ಕೊಪ್ಪಳ:ಕೋವಿಡ್​ ಸೋಂಕಿಗೆ ಒಳಗಾಗಿ ಮೃತಪಟ್ಟರೂ, ಸೋಂಕು ದೃಢಪಟ್ಟ ವರದಿ ಇಲ್ಲದಿದ್ದಲ್ಲಿ ಅಂಥ ಸಾವನ್ನು ಕೋವಿಡ್​ ಸಾವೆಂದು ಪರಿಗಣಿಸುತ್ತಿಲ್ಲ. ಹೀಗಾಗಿ ಸರ್ಕಾರ ಬಿಪಿಎಲ್​ಕುಟುಂಬಗಳಿಗೆ ಘೋಷಿಸಿರುವ ಪರಿಹಾರ ಇಂಥವರಿಗೆ ಅನ್ವಯವಾಗುತ್ತ ಎಂಬ ಗೊಂದಲ ಮೂಡಿದೆ.
ಬಿಪಿಎಲ್​ ಕುಟುಂಬದ ಸದಸ್ಯ ಕೋವಿಡ್​ಗೆ ಬಲಿಯಾಗಿದ್ದರೆ ಅಂಥ ಕುಟುಂಬಕ್ಕೆ ಸೌಲಭ್ಯ ನೀಡವುದಾಗಿ ಸಿಎಂ ತಿಳಿಸಿದ್ದಾರೆ. ಆದರೆ, ಕೋವಿಡ್​ ಡೆತ್​ ಪರಿಗಣನೆಯಲ್ಲಿ ಕೆಲ ಗೊಂದಲಗಳಿದ್ದು, ಕೆಲ ಕುಟುಂಬಗಳಿಗೆ ಪರಿಹಾರ ಪಡೆಯುವಲ್ಲಿ ತೊಡಕುಂಟು ಮಾಡುವಂತಿದೆ. ರೂಪಾಂತರಗೊಂಡ ವೈರಸ್​ ರ್ಯಾಪಿಡ್​ ಆ್ಯಂಟಿಜೆನ್​ ಟೆಸ್ಟ್​ ಹಾಗೂ ಆರ್​ಟಿಪಿಸಿಆರ್​ನಲ್ಲೂ ಕೆಲವೊಮ್ಮೆ ಪತ್ತೆಯಾಗಲಿಲ್ಲ. ಬಳಿಕ ಎಚ್​ಆರ್​ ಸಿಟಿ ಸ್ಕಾ$ನ್​ ಮಾಡಿದಾಗ ಶ್ವಾಸಕೋಶಕ್ಕೆ ಹಾನಿ ಮಾಡುತ್ತಿರುವುದು ಬೆಳಕಿಗೆ ಬಂತು. ಸರ್ಕಾರವೂ ಪರೀೆಯಲ್ಲಿ ಕೋವಿಡ್​ ದೃಢಪಡದಿದ್ದಲ್ಲಿ ಸ್ಕಾನ್​ ವರದಿ ಆಧರಿಸಿ ಚಿಕಿತ್ಸೆ ನೀಡುವಂತೆ ಸೂಚಿಸಿದೆ. ಅದರಂತೆ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಆದರೆ, ಸ್ಕಾನ್​ ವರದಿ ಆಧರಿಸಿ ಚಿಕಿತ್ಸೆ ಪಡೆದವರನ್ನು ಹಾಗೂ ಮೃತಪಟ್ಟವರನ್ನು ಕೋವಿಡ್​ ರೋಗಿ ಅಥವಾ ಕೋವಿಡ್​ ಡೆತ್​ ಎಂದು ಪರಿಗಣಿಸುತ್ತಿಲ್ಲ. ಬದಲಿಗೆ ಕೋವಿಡ್​ ಲೈಕ್​ ಇಲ್ನೆಸ್​ (ಕರೊನಾ ಮಾದರಿ ಕಾಯಿಲೆ) ಎಂದು ವೈದ್ಯರು ವ್ಯಾಖ್ಯಾನಿಸುತ್ತಿದ್ದಾರೆ.
ಪೋರ್ಟಲ್​ನಲ್ಲಿ ದಾಖಲಾಗುತ್ತಿಲ್ಲ: ರ್ಯಾಪಿಡ್​ ಆ್ಯಂಟಿಜೆನ್​ ಟೆಸ್ಟ್​ ಅಥವಾ ಆರ್​ಟಿಪಿಸಿಆರ್​ ಪರೀೆಗೆ ಒಳಪಟ್ಟರೆ, ರೋಗಿಗೆ ಎಸ್​ಆರ್​ಎ್​ ಐಡಿ ಬರುತ್ತದೆ. ವರದಿಯಲ್ಲಿ ಕೆಲವೊಮ್ಮೆ ನೆಗೆಟಿವ್​ ಬಂದು, ಸ್ಕಾನ್​ನಲ್ಲಿ ಸೋಂಕು ಪತ್ತೆಯಾದಲ್ಲಿ ಅಂಥವರಿಗೆ ಎಸ್​ಆರ್​ಎ್​ ಐಡಿ ಸಿಗುವುದಿಲ್ಲ. ಐಡಿ ಇಲ್ಲದಿದ್ದಲ್ಲಿ ಅದನ್ನು ಅಧಿಕೃತವಾಗಿ ಕೋವಿಡ್​ ಪ್ರಕರಣ, ಮೃತಪಟ್ಟಲ್ಲಿ ಕೋವಿಡ್​ ಮರಣ ಎಂದು ಘೋಷಿಸುತ್ತಿಲ್ಲ. ಸದ್ಯ ದಾಖಲೆ ಪ್ರಕಾರ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 33 ಸಾವಿರವಿದೆ. ಐಡಿ ಇಲ್ಲದೆ ಕೊಪ್ಪಳ ಜಿಲ್ಲೆಯೊಂದರಲ್ಲೇ 40ಕ್ಕೂ ಹೆಚ್ಚು ರೋಗಿಗಳು ಮೃತಪಟ್ಟಿದ್ದಾರೆ. ಕೋವಿಡ್​ ಪೋರ್ಟಲ್​ನಲ್ಲಿ ಇವರ ಮಾಹಿತಿ ದಾಖಲಾಗದ ಕಾರಣ ಸರ್ಕಾರದ ಪರಿಹಾರ ಇಂತಹ ಕುಟುಂಬಗಳಿಗೆ ಸಿಗುವುದೇ ಎಂಬ ಪ್ರಶ್ನೆ ಮೂಡಿಸಿದೆ. ಅಧಿಕಾರಿಗಳ ಬಳಿಯೂ ಇದಕ್ಕೆ ಉತ್ತರವಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
