕಾರ್ಯನಿರ್ವಹಿಸಿ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಶೈಕ್ಷಣಿಕ ವಿದ್ಯಾರ್ಹತೆ/ ಅನುಭವ/ ಕಾರ್ಯಸ್ಥಳ/ ಕರ್ತವ್ಯಗಳ ವಿವರವನ್ನು ಸಂಸ್ಥೆಯ ವೆಬ್​ಸೈಟ್​ನಲ್ಲಿ ನೀಡಲಾಗಿದೆ. ಅರ್ಹ ಮತ್ತು ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಜೂನ್ 25 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ವೆಬ್​​ಸೈಟ್: www.kuidfc.com/careers
ಐದು ತಿಂಗಳ ಗರ್ಭಿಣಿ ಮೇಘನಾ ಸರ್ಜಾ ಆರೋಗ್ಯ ಹೇಗಿದೆ?; ಹರಿದಾಡಿದ್ದ ವದಂತಿಗಳಿಗೆ ಸಿಕ್ಕ ಉತ್ತರ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 1 =
Remember me
