ಬೆಂಗಳೂರು ಅಕ್ಟೋಬರ್ 24: ಖಡಕ್ ಪೊಲೀಸ್ ಅಧಿಕಾರಿಯೆಂದೇ ಹೆಸರುವಾಸಿಯಾಗಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಡಿಫರೆಂಟ್ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ಈ ಫೋಟೋ ಕೇವಲ ಫ್ಯಾಷನ್ ಮಾತ್ರ ಅಲ್ಲ, ಬದಲಾಗಿ ಮಹಿಳಾ ಶಕ್ತಿ ಹಾಗೂ ಸಬಲೀಕರಣದ ಪ್ರತೀಕ’ ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.ಹಾಗಿದ್ರೆ ಡಿ. ರೂಪಾ ಈ ರೀತಿ ಫೊಟೋಶೂಟ್​ ಮಾಡಿಸಿ ಯಾರಿಗಾದ್ರೂ ಟಾಂಗ್​ ಕೊಟ್ರಾ ಅನ್ನೋ ಪ್ರಶ್ನೆ ಮೂಡಿದೆ.
ಕೆಂಪು ಬಣ್ಣದ ರೇಷ್ಮೆ ಸೀರೆ, ಮೈ ತುಂಬಾ ಆಭರಣ ತೊಟ್ಟು, ಕೈಯಲ್ಲಿ ಖಡ್ಗ ಹಿಡಿದು ವೀರ ಮಹಿಳೆಯಂತೆ ಮಿಂಚಿದ್ದಾರೆ.
‘ಹೆಣ್ಣು ನಾಲ್ಕು ಗೋಡೆಯೊಳಗೆ ಬಂಧಿಯಲ್ಲ, ಆಕೆಯೊಳಗೊಂದು ಶಕ್ತಿ ಇದೆ. ಸಮಾಜದಲ್ಲಿ ಸವಾಲುಗಳನ್ನು ಎದುರಿಸಿ ನಿಲ್ಲುವುದರ ಜೊತೆಗೆ ಯಾವುದೇ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗುತ್ತಾಳೆ ಎಂಬುದಕ್ಕೆ ಡಿ ರೂಪಾ ಉತ್ತಮ ನಿದರ್ಶನ’ ಎಂದು ಬರೆದುಕೊಂಡಿದ್ದಾರೆ.

A post shared by BHARGAVI VIKYATHI (@bhargavi_vikyathi)


ರೂಪಾ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿಯನ್ನೂ ಪಡೆದಿದ್ದು, UPSC ಪರೀಕ್ಷೆಯಲ್ಲಿ ಅಖಿಲ ಭಾರತ 43 ನೇ ರ್‍ಯಾಂಕ್​​​​ ಗಳಿಸಿದರು.
ನಂತರ ಹೈದರಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು 5ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
