ರಾಯಚೂರು:ನಿನ್ನೆ (ಡಿ. 23) ಕೇರಳದ ಕೊಚ್ಚಿಯಲ್ಲಿ ನಡೆದ 2023ನೇ ಸಾಲಿನ ಮಿನಿ ಐಪಿಎಲ್​ ಹರಾಜಿನಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿನ ಮನೋಜ್ ಭಾಂಡಗೆ ಆಯ್ಕೆಯಾಗಿದ್ದಾರೆ.
ಮನೋಜ್​ ಅವರನ್ನು 20 ಲಕ್ಷ ರೂ.ಗಳಿಗೆ ಆರ್​ಸಿಬಿ ತಂಡ ಖರೀದಿಸಿದೆ. ಇದರ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಹಾಗೂ ಮನೋಜ್​ ಅವರ ಅಭಿಮಾನಿಗಳು ಸಿಂಧನೂರಿನಲ್ಲಿ ಬೈಕ್ ರ್ಯಾಲಿ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.
ಸಿಂಧನೂರಿನ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕೆಪಿಎಲ್, ಮಹಾರಾಜ ಟ್ರೋಫಿ, ಮುಸ್ತಕ್ ಅಲಿ ಟ್ರೋಫಿಯಲ್ಲಿ ಮನೋಜ್​ ಉತ್ತಮ ಪ್ರದರ್ಶನ ನೀಡಿದ್ದರು.
ಆಲ್‌ರೌಂಡರ್ ಆಟಗಾರನಾಗಿರುವ ಮನೋಜ್​, 16 ಮತ್ತು 19 ವರ್ಷದೊಳಗಿನ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲಿ ಎಂಬುದು ಮನೋಜ್​ ಅವರ ಅಭಿಮಾನಿಗಳ ಆಶಯವಾಗಿದೆ. (ಏಜೆನ್ಸೀಸ್​)
ಅಮೆರಿಕ ಮೂಲದ ಪಾಕ್​ ನಟನನ್ನು ಮದುವೆಯಾದ ಇಮ್ರಾನ್​ ಖಾನ್​ ಮಾಜಿ ಪತ್ನಿ: ಇಬ್ಬರಿಗೂ ಇದು 3ನೇ ವಿವಾಹ!

ತಿರುಪತಿಯಿಂದ ಹಿಂದಿರುಗುವಾಗ ರಾಮನಗರದ ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು, ಕೆಲವರ ಸ್ಥಿತಿ ಗಂಭೀರ

ಪತಿ-ಪತ್ನಿ ವರ್ಗಾವಣೆ ಷರತ್ತುಬದ್ಧ ಒಪ್ಪಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − thirteen =
Remember me
