ಬೆಂಗಳೂರು:ಈ ಕಾಲದಲ್ಲಿ ಹಣ, ಫೋನ್​ ಅಥವಾ ಬೇರೆನಾದರೂ ದುಬಾರಿ ವಸ್ತುಗಳನ್ನು ಕಳೆದುಕೊಂಡರೆ ಅದು ನಮ್ಮ ಕೈಸೇರುವುದು ಕಷ್ಟನೇ. ಹಾಗೇ, ಸಿಕ್ಕಿದ್ದನ್ನು ತಮ್ಮದೆಂಬಂತೇ ಇಟ್ಟುಕೊಳ್ಳುವವರೇ ಹೆಚ್ಚು.
ಹೀಗಿರುವಾಗ ಇಲ್ಲೊಬ್ಬ ಕೂಲಿ ಕಾರ್ಮಿಕ ಪ್ರಾಮಾಣಿಕತೆ ಮೆರೆದಿದ್ದಾರೆ. ತಮಗೆ ಸಿಕ್ಕ ಐಫೋನ್​​ನ್ನು ಪೊಲೀಸ್​ ಠಾಣೆಗೆ ಕೊಟ್ಟು, ಮತ್ತೆ ಅದರ ವಾರಸುದಾರರಿಗೆ ಸೇರುವಂತೆ ಮಾಡಿದ್ದಾರೆ.
ಕೂಲಿಕಾರ್ಮಿಕ ಲಕ್ಷ್ಮಣ್​ ಎಂಬುವರು ಗಿರಿನಗರದ ರಾಮಚಂದ್ರಾಪುರ ಮಠದ ಬಳಿ ನಡೆದುಕೊಂಡು ಹೋಗುತ್ತಿದ್ದರು.ಈ ವೇಳೆ ಅಲ್ಲಿ 60,000 ಬೆಲೆಯ ಐಫೋನ್​ ಸಿಕ್ಕಿದೆ. ಅದನ್ನು ನೋಡಿದ ಲಕ್ಷ್ಮಣ್​, ಕೂಡಲೇ ತೆಗೆದುಕೊಂಡು ಹೋಗಿ ಗಿರಿನಗರ ಠಾಣೆಗೆ ನೀಡಿದ್ದಾರೆ. ಐಫೋನ್ ಸಂತೋಷ್​ ಎಂಬುವರಿಗೆ ಸೇರಿದ್ದಾಗಿತ್ತು.
ಗಿರಿನಗರ ಪೊಲೀಸರು ಲಕ್ಷ್ಮಣ್​ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ, ಅವರಿಗೆ ಹಾರ ಹಾಕಿ, ಶಾಲು ಹೊದೆಸಿ ಸನ್ಮಾನ ಮಾಡಿ ಕಳಿಸಿದ್ದಾರೆ. (ಏಜೆನ್ಸೀಸ್​)
ನೋಟ್‌ ಮೇಲಿನ ವೈರಸ್‌ ಹೋಗಿಸಲು ಈ ದಂಪತಿ ಏನ್‌ ಮಾಡಿದ್ರು ನೋಡಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − one =
Remember me
