ಬೆಂಗಳೂರು:ನಾರಾಯಣ ಬಲದಂಡೆ ಮುಖ್ಯ ಹಾಗೂ ಉಪ ನಾಲೆಗಳ ಆಧುನೀಕರಣ ಕಾಮಗಾರಿಗಳಲ್ಲಿ ಅಕ್ರಮ, ಕರ್ತವ್ಯದಲ್ಲಿ ನಿರ್ಲಕ್ಷ್ಯದಡಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್‌ಎಲ್)ದ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿವಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಸರ್ಕಾರ ಆದೇಶಿಸಿದೆ.
ನೀರಾವರಿ ನಿಗಮಗಳ ಅಧ್ಯಕ್ಷರೂ ಆದ ಸಿಎಂ ಸಿದ್ದರಾಮಯ್ಯ ಅವರು, ಕೆಲವು ದಿನಗಳ ಹಿಂದೆ ಕೆಬಿಜೆಎನ್‌ಎಲ್ ಸೇರಿ ಮೂರು ನೀರಾವರಿ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು.
ಇದೇ ವೇಳೆ ಎನ್‌ಆರ್‌ಬಿಸಿ ಅವ್ಯವಹಾರಗಳಲ್ಲಿ ಎಂ ಡಿ ಎಸಗಿದ ಲೋಪದೋಷಗಳನ್ನು ಗಮನಿಸಿ ಸೇವಾ ನಿಯಮಾವಳಿ ಪ್ರಕಾರ ಶಿಸ್ತಿನ ಕ್ರಮಕ್ಕೆ ಸೂಚಿಸಿದ್ದರು. ಬೆನ್ನಲ್ಲೇ ಬಿ.ಎಸ್.ಶಿವಕುಮಾರ್ ವಿರುದ್ಧ ಇಲಾಖೆ ವಿಚಾರಣೆ ಬಾಕಿಯಿರಿಸಿ, ಸಸ್ಪೆಂಡ್ ಮಾಡಿದ ಆದೇಶವನ್ನು ಜಲ ಸಂಪನ್ಮೂಲ ಇಲಾಖೆ ಗುರುವಾರ ಹೊರಡಿಸಿದೆ.
ಕೃಷ್ಣಾ ಮೊದಲನೇ ನ್ಯಾಯಾಧಿಕರಣ ರಾಜ್ಯಕ್ಕೆ ಹಂಚಿಕೆ ಮಾಡಿದ ನೀರು ಬಳಕೆಯಲ್ಲಿ ಎನ್‌ಆರ್‌ಬಿಸಿ ಮುಖ್ಯ ಹಾಗೂ ವಿತರಣಾ ಕಾಲುವೆಗಳು ಪ್ರಮುಖವಾಗಿವೆ. ಮುಖ್ಯ ಕಾಲುವೆ ಕಿ.ಮೀ. 0 ರಿಂದ 95ರವರೆಗೆ ಆಧುನೀಕರಣ ಕಾಮಗಾರಿಗಳ ಪ್ಯಾಕೇಜ್, ಮುಖ್ಯ ಕಾಲುವೆಯಡಿ ಬರುವ 1 ರಿಂದ 18 ಉಪ/ಸೀಳು ನಾಲೆಗಳ ರಚನೆ, ವಿಸ್ತರಣೆ, ನವೀಕರಣ ಮತ್ತು ಬಲವರ್ಧಿಸಿ ಒಟ್ಟಾರೆ 1.14 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿದೆ.
ಆಧುನೀಕರಣ/ ಬಲವರ್ಧನೆಯಡಿ ಕಾಮಗಾರಿಗಳ ಪ್ಯಾಕೇಜ್, ಸಿದ್ಧಪಡಿಸಿದ ದರಪಟ್ಟಿ, ಮಾಪಕ ಪುಸ್ತಕಗಳಲ್ಲಿ ನಮೂದು, ಮುರಮ್ ಸಾಗಣೆ, ಏರಿ ನಿರ್ಮಾಣ ಮುಂತಾದವುಗಳಲ್ಲಿ ಲೋಪ, ದೋಷಗಳನ್ನು ಅಂದಾಜು ಸಮಿತಿ ಪತ್ತೆ ಹಚ್ಚಿತ್ತು.
ಗುತ್ತಿಗೆದಾರರ ಎಸಗಿದ ಈ ಅವ್ಯವಹಾರಗಳಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಆರ್ಥಿಕ ನಷ್ಟ ಉಂಟಾಗಿರುವುದನ್ನು ಗಮನಿಸಿತ್ತು. ಈ ಲೋಪದೋಷಗಳನ್ನು ಪ್ರಮಾಣೀಕರಿಸುವ ಸಲುವಾಗಿ ತಾಂತ್ರಿಕ ತಜ್ಞರ ಸಮಿತಿಯೊಂದನ್ನು 2022ರ ಜೂ.10ರಂದು ರಚಿಸಿ ಸರ್ಕಾರ ಆದೇಶಿಸಿ, ವರದಿ ಸಲ್ಲಿಸಲು ತಿಳಿಸಿತ್ತು.
ಸಮಿತಿಯೊಂದಿಗೆ ಸಮನ್ವಯ ಸಾಧಿಸಿ ಶೀಘ್ರವಾಗಿ ವರದಿ ಪಡೆಯುವಲ್ಲಿ ಬಿ.ಎಸ್.ಶಿವಕುಮಾರ್ವಿಲರಾಗಿದ್ದಾರೆ. ಮೇಲುಸ್ತುವಾರಿ, ಅನುಷ್ಠಾನ ಪರಿವೀಕ್ಷಣೆ ಇತ್ಯಾದಿ ಪ್ರಕ್ರಿಯೆಗಳಲ್ಲಿ ಗಂಭೀರ ಅವ್ಯವಹಾರ ನಡೆಸಿದ್ದಾರೆ.ಅಷ್ಟೇ ಅಲ್ಲ, ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ತಜ್ಞರ ಸಮಿತಿ ವರದಿ ಸಲ್ಲಿಸುವ ಮುನ್ನವೇ ಗುತ್ತಿಗೆದಾರರಿಗೆ ಹಣ ಪಾವತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಇಲಾಖೆ ಹೊರಡಿಸಿದ ಆದೇಶದಲ್ಲಿ ವಿವರಿಸಿದೆ.
ಕೆಬಿಜೆಎನ್‌ಎಲ್ ಅಧ್ವಾನವನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ವಿವಿಧ ನೀರಾವರಿ ನಿಗಮಗಳ ಅಕ್ರಮಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ಇದೇ ಸಭೆಯಲ್ಲಿ ತೆಗೆದುಕೊಂಡಿದ್ದಾರೆ.
ಆಯಾ ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿ ಅಚ್ಚುಕಟ್ಟು ಪ್ರದೇಶ ಸೃಜನೆ, ಚಾಲ್ತಿ ನೀರಾವರಿ ಜಾಲ ಬಲವರ್ಧನೆ ಇನ್ನಿತರ ಕಾಮಗಾರಿಗಳ ಪ್ರಸ್ತಾವನೆಗೆ ಅಡ್ಡ ತಪಾಸಣೆ ವ್ಯವಸ್ಥೆ ಮಾಡಿದ್ದಾರೆ. ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ನೀರಾವರಿ ನಿಗಮಗಳ ಉದ್ದೇಶಿತ ಪ್ರಸ್ತಾವನೆಗಳ ತಪಾಸಣೆ, ಅನುಮೋದನೆ ಕಡ್ಡಾಯಗೊಳಿಸಿದ್ದಾರೆ.
ಪರಿಶೀಲನಾ ಸಮಿತಿ ಒಪ್ಪಿಗೆ ನಂತರವಷ್ಟೇ ನಿಗಮಗಳ ಆಡಳಿತ ಮಂಡಳಿ ನಿರ್ದೇಶಕರ ಸಭೆಗೆ ತಂದು ಅನುಮೋದನೆ ಪಡೆಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 2 =
Remember me
