ಬೆಂಗಳೂರು:ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರಲ್ಲದವರಿಗೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡುವ ವಿಚಾರದಲ್ಲಿ ಸದ್ಯಕ್ಕೆ ಒಮ್ಮತ ಮೂಡದ ಕಾರಣ ನೀರಾವರಿ ಜಮೀನನ್ನು ತಿದ್ದುಪಡಿ ವ್ಯಾಪ್ತಿಯಿಂದ ಹೊರಗಿಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಲವು ತೋರಿದ್ದಾರೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ತರುವ ಪ್ರಸ್ತಾಪ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ಬಗ್ಗೆ ಸುದ್ದಿಗಾರರಿಗೆ ವಿವರಣೆ ನೀಡಿದರು. ಭೂ ಸುಧಾರಣೆ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿಟ್ಟು ರ್ಚಚಿಸಿ ಒಮ್ಮತಕ್ಕೆ ಬರಬೇಕೆಂದಿದ್ದೆವು. ಆದರೆ, ತಕ್ಷಣಕ್ಕೆ 3-4 ತಿಂಗಳಲ್ಲಿ ಈ ಅವಕಾಶ ಇಲ್ಲದ ಕಾರಣ ಸುಗ್ರೀವಾಜ್ಞೆ ತರಲು ಯೋಜಿಸಿದ್ದೆವು. ಖಾಸಗಿಯವರೂ ಕೃಷಿ ಭೂಮಿ ಖರೀದಿಸಲು ಅವಕಾಶ ಕೊಡುವಾಗ ನೀರಾವರಿ ಜಮೀನು ಹೊರಗಿಡಬೇಕೆಂಬ ಪ್ರಸ್ತಾಪವಾಯಿತು. ಮುಖ್ಯಮಂತ್ರಿಯವರೇ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ನೀರಾವರಿ ಜಮೀನು ಎಂದರೆ ಯಾವುದು ಎಂಬ ವರ್ಗೀಕರಣ ಮಾಡಬೇಕಾಗುತ್ತದೆ ಎಂಬ ಚರ್ಚೆ ನಡೆದಿದ್ದಾಗಿ ಸಚಿವ ಮಾಧುಸ್ವಾಮಿ ತಿಳಿಸಿದರು.
ತಕ್ಷಣಕ್ಕೆ ಕಾನೂನಿಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಮಾಡಬೇಕಾಗಬಹುದು. ಈ ವೇಳೆ ಅಚ್ಚುಕಟ್ಟು ವ್ಯಾಪ್ತಿಗೆ ರಿಯಾಯಿತಿ ನೀಡಲಾಗುತ್ತದೆ. ಇದರ ಜತೆಗೆ ಖಾಸಗಿಯವರು ಭೂಮಿ ಅಡ ಇಡಲು ಅವಕಾಶ ನೀಡಬೇಕೆ ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಸದ್ಯಕ್ಕೆ ತೀರ್ಮಾನ ಕೈಗೊಳ್ಳದೆ ತಡೆ ಹಿಡಿಯಲಾಯಿತು ಎಂದರು.
ಇದನ್ನೂ ಓದಿ:ಮನೆ ತೊರೆದಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನೆರವಾದ ‘ವಿಜಯವಾಣಿ’
ಭೂ ಸುಧಾರಣೆ ಕಾಯ್ದೆ ಮೂಲಕ ಶ್ರೀಮಂತರು, ರಿಯಲ್ ಎಸ್ಟೇಟ್​ನವರಿಗೆ ಸರ್ಕಾರ ಅನುಕೂಲ ಮಾಡಲು ಹೊರಟಿದೆ. ಬಿಜೆಪಿ ಸರ್ಕಾರಕ್ಕೆ ನಿಜವಾಗಿಯೂ ತಾಕತ್ತಿದ್ದರೆ ಕಾಯ್ದೆ ಜಾರಿ ಮಾಡಿ ತೋರಿಸಲಿ.| ಕಾಗೋಡು ತಿಮ್ಮಪ್ಪಮಾಜಿ ಸಚಿವ
ಲೀಸ್ ಭೂಮಿ ಮಾರಾಟಕ್ಕೆ ನಿರ್ಧಾರ:ಶಿಕ್ಷಣ, ಆರೋಗ್ಯ, ಧಾರ್ವಿುಕ, ಕೃಷಿ ಸೇರಿ ಕೆಲವು ಕ್ಷೇತ್ರಗಳಿಗೆ ಸರ್ಕಾರ ಗುತ್ತಿಗೆ ಮೇಲೆ ತನ್ನ ಜಾಗವನ್ನು ನೀಡಿದ್ದು, ಕಾಲಕಾಲಕ್ಕೆ ಗುತ್ತಿಗೆಯನ್ನು ನವೀಕರಣ ಮಾಡಿಕೊಂಡು ಬಂದಿದೆ. ಇದೀಗ ಗುತ್ತಿಗೆಯಲ್ಲಿರುವವರಿಗೇ ಷರತ್ತು ಬದ್ಧವಾಗಿ ಆ ಜಾಗವನ್ನು ಮಾರಾಟ ಮಾಡಲು ನಿರ್ಧರಿಸುವ ಮೂಲಕ ಸಂಪನ್ಮೂಲ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರ ಯಾವ ಉದ್ದೇಶಕ್ಕಾಗಿ ಭೂಮಿ ನೀಡಿತ್ತೋ ಅದೇ ಉದ್ದೇಶಕ್ಕೆ ಬಳಸುತ್ತಿದ್ದರಷ್ಟೇ ಔಟ್​ರೇಟ್ (ಹೆಚ್ಚಿನ ದರ) ನಿಗದಿ ಮಾಡಿ ಮಂಜೂರು ಮಾಡಲಿದೆ. ಕ್ಲಬ್ ಮತ್ತು ಆ ರೀತಿಯ ಉದ್ದೇಶ ಹೊಂದಿರುವ ಲೀಸ್ ಜಮೀನುಗಳನ್ನು ಕಾಯಂ ಮಾಡಿಕೊಡುವುದಿಲ್ಲ. ಕೈಗಾರಿಕಾ, ಶಿಕ್ಷಣ ಸಂಸ್ಥೆ, ವೈದ್ಯಕೀಯ, ಬೇಸಾಯ, ಧಾರ್ವಿುಕ ಸಂಸ್ಥೆ ಇತ್ಯಾದಿಗಳಿಗೆ ಲೀಸ್ ಮೇಲೆ ಜಮೀನು ಪಡೆದವರಿಗೆ ಕಾಯಂ ಮಾಡಿಕೊಡಲಾಗುವುದು. ಇವರು ನಿರಂತರವಾಗಿ ನವೀಕರಣಕ್ಕೆ ಅರ್ಜಿ ಸಲ್ಲಿಸುತ್ತಲೇ ಇರುತ್ತಾರೆ. ಸರ್ಕಾರ ನವೀಕರಣ ಮಾಡಿಕೊಡುತ್ತಲೇ ಇರುತ್ತದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಸರ್ಕಾರದಿಂದ ಜಮೀನು ಪಡೆದು ಬಳಸದೇ ಉಳಿಸಿಕೊಂಡಿರುವವರು ಮತ್ತು ಅನ್ಯ ಉದ್ದೇಶಗಳಿಗೆ ಬಳಸಿದ್ದರೆ ಅಂತಹವರ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲು ತೀರ್ವನಿಸಲಾಗಿದೆ. ಮುಂದೆ ಸಹ ಖರೀದಿಸಿದವರು ಯಾವ ಉದ್ದೇಶಕ್ಕೆ ಗುತ್ತಿಗೆಗೆ ಪಡೆದಿದ್ದಾರೋ ಅದೇ ಉದ್ದೇಶಕ್ಕೆ ಬಳಸಬೇಕೆಂಬ ಷರತ್ತನ್ನೂ ಹಾಕಲಾಗುತ್ತದೆ ಎಂದರು.
ಬೊಕ್ಕಸ ತುಂಬುವ ದಾರಿ:ಲಾಕ್​ಡೌನ್​ನಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಇಲ್ಲದಾಗಿರುವ ಕಾರಣ ಅಕ್ರಮ ಸಕ್ರಮ ಜಾರಿ ಮಾಡಲಾಗಿತ್ತು. ಇದು ಅನುಷ್ಠಾನ ಹಂತದಲ್ಲಿರುವಾಗಲೇ ಗುತ್ತಿಗೆಗೆ ನೀಡಿದ ಜಾಗವನ್ನು ಗುತ್ತಿಗೆ ಪಡೆದವರಿಗೇ ಮಾರಾಟ ಮಾಡಲು ಸರ್ಕಾರ ಮುಂದಾಗಿದೆ. ಇದೂ ಸಹ ಬೊಕ್ಕಸ ತುಂಬಿಕೊಳ್ಳಲು ಮತ್ತೊಂದು ದಾರಿ ಎಂಬುದು ಸ್ಪಷ್ಟ. ಇದೇ ವೇಳೆ, ಸಂಘ ಸಂಸ್ಥೆಗಳಿಗೆ ಗುತ್ತಿಗೆ ನೀಡಿದ ಸರ್ಕಾರ ಜಾಗ ವಾಪಸ್ ಪಡೆಯುವುದಕ್ಕಂತೂ ಸಾಧ್ಯವಿಲ್ಲ. ಅದರಿಂದ ಆದಾಯವೂ ಬರುವುದಿಲ್ಲ. ಒಮ್ಮೆಲೆ ಮಾರಾಟ ಮಾಡಿದರೆ ಆಪತ್ಕಾಲದಲ್ಲಾದರೂ ಸರ್ಕಾರಕ್ಕೆ ಉಪಯೋಗವಾಗುತ್ತದೆ ಎಂಬ ವಿಶ್ಲೇಷಣೆಯೂ ಇದೆ.
ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರು ಜಪ್ತಿ ಮಾಡಿದ ಚೆನ್ನೈ ಪೊಲೀಸ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 + eight =
Remember me
