| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಇರಾನಿನ ಅಧಿಕಾರಿಗಳು ಇರಾನಿನ ಫತ್ತಾ ಕ್ಷಿಪಣಿ 870 ಮೈಲಿಗಳನ್ನು ತಲುಪುವ ಸಾಮರ್ಥ್ಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದು, ಇಸ್ರೇಲ್ ಮೇಲೆ 400 ಸೆಕೆಂಡುಗಳಲ್ಲಿ ದಾಳಿ ಮಾಡಬಹುದು ಎಂದು ಹೇಳಿದ್ದಾರೆ.
ಇರಾನ್ ತಾನು ದೇಶೀಯವಾಗಿ ತಯಾರಿಸಿರುವ ಮೊದಲ ಕ್ಷಿಪಣಿಯ ಕುರಿತು ಮಾಹಿತಿ ನೀಡಿ, ಇಸ್ರೇಲಿನಲ್ಲಿ ಹೊಸ ಭಯ, ತಲ್ಲಣ ಮೂಡಿಸಿದೆ. ಇರಾನ್ ಈ ಮೊದಲು ಇಸ್ರೇಲ್ ಮೇಲೆ ತಾನು 400 ಸೆಕೆಂಡುಗಳೊಳಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವುದಾಗಿ ಘೋಷಿಸಿತ್ತು. ಇರಾನಿನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (ಐಆರ್‌ಜಿಸಿ) ಒಂದು ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಜೂನ್ 6ರಂದು ಪ್ರದರ್ಶಿಸಿದ್ದು, ಇದೊಂದು ವಿಶಿಷ್ಟ ಕ್ಷಿಪಣಿಯಾಗಿದ್ದು, ಇದನ್ನು ಪ್ರಸ್ತುತ ಲಭ್ಯವಿರುವ ಯಾವುದೇ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಿಂದ ತಡೆಯಲು ಸಾಧ್ಯವಾಗುವುದಿಲ್ಲ ಎಂದಿತ್ತು.
ಈ ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಗೆ ಫತ್ತಾ ಎಂದು ಹೆಸರಿಡಲಾಗಿದೆ. ಪರ್ಷಿಯನ್ ಭಾಷೆಯಲ್ಲಿ ಫತ್ತಾ ಎಂದರೆ ಜಯಶಾಲಿ ಎಂದು ಅರ್ಥವಿದೆ. ಈ ಕ್ಷಿಪಣಿ ಮ್ಯಾಕ್ 15ರ ವೇಗದಲ್ಲಿ (15,000 ಕಿಲೋಮೀಟರ್, ಅಥವಾ 5,145 ಮೀಟರ್ ಅಥವಾ 16,880 ಅಡಿಗಳು ಪ್ರತಿ ಸೆಕೆಂಡಿಗೆ) ಚಲಿಸುವ ಸಾಮರ್ಥ್ಯ ಹೊಂದಿದ್ದು, 1,400 ಕಿಲೋಮೀಟರ್ (870 ಮೈಲಿ) ವ್ಯಾಪ್ತಿ ಹೊಂದಿದೆ. ಇದರಲ್ಲಿರುವ ಸೆಕೆಂಡರಿ ನಾಸಲ್ ಹಾಗೂ ಘನ ಇಂಧನಗಳು ಇದು ಹೆಚ್ಚಿನ ಕುಶಲತೆಯಿಂದ ಚಲಿಸುವಂತೆ ಮಾಡುತ್ತವೆ.
ಇದರ ಕುರಿತು ಮಾಹಿತಿ ನೀಡಿದ ಐಆರ್‌ಜಿಸಿ, ಫತ್ತಾಹ್ ಕ್ಷಿಪಣಿ ಟಿಎಚ್ಎಡಿ, ಎಆರ್‌ಓ, ಪ್ಯಾಟ್ರಿಯಟ್, ಏಜಿಸ್, ಜಿಬಿಐ, ಐರನ್ ಡೋಮ್, ಫ್ಲಾಖನ್, ದಾವೂದ್ ಹಾಗೂ ಬಾರಕ್ ಸೇರಿದಂತೆ ಎಲ್ಲ ವಾಯು ರಕ್ಷಣಾ ವ್ಯವಸ್ಥೆಗಳನ್ನು ಭೇದಿಸಬಲ್ಲದು ಎಂದಿದೆ.
ಶಬ್ದದ ವೇಗಕ್ಕಿಂತ ಐದು ಪಟ್ಟು ಅಥವಾ ಅದಕ್ಕಿಂತಲೂ ಹೆಚ್ಚಿನ ವೇಗದಿಂದ ಚಲಿಸುವ ಕ್ಷಿಪಣಿಗಳನ್ನು ಹೈಪರ್‌ಸಾನಿಕ್ ಕ್ಷಿಪಣಿ ಎನ್ನಲಾಗುತ್ತದೆ. ಇವುಗಳು ತಪ್ಪಿಸಿಕೊಂಡು ಚಲಿಸುವ ಸಾಮರ್ಥ್ಯ ಹೊಂದಿದ್ದು, ಯಾವುದೇ ರಕ್ಷಣಾ ವ್ಯವಸ್ಥೆಗಾಗಲಿ, ರೇಡಾರ್‌ಗಾಗಲಿ ಇದನ್ನು ಪತ್ತೆ ಹಚ್ಚುವುದು ಕಷ್ಟಕರವಾಗುತ್ತದೆ.
ಜಗತ್ತಿನಲ್ಲಿ ಅಮೆರಿಕ, ರಷ್ಯಾ, ಚೀನಾ ಹಾಗೂ ಉತ್ತರ ಕೊರಿಯಾಗಳು ಮಾತ್ರವೇ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಹೊಂದುವಲ್ಲಿ ಯಶಸ್ಸು ಸಾಧಿಸಿವೆ ಎಂದು ನಂಬಲಾಗಿದೆ. ಭಾರತವೂ ಇಂತಹ ಆಯುಧವನ್ನು ಅಭಿವೃದ್ಧಿ ಪಡಿಸುವಲ್ಲಿ ನಿರತವಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಪಾಶ್ಚಾತ್ಯ ರಾಷ್ಟ್ರಗಳು ಮತ್ತು ಇಸ್ರೇಲ್ ಸತತವಾಗಿ ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳ ಕುರಿತು ಕಳವಳ ವ್ಯಕ್ತಪಡಿಸುತ್ತಾ ಬಂದಿದ್ದು, ಇರಾನ್ ತನ್ನ ಕ್ಷಿಪಣಿಗಳನ್ನು ಅಣ್ವಸ್ತ್ರ ಸಿಡಿತಲೆಗಳನ್ನು ಸಾಗಿಸಲು ಬಳಸಬಹುದು ಎಂದು ಅನುಮಾನ ವ್ಯಕ್ತಪಡಿಸಿವೆ. ಆದರೆ ತೆಹ್ರಾನ್ ಇದನ್ನು ಸದಾ ಅಲ್ಲಗಳೆದಿದೆ.
ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಇರಾನಿನ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ, ಹಸ್ಸನ್ ತೆಹ್ರಾನಿ ಮೊಘದ್ದಮ್ ಅವರ ಸಂಸ್ಮರಣಾ ಸಮಾರಂಭದಲ್ಲಿ, ಐಆರ್‌ಜಿಸಿ ಏರೋಸ್ಪೇಸ್ ವಿಭಾಗ ಮುಖ್ಯಸ್ಥ ಆಮಿರ್ ಅಲಿ ಹಾಜಿಜಾ಼ದೆ ಅವರು ಹೈಪರ್‌ಸಾನಿಕ್ ಕ್ಷಿಪಣಿ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದ್ದರು. 2011ರಲ್ಲಿ, ಇರಾನಿನ ಕ್ಷಿಪಣಿ ನೆಲೆಯೊಂದರಲ್ಲಿ ಸಂಭವಿಸಿದ ಅವಘಡದಲ್ಲಿ ಮೊಘದ್ದಮ್ ಅವರು ಮತ್ತು ಹನ್ನೆರಡು ಇರಾನಿಯನ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಸದಸ್ಯರು ಸಾವಿಗೀಡಾಗಿದ್ದರು. ಆ ಸ್ಫೋಟವನ್ನು ಒಂದು ಆಕಸ್ಮಿಕ ಎಂದು ಕರೆಯಲಾಯಿತಾದರೂ, ಒಂದಷ್ಟು ಸಂಘಟನೆಗಳು ಈ ಅವಘಡದ ಹಿಂದೆ ಇಸ್ರೇಲಿನ ಕೈವಾಡವಿದೆ ಎಂದು ಆರೋಪಿಸಿದ್ದರು.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ, ಇರಾನ್ ತನ್ನ ನಾಲ್ಕನೇ ತಲೆಮಾರಿನ ಖೈಬರ್ ಕ್ಷಿಪಣಿಯ ಪರೀಕ್ಷೆ ನಡೆಸಿರುವುದಾಗಿ ಘೋಷಿಸಿತು. ಭೂಮಿಯಿಂದ ಭೂಮಿಗೆ ದಾಳಿ ನಡೆಸುವ ಈ ಬ್ಯಾಲಿಸ್ಟಿಕ್ ಕ್ಷಿಪಣಿ 2,000 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, 1,500 ಕೆಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಇರಾನ್ ಬಳಿ ಮಧ್ಯಪೂರ್ವದಲ್ಲೇ ಅತ್ಯಧಿಕ ಕ್ಷಿಪಣಿಗಳ ಸಂಗ್ರಹವಿದೆ. ಈ ಸಂಗ್ರಹದಲ್ಲಿ ಇರಾನ್ ತನ್ನ ಶತ್ರುವಾದ ಇಸ್ರೇಲ್ ಮತ್ತು ಅಲ್ಲಿನ ಅಮೆರಿಕಾದ ನೆಲೆಗಳ ಮೇಲೆ ದಾಳಿ ನಡೆಸಬಲ್ಲ ಕ್ಷಿಪಣಿಗಳೂ ಸೇರಿವೆ. ಇಸ್ಲಾಮಿಕ್ ರಿಪಬ್ಲಿಕ್ ಸರ್ಕಾರ ತಾನು ಸ್ವಯಂ ರಕ್ಷಣೆಗಾಗಿ ಕ್ಷಿಪಣಿ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸುವುದಾಗಿ ಘೋಷಿಸಿತ್ತು.
ಮಧ್ಯಪೂರ್ವದಲ್ಲಿ, ಅಮೆರಿಕಾದೊಡನೆ ಸ್ನೇಹ ಹೊಂದಿರುವ, ಗಲ್ಫ್ ರಾಷ್ಟ್ರಗಳು ತಮ್ಮ ರಕ್ಷಣೆಗಾಗಿ ಪ್ಯಾಟ್ರಿಯಟ್ ಕ್ಷಿಪಣಿ ವ್ಯವಸ್ಥೆಯನ್ನು ಜಾರಿಗೆ ತಂದವು. ಅದರೊಡನೆ, ಈ ಪ್ರಾಂತ್ಯದಲ್ಲಿ ಇರಾನಿನ ಪರಮ ಶತ್ರು ಎಂದೇ ಪರಿಗಣಿಸಲಾಗಿರುವ ಇಸ್ರೇಲ್ ತನ್ನ ರಕ್ಷಣೆಯನ್ನು ಇನ್ನಷ್ಟು ಬಲಪಡಿಸಿತ್ತು. ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಪರಮಾಣು ಒಪ್ಪಂದದಿಂದ ಹಿಂದೆ ಸರಿಯಲು ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳ ಪಾತ್ರವೂ ಮಹತ್ವದ್ದಾಗಿತ್ತು. ಅಮೆರಿಕಾ ಪರಮಾಣು ಒಪ್ಪಂದದಿಂದ ಹೊರನಡೆದ ಬಳಿಕ, ಟ್ರಂಪ್ ಇರಾನ್ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರಿದರು.
ಹೈಪರ್‌ಸಾನಿಕ್ ಕ್ಷಿಪಣಿ ಅಥವಾ ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್ (ಎಚ್‌ಜಿವಿ) ಮ್ಯಾಕ್ 5 ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ. ಭಾರತದ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ (ಐಸಿಬಿಎಂ) ಅಗ್ನಿ-5 ಸಹ ಈ ವೇಗದಲ್ಲಿ ಚಲಿಸಬಲ್ಲದಾದರೂ, ಅದು ಊಹಿಸಬಹುದಾದ ಪಥದಲ್ಲಿ ಚಲಿಸುತ್ತದೆ. ಆ ಮೂಲಕ ಅದನ್ನು ತಡೆಯುವುದು ಸಾಧ್ಯವಾಗುತ್ತದೆ. ಇದಕ್ಕೆ ಹೋಲಿಸಿದರೆ, ಹೈಪರ್‌ಸಾನಿಕ್ ಕ್ಷಿಪಣಿಗಳು ಅಥವಾ ಎಚ್‌ಜಿವಿಗಳು ಅತ್ಯಂತ ಕುಶಲವಾಗಿ ಚಲಿಸುವುದರಿಂದ ಶತ್ರುಗಳ ರಕ್ಷಣಾ ವ್ಯವಸ್ಥೆ ಮತ್ತು ರೇಡಾರ್‌ಗಳನ್ನು ತಪ್ಪಿಸಿ ಮುಂದುವರಿಯಲು ಸಾಧ್ಯವಾಗುತ್ತದೆ.
ಭಾರತವೂ ಪ್ರಸ್ತುತ ಹಲವು ಹೈಪರ್‌ಸಾನಿಕ್ ಆಯುಧಗಳನ್ನು ಅಥವಾ ಹೈಪರ್‌ಸಾನಿಕ್ ಟೆಕ್ನಾಲಜಿ ಡೆಮಾನ್ಸ್‌ಟ್ರೇಟರ್ ವೆಹಿಕಲ್ (ಎಚ್ಎಸ್‌ಟಿಡಿವಿ) ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ಇವು ಮ್ಯಾಕ್ 6ರ ವೇಗದಲ್ಲಿ ಸಾಗುವ ನಿರೀಕ್ಷೆಗಳಿವೆ. ಎಚ್ಎಸ್‌ಟಿಡಿವಿ 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಗಳಿದ್ದು, ಇದನ್ನು ಭಾರತದ ಭವಿಷ್ಯದ ಹೈಪರ್‌ಸಾನಿಕ್ ಆಯುಧಗಳಿಗೆ ಅಗತ್ಯವಿರುವ ತಂತ್ರಜ್ಞಾನವನ್ನು ಪರೀಕ್ಷಿಸಲು ಬಳಸಲಾಗುತ್ತದೆ.
ದಲಿತರಿಗೆ ಪ್ರವೇಶವಿಲ್ಲ: ಸುಳ್ಳು ಸುದ್ದಿ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಆದಿಪುರುಷ್​ ಚಿತ್ರತಂಡ ಗರಂ!

ನಟಿ ಶ್ರುತಿ ಹರಿಹರನ್ ಮೀಟೂ ಪ್ರಕರಣಕ್ಕೆ ಹೊಸ ತಿರುವು: ಪೊಲೀಸರಿಂದ ಮತ್ತೆ ನೋಟಿಸ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × four =
Remember me
