ಬೆಂಗಳೂರು:ಮನುಷ್ಯ ಅಲ್ಪ ತೃಪ್ತ. ಆಹಾರ, ಬಟ್ಟೆ ಸೇರಿ ಬದುಕಲು ಬೇಕಾಗುವಷ್ಟು ಸಿಕ್ಕಿದ ಕೂಡಲೇ ಸೋಮಾರಿತನ ಬೆಳೆಯುತ್ತದೆ. ದೊಡ್ಡ ಗುರಿಯನ್ನು ಇಟ್ಟುಕೊಂಡು ಅಂದುಕೊಂಡಿದ್ದನ್ನು ಮಾಡುವವರೆಗೆ ವಿರಮಿಸುವುದಿಲ್ಲ ಎಂಬ ಗಟ್ಟಿ ನಿರ್ಧಾರ ಮಾಡಬೇಕು. ಪೂರ್ವ ತಯಾರಿ ಮಾಡುವಾಗ ಅದೃಷ್ಟ ನಂಬಿ ಸೋಮಾರಿತನಕ್ಕೆ ಬೀಳಬಾರದು. ತಾನೊಂದು ಹಣತೆಯಾಗಿದ್ದು, ಇತರ ಹಣತೆಗಳನ್ನು ಬೆಳಗುವ ಉದ್ದೇಶದಿಂದ ಊರೂರು ಸುತ್ತುತ್ತೇನೆ. ಯುವಕರಲ್ಲಿ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಶಕ್ತಿಯಿದೆ. ದೊಡ್ಡ ಸಾಧನೆ ಮಾಡದಿದ್ದರೂ, ದೇಶಕ್ಕೆ ಆಸ್ತಿಯಾಗಬೇಕು. ಹೊರೆಯಾಗಬಾರದು. ಜನ ನಮ್ಮಬಗ್ಗೆ ಆಡುವ ಮಾತುಗಳಿಗೆ ಕಿವಿಗೊಡದೆ, ನಮ್ಮಲ್ಲಿರುವ ನಕಾರಾತ್ಮಕ ಚಿಂತನೆ ಬಿಟ್ಟು, ಸಕಾರಾತ್ಮಕವಾಗಿ ಬದುಕಲು ಕಲಿಯೋಣ ಹೀಗೆ ವಿಶ್ವಾಸದ ಮಾತುಗಳನ್ನಾಡಿದವರು ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್.
ಸುಮಾರು ಒಂದೂ ಮುಕ್ಕಾಲುಗಂಟೆ ನಡೆದ ಕಾರ್ಯಕ್ರಮದಲ್ಲಿ ಎಲ್ಲಿಯೂ ಒಂದೂ ನಕಾರಾತ್ಮಕ ಚಿಂತನೆ ಇಲ್ಲದಂತೆ ತಮ್ಮ ಜೀವನಾನುಭವವನ್ನು ರವಿ ಚನ್ನಣ್ಣನವರ್ ಬಿಚ್ಚಿಟ್ಟರು. ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿ, ಒಬ್ಬ ಪೊಲಿಸ್ ಅಧಿಕಾರಿಯನ್ನು ಕಂಡು ಸಾರ್ವಜನಿಕ ಜೀವನಕ್ಕೆ ಕಾಲಿಡಬೇಕೆಂಬ ಕನಸು ಆರಂಭವಾದ ಸಮಯವನ್ನು ವಿವರಿಸಿದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವವರಲ್ಲಿ ಇರಬೇಕಾದ ಮಾನಸಿಕತೆ, ಪರೀಕ್ಷೆಗೆ ನಡೆಸಬೇಕಾದ ಸಿದ್ಥತೆ, ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಳ್ಳಲು ಬೇಕಾದ ಸೂಕ್ಷ್ಮತೆ ಹಾಗೂ ಆಯ್ಕೆಯಾದ ನಂತರದಲ್ಲಿ ಉಳಿಸಿಕೊಳ್ಳಬೇಕಾದ ಬದ್ಧತೆಗಳೆಲ್ಲವನ್ನೂ ಮನಮುಟ್ಟುವ ರೀತಿಯಲ್ಲಿ ಮಹಾನುಭಾವರ ಉಕ್ತಿಗಳ ಮೂಲಕ ವಿವರಿಸಿದರು. ಸ್ಟಾರ್ ನಟರ ಸಿನಿಮಾ ವೀಕ್ಷಿಸಿ ದಂಡುದಂಡಾಗಿ ಹೊರಬರುತ್ತಿರುವಂತೆಯೇ ರಾಮಕೃಷ್ಣಾಶ್ರಮದ ಗುರುಗಳ ಭಜನೆಯಲ್ಲಿ ಪಾಲ್ಗೊಂಡು ಯುವಕರು ಹೊರಬರುತ್ತಿರುವುದನ್ನು ಕಾಣಬೇಕೆಂಬುದು ತಮ್ಮ ಜೀವನದ ಬಯಕೆಯಾಗಿದೆ ಅಂತಹ ಮಾರ್ಗದರ್ಶನ ನಮ್ಮೆಲ್ಲ ಯುವಸಮೂಹಕ್ಕೆ ಲಭಿಸಲಿ ಎಂದರು.
ಸದ್ಯಕ್ಕಂತೂ ರಾಜಕೀಯದ ಆಲೋಚನೆ ಇಲ್ಲ:ಇತ್ತೀಚೆಗೆ ಚಿತ್ರದುರ್ಗ ಭೇಟಿಯ ಸಂದರ್ಭದಲ್ಲಿ, ನೀವು ರಾಜಕೀಯ ಪ್ರವೇಶಿಸುವ ಬಗ್ಗೆ ಚರ್ಚೆಗಳಾಗಿದ್ದವು ಎಂಬ ಕೇಳುಗರ ಪ್ರಶ್ನೆಗೆ ರವಿ ಡಿ. ಚನ್ನಣ್ಣನವರ್ ಮಾರ್ವಿುಕವಾಗಿ ಉತ್ತರಿಸಿದರು. ‘ದೇವರ ಪೂಜೆಗೆ ಆಗಮಿಸಿದ್ದೆ. ವಿದ್ಯೆ ಕಲಿತ ಮುರುಘಾಮಠದ ಗುರುಗಳ ದರ್ಶನಕ್ಕೆ ತೆರಳಿದ್ದೆನೇ ಹೊರತು ಇದಕ್ಕೆ ರಾಜಕೀಯ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ. ಸದ್ಯಕ್ಕೆ ನನಗೆ ಲಭಿಸುತ್ತಿರುವ ಗೌರವ, ಆದರಗಳೆಲ್ಲವೂ ಈಗಿನ ಖಾಕಿ ಉಡುಪಿನಿಂದಲೇ ಸಿಕ್ಕಿದೆ. ಈ ವೃತ್ತಿಯನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ’ ಎಂದರು.
ನಾಡಿನ ಯಶಸ್ವಿ ಉದ್ಯಮಿ ಡಾ. ವಿಜಯ ಸಂಕೇಶ್ವರರು ಯುವಕರಿಗೆ, ಉದ್ಯಮಿಗಳಿಗೆ ಪ್ರೇರಣೆ ಎಂದು ರವಿ. ಡಿ. ಚನ್ನಣ್ಣನವರ್ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮೂರು ಗದಗದವರ ಸುದ್ದಿಪತ್ರಿಕೆ ‘ವಿಜಯವಾಣಿ’ ಎಂಬ ಪ್ರೀತಿ ಇದೆ. ಇದನ್ನು ಆರಂಭಿಸಿದ ಡಾ. ವಿಜಯ ಸಂಕೇಶ್ವರರು, ಸೇವಾಬದ್ಧತೆಗೆ, ಶ್ರಮಜೀವಿಗಳಿಗೆ ಸ್ಪೂರ್ತಿ ನೀಡುತ್ತಿದ್ದಾರೆ. ಉದ್ಯಮಿಯಾದರೆ ಅವರ ರೀತಿ ಆಗಬೇಕು ಎಂಬಷ್ಟು ಮಹಾನ್ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಜೀವನದ ಮೊದಲ 25 ವರ್ಷಗಳು, ಆ ಸಮಯದಲ್ಲಿ ನಡೆಯುವ ಘಟನೆ, ಕಂಡ ವ್ಯಕ್ತಿಗಳನ್ನು ನಾವು ಸ್ವೀಕರಿಸುವುದರ ಮೇಲೆ ನಮ್ಮಇಡೀ ಬದುಕನ್ನು ರೂಪಿಸುತ್ತದೆ. ನಾನೊಬ್ಬ ಹಳ್ಳಿ ಹುಡುಗ, ಗಲ್ಲಿ ಹುಡುಗ, ಕನ್ನಡ ಮಾಧ್ಯಮದಲ್ಲಿ ಓದಿದವನು. ಆದರೂ ಏನಾದರೂ ಸಾಧಿಸಬೇಕು ಎಂಬ ಆಸಕ್ತಿ ಇದೆ ಎನ್ನುವಂಥ ಹುಡುಗರಿಗೆ ಸ್ಪೂರ್ತಿಯಾಗಲಿ ಎಂದೇ ನನ್ನ ಜೀವನದ ಕಥೆಯನ್ನು ಹೇಳುತ್ತಿರುತ್ತೇನೆ. ಏಕೆಂದರೆ ನನ್ನಲ್ಲೇ ನಾನು ಅವರನ್ನು ನೋಡುತ್ತೇನೆ. ಇಲ್ಲಿ ಯಾವುದೂ ಅಸಾಧ್ಯವಲ್ಲ. ನಾವು ಯೋಚನೆ ಮಾಡಿದಂತೆ ಆಗುತ್ತದೆ ಎಂದು ರವಿ ವಿಶ್ವಾಸದ ಮಾತುಗಳನ್ನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್​ನಲ್ಲಿ ನಾವು ಐವರು ಗೆಳೆಯರು ಕರೆಯದೇ ಮದುವೆಗೆ ಹೋಗುತ್ತಿದ್ದೆವು. ಐದು ಮಂದಿ ಐದು ಜತೆ ಬಟ್ಟೆಯನ್ನೇ ವಾರಕ್ಕೊಬ್ಬರಂತೆ ಹಂಚಿಕೊಂಡು ಧರಿಸುತ್ತಿದ್ದೆವು. ಧಾರವಾಡದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಕಂಡ ಜಿಲ್ಲಾಧಿಕಾರಿ ದರ್ಪಣ್ ಜೈನ್, ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರಾಗಿದ್ದ ಮಣಿವಣ್ಣನ್, ಅಂದಿನ ಎಸ್​ಪಿ ವಿಪುಲ್ ಕುಮಾರ್ ಅವರ ಕಾರ್ಯವೈಖರಿ ಜೀವನದಲ್ಲಿ ಸಾಧನೆ ಮಾಡಲು ಸ್ಪೂರ್ತಿಯಾಯಿತು ಎಂದರು.

ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಮಕ್ಕಳ ಕಳ್ಳಸಾಗಾಣಿಕೆ ಜಾಲವನ್ನು ಭೇದಿಸಿದ್ದೆವು. ಹೊರ ದೇಶಗಳಿಗೂ ಮಕ್ಕಳನ್ನು ಸಾಗಾಣಿಕೆ ಮಾಡಿ ಮಾರಾಟ ಮಾಡುವ ಜಾಲ ಅದಾಗಿತ್ತು. ಭಿಕ್ಷುಕಿಯೊಬ್ಬಳ ಮಗುವನ್ನು ಕದ್ದ ಬಗ್ಗೆ ಮಾಹಿತಿ ಕಲೆ ಹಾಕುತ್ತ ಹೋದಾಗ ಈ ಜಾಲದ ಬಗ್ಗೆ ಮಾಹಿತಿ ಸಿಕ್ಕಿತ್ತು.
ಯುಪಿಎಸ್​ಸಿ ಎಂಬುದು ಕೇವಲ ಪ್ರತಿಭೆಯನ್ನು ಆಧರಿಸಿ ನಡೆಯುವ ಪರೀಕ್ಷೆ. ನಮ್ಮ ದೇಶದಲ್ಲಿ 1 ರೂಪಾಯಿ ಸಹ ಲಂಚ ಕೊಡದೆ ಪ್ರತಿಭೆಯಿಂದಲೇ ಉನ್ನತ ಹುದ್ದೆ ಪಡೆಯುವ ಅವಕಾಶ ಯುಪಿಎಸ್​ಸಿಯಲ್ಲಿದೆ.
ವೃತ್ತಿಯಲ್ಲಿ ಮೇಲಿಲ್ಲ, ಕೀಳಿಲ್ಲ. ಸಣ್ಣ ಕೆಲಸ ಮಾಡಿದರೂ, ಅದನ್ನು ಶ್ರದ್ಧೆಯಿಂದ ಮಾಡಿ. ವೃತ್ತಿಯನ್ನು ಗೌರವಿಸಿ. ಎಲ್ಲ ಹುದ್ದೆಗಳಿಗೂ ವೃತ್ತಿ ಗೌರವವಿದ್ದು, ಅದನ್ನು ಪಾಲಿಸಬೇಕು. ಕೈಗೆಟುಕದ್ದನ್ನು ನೋಡಿ ಕೈ-ಕೈ ಹಿಸುಕಿಕೊಳ್ಳುವುದನ್ನು ಬಿಟ್ಟು ನಾವು ಮಾಡು ತ್ತಿರುವ ಕೆಲಸವನ್ನೇ ಅದ್ಭುತವಾಗಿ ಮತ್ತು ಹೆಮ್ಮೆಯಿಂದ ಮಾಡಬೇಕು.
ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಶೇ.100 ಪಾರದರ್ಶಕ. ಪ್ರಸ್ತುತ ಡಿಜಿಪಿ ಯಾವುದೇ ಒಬ್ಬ ಹುಡುಗನ ದಾಖಲೆಗಳ ಪರಿಶೀಲನೆ ಬಾಕಿ ಉಳಿದಿದ್ದರೂ, ಕರೆ ಮಾಡಿ ಪರಿಹರಿಸುತ್ತಾರೆ. ಎಲ್ಲ ವಿಭಾಗದಲ್ಲಿಯೂ ನೇಮಕಾತಿಯಲ್ಲಿ ಸಂದರ್ಶನ ಮತ್ತು ಪರೀಕ್ಷಾ ವಿಭಾಗದಲ್ಲಿ ಮಾನದಂಡ ಬದಲಾವಣೆ ಆಗುತ್ತಿದ್ದು, ಭ್ರಷ್ಟಾಚಾರಮುಕ್ತವಾಗಲಿದೆ.
ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಇಷ್ಟಪಟ್ಟ ಕೆಲಸ ಪಡೆಯುವ ಮನಸ್ಸಿದ್ದರೆ ಬೇರೆ ಅವಕಾಶಗಳನ್ನು ನಾವು ಒಪ್ಪಿಕೊಳ್ಳಬಾರದು. ನಿರ್ದಿಷ್ಟ ಗುರಿ ಬಿಟ್ಟರೆ ಬೇರೆ ಆಯ್ಕೆ ಇರಲೇಬಾರದು. ಊಟಕ್ಕೆ ತೊಂದರೆ ಇದ್ದರೆ, ಸಣ್ಣಪುಟ್ಟ ಖರ್ಚಿಗೂ ಹಣವಿಲ್ಲವೆಂದರೆ ಅನಿವಾರ್ಯವಾಗಿ ಯಾವುದಾದರೂ ಕೆಲಸಕ್ಕೆ ಹೋಗಬೇಕು.
ವಿವಿಧೆಡೆ ಕರ್ತವ್ಯದಲ್ಲಿದ್ದಾಗ ನನಗೆ ಕರೊನಾ ಸೋಂಕು ಕಾಣಿಸಿಕೊಂಡಿತು. ನಂತರ ನನ್ನಿಂದ ತಾಯಿ, ಪತ್ನಿ ಇಡೀ ಕುಟುಂಬಕ್ಕೆ ಕರೊನಾ ತಗುಲಿತು. ಗರ್ಭಿಣಿಯಾಗಿದ್ದ ನನ್ನ ಪತ್ನಿಗೆ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಮೇ 24ರಂದು 18 ಲೀಟರ್ ಆಕ್ಸಿಜನ್ ಬಳಸಲಾಯಿತು. ಸಂಕಷ್ಟದ ಪರಿಸ್ಥಿತಿಯನ್ನು ಆಕೆ ನಿಭಾಯಿಸಿದಳು. ಇದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆಗಳಲ್ಲೊಂದು. ಪತ್ನಿಗೆ ಶಸ್ತ್ರಚಿಕಿತ್ಸೆ ಮಾಡಿ ನನ್ನ ಮಗ ಜನಿಸಿದಾಗ, ನಾನು ಕರೊನಾದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮಗನನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ ಮನೋಬಲದಿಂದ ಕರೊನಾ ವಿರುದ್ಧ ಹೋರಾಡಬಹುದು.
ಪತ್ನಿ ಡಾ.ತ್ರಿವೇಣಿ, ಭೂಮಿ ಮತ್ತು ಅರ್ನ್ಯಘ ಇಬ್ಬರು ಹೆಣ್ಣುಮಕ್ಕಳು. 2 ತಿಂಗಳ ಹಿಂದೆ ಮಗ ಜನಿಸಿದ್ದಾನೆ. ತಂದೆ, ತಾಯಿ, ಸಹೋದರ ಇವರೆಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಸ್ವಾಮಿ ವಿವೇಕಾನಂದರ ಮೌಲ್ಯಾಧಾರಿತ ಅಂಶಗಳನ್ನು ಮಕ್ಕಳ ಮುಂದೆ ಆಗಾಗ ಹೇಳುತ್ತೇನೆ.
ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಮಕ್ಕಳ ಕಳ್ಳಸಾಗಾಣಿಕೆ ಜಾಲವನ್ನು ಭೇದಿಸಿದ್ದೆವು. ಹೊರ ದೇಶಗಳಿಗೂ ಮಕ್ಕಳನ್ನು ಸಾಗಾಣಿಕೆ ಮಾಡಿ ಮಾರಾಟ ಮಾಡುವ ಜಾಲ ಅದಾಗಿತ್ತು. ಭಿಕ್ಷುಕಿಯೊಬ್ಬಳ ಮಗುವನ್ನು ಕದ್ದ ಬಗ್ಗೆ ಮಾಹಿತಿ ಕಲೆ ಹಾಕುತ್ತ ಹೋದಾಗ ಈ ಜಾಲದ ಬಗ್ಗೆ ಮಾಹಿತಿ ಸಿಕ್ಕಿತ್ತು.
ಸಿನಿಮಾನೇ ಉಸಿರು; ಪ್ರಜಾಕೀಯ ಜತೆಜತೆಗೇ ಸಾಗುತ್ತದೆ: ರಿಯಲ್​ ಸ್ಟಾರ್ ಉಪೇಂದ್ರ

ಎಚ್ಚರಿಕೆ ವಹಿಸದಿದ್ದರೆ ಮೂರನೇ ಅಲೆ ನಿಶ್ಚಿತ: ಜಯದೇವ ಆಸ್ಪತ್ರೆಯ ಡಾ.ಸಿ.ಎನ್. ಮಂಜುನಾಥ್ ಆತಂಕ

ಎಚ್​ಡಿಕೆ ಕೃಷಿ ಚಿಂತನೆ, ಆಡಳಿತ ಪರಿಕಲ್ಪನೆ: ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ

ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ…

ಅಂಗೈಯಲ್ಲೇ ಅರಳಿಕಟ್ಟೆ!; ಕ್ಲಬ್​ಹೌಸ್-ಸ್ಪೇಸ್​ನಲ್ಲಿ ಮಾತು ಮಾತು ಮಾತು..

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:10 − three =
Remember me
