ವಿಜಯಪುರ:ಮಾಜಿ ಯೋಧ, ಇಂಡಿಯನ್ ರಿಸರ್ವ್​ ಬೆಟಾಲಿಯನ್​ (ಐಆರ್​ಬಿ) ಪೊಲೀಸ್ ರಾಜಕುಮಾರ ಲಕ್ಷ್ಮಣ ಗೋಟ್ಯಾಳ (42) ಹೃದಯಾಘಾತದಿಂದ ಸಾವಿಗೀಡಾಗಿದರು. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದ ನಿವಾಸಿಯಾಗಿರುವ ಇವರು ಜಾರ್ಖಂಡ್​​ನಲ್ಲಿ ಹೃದಯಾಘಾತಕ್ಕೀಡಾಗಿದ್ದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ನಿವೃತ್ತಿ ಬಳಿಕ ಐಆರ್‌ಬಿ ಪೊಲೀಸ್‌ ಹುದ್ದೆಗೆ ಸೇರ್ಪಡೆಯಾಗಿದ್ದರು. ಹಾಲಿ ವಿಜಯಪುರದ ರಾಮದೇವನಗರದಲ್ಲಿ ವಾಸವಾಗಿದ್ದ ರಾಜಕುಮಾರ ಗೋಟ್ಯಾಳ ಇವರು ವಿಜಯಪುರ ಜಿಲ್ಲೆಯ ಐಆರ್‌ಬಿ ಪೊಲೀಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ:ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಜಾರ್ಖಂಡ್‌ಗೆ ಇಲಾಖೆ ವತಿಯಿಂದ ತರಬೇತಿಗೆ ತೆರಳಿದ್ದರು. ಏಪ್ರಿಲ್​ ಮೊದಲ ವಾರದಲ್ಲಿ ತರಬೇತಿ ಮುಕ್ತಾಯಗೊಳ್ಳಲಿದ್ದು ತವರಿಗೆ ವಾಪಸ್‌ ಆಗಲಿದ್ದರು. ಅಷ್ಟೊತ್ತಿಗಾಗಲೇ ತರಬೇತಿ ಸಮಯದಲ್ಲೇ ಶನಿವಾರ ಬೆಳಗ್ಗೆ 8ಕ್ಕೆ ಹೃದಯಾಘಾತಕ್ಕೆ ಒಳಗಾದರು. ಪತ್ನಿ, ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಇವರು ಅಗಲಿದ್ದಾರೆ. ಭಾನುವಾರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಗಂಡನನ್ನು ಬಿಟ್ಟು ಇಬ್ಬಿಬ್ಬರ ಜತೆ ಲಿವಿಂಗ್ ಟುಗೆದರ್​; ಅವಳಿಗಾಗಿ ಒಬ್ಬನಿಂದ ಇನ್ನೊಬ್ಬನ ಕೊಲೆಯತ್ನ!

ಆ ವಸ್ತುವಿನ ಮೇಲಿದೆ ‘ಐ ಲವ್ ಪಾಕಿಸ್ತಾನ್​’ ಎಂಬ ಬರಹ; ಶುರುವಾಗಿದೆ ಮೂಲದ ಹುಡುಕಾಟ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − one =
Remember me
