ಬಾಗಲಕೋಟೆ:ಉತ್ತರ ಕರ್ನಾಟಕ ನೀರಾವರಿ ಯೋಜನೆಗಳನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ್ ನೇತೃತ್ವದಲ್ಲಿ ಉ.ಕ. ಸ್ವಾಭಿಮಾನ ವೇದಿಕೆ ಕೈಗೊಂಡಿರುವ ಟ್ರ್ಯಾಕ್ಟರ್ ರ‍್ಯಾಲಿ ಶನಿವಾರ ನಾಲ್ಕು ದಿನ ಪೂರೈಸಿದೆ. ಗದಗ ಜಿಲ್ಲೆಯ ನರಗುಂದದಿಂದ ಆರಂಭವಾಗಿರುವ ಈ ಸಂಕಲ್ಪ ಯಾತ್ರೆಗೆ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದ್ದು, ಹೋರಾಟಗಾರರಲ್ಲೂ ಹುಮ್ಮಸ್ಸು ಹೆಚ್ಚಿಸಿದೆ. ಶನಿವಾರ ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆ ಪ್ರವೇಶಿಸಿದ ಸಂಕಲ್ಪ ಯಾತ್ರೆಯು ಹೊಸೂರ ಕ್ರಾಸ್, ಗಲಗಲಿ, ರಬಕವಿ ಕ್ರಾಸ್, ಹಂಚಿನಾಳ ಕ್ರಾಸ್, ಮುಂಡಗನೂರ, ಚಿನಕುಂಡಿ, ಜಕನೂರ, ಜಮಖಂಡಿ ತಾಲೂಕು ಹಾಯ್ದು ಮುಧೋಳ ತಾಲೂಕು ಪ್ರವೇಶಿಸಿ ವಾಸ್ತವ್ಯ ಮಾಡಿದೆ.
ಎಸ್ಸಾರ್ಪಿ ಗುಡುಗು:ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಆರ್. ಪಾಟೀಲ್, ಪ್ರಾದೇಶಿಕ ಅಸಮಾನತೆ ವಿರುದ್ಧ ಉತ್ತರದ ಜನರು ರೋಸಿ ಹೋಗಿದ್ದಾರೆ. ಅವರ ತಾಳ್ಮೆಯ ಕಟ್ಟೆ ಒಡೆದುಹೋಗಿದೆ. ಇನ್ನು ಸಹಿಸಲು ಅಸಾಧ್ಯ ಎನ್ನುವ ತೀರ್ವನಕ್ಕೆ ಬಂದಿದ್ದಾರೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಗುಡುಗಿದರು. ರಾಜ್ಯದ ಒಟ್ಟು ಜಲಸಂಪನ್ಮೂಲದಲ್ಲಿ ಶೇ.68 ಹೊಂದಿರುವ ಉತ್ತರ ಕರ್ನಾಟಕದಲ್ಲಿ ಇವತ್ತಿಗೂ ಜನರು ಉದ್ಯೋಗವಿಲ್ಲದೆ ಗುಳೆ ಹೋಗುವುದು ತಪ್ಪಿಲ್ಲ ಅಂದರೆ ಏನು ಅರ್ಥ? ಜಲಸಂಪನ್ಮೂಲ ಕಡಿಮೆ ಇರುವ ಹಳೇ ಮೈಸೂರು ಭಾಗ ನೀರಾವರಿ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿ ಇದೆ ಎಂಬ ಅಂಕಿ-ಅಂಶಗಳನ್ನು ಜನರ ಎದುರು ಅನಾವರಣಗೊಳಿಸಿದರು.
ಉತ್ತರ ಕರ್ನಾಟಕದ ಮಂದಿ ಗುಳೆ ಹೋಗುವುದಕ್ಕೆ ಅಂತ್ಯ ಹಾಡಲು ನಮ್ಮ ಭಾಗದ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು. ಇದಕ್ಕೆ ರಾಜ್ಯ ಸರ್ಕಾರ ಎರಡು ವರ್ಷ ಬಜೆಟ್​ನಲ್ಲಿ ಶೇ.15 ಅನುದಾನ ಮೀಸಲಿಟ್ಟು, ಖರ್ಚು ಮಾಡಿದರೆ ನಮ್ಮ ಬೇಡಿಕೆಯಾದ ಮೂರು ನೀರಾವರಿ ಯೋಜನೆಗಳು ಪೂರ್ಣಗೊಳ್ಳುತ್ತವೆ. ಅದರಿಂದ ಉತ್ತರದ ಜನರು ಶಾಶ್ವತವಾಗಿ ಗುಳೆ ಹೋಗುವುದು ತಪ್ಪುತ್ತದೆ. ಬೇರೆ ಭಾಗಗಳ ಜನರೇ ಉದ್ಯೋಗ ಹುಡುಕಿಕೊಂಡು ನಮ್ಮಲ್ಲಿಗೆ ಬರುವಂತಾಗುತ್ತದೆ ಎಂದರು.
ಎಲ್ಲೆಡೆ ಅದ್ದೂರಿ ಸ್ವಾಗತ:ಸ್ವಾತಂತ್ರ್ಯ ಲಭಿಸಿ 75 ವರ್ಷ ಆಗಿದ್ದರಿಂದ ರ್ಯಾಲಿಗೆ 75 ಟ್ರ್ಯಾಕ್ಟರ್ ಇರಲಿ ಎಂದು ಎಸ್.ಆರ್.ಪಾಟೀಲ್ ಬಯಸಿದ್ದರು. ಆದರೆ, ಜನರು ಮುನ್ನೂರಕ್ಕೂ ಅಧಿಕ ಟ್ರ್ಯಾಕ್ಟರ್​ಗಳನ್ನು ತಂದಿದ್ದಾರೆ. ಮೊದಲ ದಿನ ಗದಗ ಜಿಲ್ಲೆಯ ನರಗುಂದದಿಂದ ಆರಂಭವಾದ ರ್ಯಾಲಿಗೆ ಪ್ರತಿ ಹಳ್ಳಿ, ಪಟ್ಟಣ, ನಗರ ಪ್ರದೇಶಗಳಲ್ಲಿ ಜನರು ಅದ್ದೂರಿಯಾಗಿ ಬರಮಾಡಿಕೊಳ್ಳುತ್ತಿದ್ದಾರೆ. ‘ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸಾಕು, ಇನ್ನು ಇದನ್ನು ಸಹಿಸಲ್ಲ. ಹೋರಾಟಕ್ಕೆ ನಾಯಕತ್ವ ಸಿಕ್ಕಿದೆ. ಮುಂದುವರಿಯಿರಿ. ನಾವು ಬರುತ್ತೇವೆ’ ಎಂದು ಅಭಯ ನೀಡುತ್ತಿದ್ದಾರೆ.
ಉತ್ತರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಬೇಕು ಎನ್ನುವ ಮುಖ್ಯ ಉದ್ದೇಶದಿಂದಲೇ ಈ ಹೋರಾಟ ಹಮ್ಮಿಕೊಂಡಿದ್ದೇನೆ. ಇದು ಪಕ್ಷಾತೀತ, ಜಾತ್ಯತೀತ, ಧರ್ವತೀತ ಹೋರಾಟವಾಗಿದೆ. ಉತ್ತರಕ್ಕೆ ಅನ್ಯಾಯವಾದರೆ ಅದು ಸ್ವಪಕ್ಷವೇ ಅಗಲಿ, ಆಡಳಿತ ಪಕ್ಷವೇ ಆಗಲಿ ಅದನ್ನು ಸಹಿಸಲು ಇನ್ನೂ ಸಾಧ್ಯವಿಲ್ಲ.
|ಎಸ್.ಆರ್. ಪಾಟೀಲಅಧ್ಯಕ್ಷ, ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ
ಇಂದು ಸಮಾರೋಪ:ಎಸ್.ಆರ್.ಪಾಟೀಲ್ ಕಳೆದ ವರ್ಷ ಅಕ್ಟೋಬರ್​ನಲ್ಲಿ ಕೃಷ್ಣಾ ಯೋಜನೆ ಇಟ್ಟುಕೊಂಡು ಘಟಪ್ರಭಾ ನದಿಯಿಂದ ಕೃಷ್ಣಾ ನದಿವರೆಗೆ ‘ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ’ ಎಂಬ 20 ಕಿ.ಮೀ. ಪಾದಯಾತ್ರೆ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಇದೀಗ 2ನೇ ಹಂತದಲ್ಲಿ ಐದು ದಿನಗಳ ಟ್ರ್ಯಾಕ್ಟರ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ನಾಲ್ಕು ದಿನ ಮುಗಿದಿದ್ದು, ಭಾನುವಾರ ಕೊನೆಯ ದಿನವಾಗಿದೆ. ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಬಾಪೂಜಿ ಅಂತಾರಾಷ್ಟ್ರೀಯ ಶಾಲೆಯ ಮೈದಾನದಲ್ಲಿ ಬೃಹತ್ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ನಾಡಿನ 50ಕ್ಕೂ ಹೆಚ್ಚು ಮಠಾಧೀಶರು, 40ಸಾವಿರಕ್ಕೂ ಅಧಿಕ ಅನ್ನಾದಾತರು ಪಾಲ್ಗೊಳ್ಳಲಿದ್ದಾರೆ.
ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಎದುರೇ ಕಲ್ಲು ತೂರಾಟ; ವಾಹನ ಪಲ್ಟಿ ಮಾಡಿ ಆಕ್ರೋಶ, ಪರಿಸ್ಥಿತಿ ಉದ್ವಿಗ್ನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 2 =
Remember me
