ಬೆಂಗಳೂರು:ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಕಾಪೋರೇಷನ್ ಲಿಮಿಟೆಡ್ ದೇಶದಲ್ಲಿ ಉದ್ಭವಿಸಬಹುದಾದ ಎಲ್​ಪಿಜಿ ಅನಿಲದ ಹೆಚ್ಚುವರಿ ಬೇಡಿಕೆ ಪೂರೈಸಲು ಸಜ್ಜಾಗಿದೆ. ತನ್ನ ಬಾಟ್ಲಿಂಗ್ ಸ್ಥಾವರಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.50 ಹೆಚ್ಚುವರಿ ಸಿಲಿಂಡರ್ ಪೂರೈಕೆಗೆ ಸಿದ್ಧವಾಗಿದೆ.
ಹೆಚ್ಚುವರಿ ಬೇಡಿಕೆ ಪೂರೈಕೆಗಾಗಿ ಹೆಚ್ಚುವರಿ ಅವಧಿ, ರಾತ್ರಿಪಾಳಿ ಹಾಗೂ ಸಾರ್ವಜನಿಕರ ರಜಾ ದಿನದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್​ಡೌನ್ ಆರಂಭ ದಿನದಿಂದ ಈಗಿನವರೆಗೆ ದೇಶಾದ್ಯಂತ 3.38 ಕೋಟಿ ಹಾಗೂ ಪ್ರತಿ ನಿತ್ಯ 26 ಲಕ್ಷ ಎಲ್ಪಿಜಿ ಸಿಲಿಂಡರ್ ಪೂರೈಸಲಾಗುತ್ತಿದೆ.
ಎಲ್​ಪಿಜಿ ಟ್ರಕ್ ಚಾಲಕರಿಗೆ, ವಿತರಣೆ ಸಿಬ್ಬಂದಿಗೆ ವೈದ್ಯಕೀಯ ವಿಮಾ ಪಾಲಿಸಿ ತರಲು ಕ್ರಮಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ವ್ಯಾಪ್ತಿಯ 3.7 ಕೋಟಿ ಗ್ರಾಹಕರ ಖಾತೆಗಳಿಗೆ 2,780 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಸಂಸ್ಥೆಯ ಮುಖ್ಯ ಪ್ರಧಾನ ವ್ಯವಸ್ಥಾಪಕ (ಸಾಂಸ್ಥಿಕ ಸಂವಹನ) ಕೆ. ಜಾನ್ ಪ್ರಸಾದ್ ತಿಳಿಸಿದ್ದಾರೆ.
ವಿದ್ಯುತ್ ಬಿಲ್ ಪಾವತಿ ವಿನಾಯಿತಿ ಕೋರಿದವರಿಗೆ 50 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − two =
Remember me
