ಬೆಂಗಳೂರು:ಬೆಂಗಳೂರು ಸೇಫ್ ಸಿಟಿ ಪ್ರಾಜೆಕ್ಟ್​ನಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಮತ್ತು ಹೇಮಂತ್ ನಿಂಬಾಳ್ಕರ್ ನಡುವಿನ ಕಿತ್ತಾಟ ಮತ್ತಷ್ಟು ತಾರಕಕ್ಕೇರಿದೆ. ರೂಪಾ ಹೆಸರು ಪ್ರಸ್ತಾಪಿಸದೆ ಸೋಷಿಯಲ್ ಮೀಡಿಯಾಗಳ ಸುದ್ದಿಗೆ ಪ್ರತಿಕ್ರಿಯಿಸಲ್ಲವೆಂದು ಸುದ್ದಿಗೋಷ್ಠಿ ಆಯೋಜಿಸಿದ್ದ ನಿಂಬಾಳ್ಕರ್​ಗೆ ಟಿಕ್ ಟಿಕ್ ಟಿಕ್ ಬರುತಿದೆ ಕಾಲ. ಮುಗಿವುದು ನಿನ್ನ ಮೋಸದ ಜಾಲ ಎಂದು ಹಾಡು ಹಾಡುವ ಮುಖಾಂತರ ರೂಪಾ ಟಾಂಗ್ ಕೊಟ್ಟಾರೆ.
ಯೋಜನೆ ಬಗ್ಗೆ ರೂಪಾ ಆರೋಪಕ್ಕೆ ಸ್ಪಷ್ಟೀಕರಣ ನೀಡಲೆಂದು ನಿಂಬಾಳ್ಕರ್ ಸುದ್ದಿಗೋಷ್ಠಿ ಕರೆದಿದ್ದರು. ಸಾಕ್ಷ್ಯಾಧಾರಗಳಿಲ್ಲದೆ ಜಾಲತಾಣದಲ್ಲಿ ಬಿತ್ತರಿಸಿದ ಕೆಲ ಮಾಹಿತಿಗಳಿಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದಿದ್ದಾರೆ. ಎಲ್ಲೂ ನೇರವಾಗಿ ರೂಪಾ ಅವರ ಹೆಸರನ್ನಾಗಲಿ ಅಥವಾ ಅವರ ಹುದ್ದೆಯ ಬಗ್ಗೆಯಾಗಲಿ ಇಡೀ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪ ಮಾಡಲಿಲ್ಲ.
ಇನ್ನೊಂದೆಡೆ ಭಾನುವಾರವೇ ಟೌನ್​ಹಾಲ್​ನಲ್ಲಿ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೂಪಾ, ಟಿಕ್ ಟಿಕ್ ಟಿಕ್ ಬರುತಿದೆ ಕಾಲ. ಮುಗಿವುದು ನಿನ್ನ ಮೋಸದ ಜಾಲ. ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ ಅಧಿಕಾರಿ..ಗೌರವ ನಿನಗಿಲ್ಲ. ಎಚ್ಚರಿಕೆ..ದುಷ್ಟನೆ ಎಚ್ಚರಿಕೆ. ಟಿಕ್ ಟಿಕ್ ಟಿಕ್ ಟಿಕ್…. ಎಂದು ಒಂದು ಪ್ಯಾರಾ ಹಾಡಿದರು. ಕೊನೆಗೆ ಎಲ್ಲರಿಗೂ ಧನ್ಯವಾದಗಳು. ಅರ್ಥ ಆಗೋರಿಗೆ ಆಗುತ್ತೆ ಎಂದು ವ್ಯಂಗ್ಯವಾಗಿ ಟಾಂಗ್ ನೀಡಿದ್ದಾರೆ.
ಐಪಿಎಸ್​ಗಳ ಮಧ್ಯೆ ಐಎಎಸ್ ಎಂಟ್ರಿ:ಐಪಿಎಸ್​ಗಳ ಟೆಂಡರ್ ಗಲಾಟೆಗೆ ಈಗ ಐಎಎಸ್ ಅಧಿಕಾರಿ ಎಂಟ್ರಿ ಕೊಟ್ಟಿದ್ದಾರೆ. ಟೆಂಡರ್ ವಿನ್ಯಾಸ ತಯಾರಿಸುತ್ತಿದ್ದ ದೆಹಲಿ ಕಂಪನಿಗೆ ಕರೆ ಮಾಡಿ ಯೋಜನೆ ಬಗ್ಗೆ ಗೌಪ್ಯ ಮಾಹಿತಿ ಕೇಳಿದ್ದು ಏಕೆಂದು ಸ್ಪಷ್ಟನೆ ನೀಡುವಂತೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಡಿ.ರೂಪಾಗೆ ಪತ್ರ ಬರೆದಿರುವುದು ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.ರಾಜ್ಯ ಸರ್ಕಾರದ ಎಲ್ಲ ಷರತ್ತುಗಳನ್ನು ಒಳಗೊಂಡಂತೆ ನ.11ರಂದು ಕಾಲ್-3 ಟೆಂಡರ್ ಕರೆಯಲಾಗಿದ್ದು, ಅದು ಸದ್ಯ ಚಾಲ್ತಿಯಲ್ಲಿದೆ. 2021 ಜ.8ರ ವರೆಗೆ ಕಾಲ್-3 ಟೆಂಡರ್​ನಲ್ಲಿ ಅರ್ಹತೆ ಹೊಂದಿರುವ ಕಂಪನಿಗಳಿಗೆ ಬಿಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.| ಹೇಮಂತ್ ನಿಂಬಾಳ್ಕರ್ಎಡಿಜಿಪಿ (ಆಡಳಿತ)
ನಿರ್ಭಯಾ ಸೇಫ್ ಸಿಟಿ ಟೆಂಡರ್ ವಿಚಾರದಲ್ಲಿ ಅಧಿಕಾರಿಗಳಿಬ್ಬರ ನಡುವಿನ ವಿವಾದದ ಕುರಿತು ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಜತೆಗೆ ರ್ಚಚಿಸಿರುವೆ. ಅಧಿಕಾರಿಗಳಿಬ್ಬರಿಗೆ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಸೂಕ್ತ ಆದೇಶ ಹಾಗೂ ಉಪದೇಶ ಎರಡನ್ನೂ ನೀಡುತ್ತಾರೆ.| ಬಸವರಾಜ ಬೊಮ್ಮಾಯಿಗೃಹ ಸಚಿವ
ಎರಡು ಬಾರಿ ಟೆಂಡರ್ ರದ್ದಾಗಲು ಕಾರಣವಾದ ದೂರಿಗೆ ನಿಂಬಾಳ್ಕರ್ ಸೂಕ್ತ ಉತ್ತರ ನೀಡಲಿಲ್ಲ. ದೊಡ್ಡ ಮೊತ್ತದ ಟೆಂಡರ್​ನಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಗಳಿವೆ. ಸರ್ಕಾರಕ್ಕೆ ಈ ಬಗ್ಗೆ ತಪ್ಪು ಮಾಹಿತಿ ಸಲ್ಲಿಕೆಯಾಗಿದೆ. ಹೇಮಂತ್ ನಿಂಬಾಳ್ಕರ್ ಸರ್ಕಾರದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.| ಡಿ.ರೂಪಾಗೃಹ ಇಲಾಖೆ ಕಾರ್ಯದರ್ಶಿ
ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen − 9 =
Remember me
