ಪಂಕಜ ಕೆ.ಎಂ./ಸತೀಶ್ ಕೆ.ಬಳ್ಳಾರಿಬೆಂಗಳೂರು
ರಾಜ್ಯದಲ್ಲಿ ಕರೊನಾ ಸೋಂಕಿತರ ಪೈಕಿ 840 (ಶೇ.8.4) ಜನರಿಗೆ ಯಾವ ಮೂಲದಿಂದ ಸೋಂಕು ಹರಡಿದೆ ಎಂಬುದೇ ಪತ್ತೆಯಾಗಿಲ್ಲ. ಪ್ರಯಾಣದ ಇತಿಹಾಸ ಹಾಗೂ ಸೋಂಕಿತರ ಸಂಪರ್ಕ ಇಲ್ಲದವರಿಗೂ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸೋಂಕು ಸಮುದಾಯಕ್ಕೆ ಹರಡಿದೆಯೇ ಎಂಬ ಅನುಮಾನ ಮತ್ತಷ್ಟು ದಟ್ಟವಾಗಿದೆ. ಸೋಂಕು ಹರಡುವಿಕೆ ಪ್ರಮಾಣ ಸರಾಸರಿ ಶೇ.4.9 ಇದ್ದು, ಒಬ್ಬ ಸೋಂಕಿತನಿಂದ ಐವರಿಗೆ ಹರಡುತ್ತಿದೆ.
ಸೋಂಕಿಗೆ ಒಳಗಾದವರಲ್ಲಿ ಈವರೆಗೆ, ವಿದೇಶ ಅಥವಾ ಹೊರ ರಾಜ್ಯದಿಂದ ಬಂದ ಪ್ರಯಾಣಿಕರು ಹಾಗೂ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವವರೇ ಹೆಚ್ಚಾಗಿದ್ದಾರೆ. 15 ದಿನದಿಂದ ಈಚೆಗೆ ಯಾವುದೇ ಪ್ರಯಾಣ ಅಥವಾ ಸೋಂಕಿತರ ಸಂಪರ್ಕವಿಲ್ಲದವರಿಗೂ ಸೋಂಕು ಕಾಣಿಸಿ ಕೊಳ್ಳುತ್ತಿದೆ. ಜೂ.25ರ ಅಂತ್ಯಕ್ಕೆ ರಾಜ್ಯದಲ್ಲಿ 10,560 ಪ್ರಕರಣಗಳು ಕಂಡು ಬಂದಿದ್ದು, ಇದರಲ್ಲಿ 840ಕ್ಕೂ ಹೆಚ್ಚು ಜನರಿಗೆ ಸೋಂಕು ಯಾವ ಮೂಲದಿಂದ ಬಂದಿದೆ ಎಂಬುದೇ ಪತ್ತೆಯಾಗಿಲ್ಲ.
ಇನ್ನೊಂದೆಡೆ ಒಟ್ಟು ಸೋಂಕಿತರಲ್ಲಿ 2,139 ಮಂದಿಗೆ ಕೋವಿಡ್ ರೋಗಿಗಳಿಂದ ಸೋಂಕು ಹರಡಿದೆ. ಇದೀಗ ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿರುವ ಶೀತಜ್ವರ (ಐಎಲ್​ಐ) ಹಾಗೂ ತೀವ್ರ ಉಸಿರಾಟದ ತೊಂದರೆ (ಸಾರಿ) ಇರುವವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇಂತಹ ಸೋಂಕಿತರ ಶೀಘ್ರ ಪತ್ತೆ ಆಗದಿದ್ದರೆ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಜೂ.25ರವರೆಗೆ ಕಂಡುಬಂದ ಸೋಂಕಿತರಲ್ಲಿ ಸಾರಿ ಹಾಗೂ ಐಎಲ್​ಐ ಮಾದರಿಯ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ 950 ಜನರಿಗೆ (ಶೇ.9) ಕರೊನಾ ದೃಢಪಟ್ಟಿದೆ. ಇನ್ನು 5,913 ಜನರು (ಶೇ.56) ಅನ್ಯೆ ರಾಜ್ಯಗಳಿಂದ ಬಂದ ಪ್ರಯಾಣಿಕಾರಾಗಿದ್ದಾರೆ. ಶೇ.4 ವಿದೇಶದಿಂದ ವಾಪಸ್ ಬಂದವರಾಗಿದ್ದು, 2,323 ಜನರು (ಶೇ.22) ಪ್ರಾಥಮಿಕ, ದ್ವಿತೀಯ ಹಾಗೂ ಕಂಟೇನ್ಮೆಂಟ್ ಪ್ರದೇಶದ ಸಂಪರ್ಕ ಹೊಂದಿದವರಾಗಿದ್ದಾರೆ.
ಬೆಂಗ್ಳೂರಲ್ಲೂ ಗೋಚರ!:ರಾಜಧಾನಿ ಬೆಂಗಳೂರಿನಲ್ಲಿ ಈವರೆಗೆ 1,935 ಸೋಂಕಿತ ಪ್ರಕರಣ ವರದಿಯಾಗಿದ್ದು, ಇವರಲ್ಲಿ 450ಕ್ಕೂ ಹೆಚ್ಚು ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ. ತೀವ್ರ ಉಸಿರಾಟ ತೊಂದರೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 686 ಜನರಿಗೆ ಸೋಂಕು ಕಂಡುಬಂದಿದ್ದು, ಶೇ.80 ಜನರಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ. ಶುಕ್ರವಾರದ ಪಟ್ಟಿಯಲ್ಲಿಯೂ 70 ಐಎಲ್​ಐ ಹಾಗೂ 40 ಜನ ಸಂಪರ್ಕ ಇಲ್ಲದವರಿಗೆ ಸೋಂಕು ದೃಢಪಟ್ಟಿರುವ ಅಂಶ ಬಹಿರಂಗವಾಗಿದೆ. ಹೀಗಾಗಿ, ಸಮುದಾಯಕ್ಕೆ ಸೋಂಕು ಹರಡಿರುವ ಲಕ್ಷಣಗಳು ಗೋಚರಿಸುತ್ತಿವೆ.
437 ಸೂಪರ್ ಸ್ಪ್ರೆಡ್ಡರ್​ಗಳು:ರಾಜ್ಯದಲ್ಲಿ 437 ಸೋಂಕಿತರು ಸೂಪರ್ ಸ್ಪ್ರೆಡ್ಡರ್​ಗಳಾಗಿದ್ದಾರೆ. ಈ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 2,139 ಮಂದಿಗೆ ಸೋಂಕು ತಗುಲಿದೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಬೆಂಗಳೂರು ನಗರದಲ್ಲಿ ಈ ಪ್ರಮಾಣ ಶೇ.3.8 ಇದ್ದು, 123 ಸೂಪರ್ ಸ್ಪ್ರೆಡ್ಡರ್​ಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದ 469 ಮಂದಿಗೆ ಸೋಂಕು ಹರಡಿದೆ. ಕಲಬುರಗಿಯಲ್ಲಿ ಶೇ. 3.0, ಉಡುಪಿಯಲ್ಲಿ ಶೇ.2.0 ಇದೆ. ದಾವಣಗೆರೆಯಲ್ಲಿ 20 ರೋಗಿಗಳ ಸಂಪರ್ಕದಿಂದ 215 ಮಂದಿಗೆ (ಶೇ.10.8) ಸೋಂಕು ಕಾಣಿಸಿಕೊಂಡಿದೆ. ರಾಯಚೂರಿನಲ್ಲಿ ಶೇ. 8.6, ಬೆಳಗಾವಿ ಮತ್ತು ಮೈಸೂರಿನಲ್ಲಿ ಶೇ.7.9, ಬಾಗಲಕೋಟೆಯಲ್ಲಿ ಶೇ.7.8, ಬಳ್ಳಾರಿಯಲ್ಲಿ 7.6 ಇದೆ.
ಸ್ಟಾರ್ ಹೋಟೆಲ್​ಗಳಲ್ಲಿ ಚಿಕಿತ್ಸೆ:ರಾಜ್ಯಾದ್ಯಂತ ಲಭ್ಯವಿರುವ 5 ಸ್ಟಾರ್, 3 ಸ್ಟಾರ್ ಹೋಟೆಲ್​ಗಳನ್ನು ಸುಗ್ರೀವಾಜ್ಞೆಯ ಮೂಲಕ ತಕ್ಷಣವೇ ವಶಕ್ಕೆ ತೆಗೆದುಕೊಂಡು, ಅವುಗಳಿಗೆ ಆಡಳಿತಾಧಿಕಾರಿ ನೇಮಿಸಿ ಕರೊನಾ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಬೇಕು ಎಂದು ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಸಂಬಂಧ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಖಾಸಗಿ ಆಸ್ಪತ್ರೆಗಳು ಸರ್ಕಾರದ ದರ ಒಪ್ಪಿಕೊಂಡಿಲ್ಲ. ತಕ್ಷಣ ಐಎಂಎ ಅಥವಾ ಇತರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಬಗೆಹರಿಸಿ. ಈಗಿರುವ ಹಾಸಿಗೆ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸಿ ಪರಿಣಾಮಕಾರಿಯಾದ ವ್ಯವಸ್ಥೆ ರೂಪಿಸಿ ಎಂದು ಸಲಹೆ ನೀಡಿದ್ದಾರೆ.
ಜಿಂದಾಲ್ ಹೊಡೆತಕ್ಕೆ ಬಳ್ಳಾರಿ ತತ್ತರ:ಬಳ್ಳಾರಿ: ಜಿಂದಾಲ್ ಮೂಲದ ಕರೊನಾ ಸೋಂಕು ಜಿಲ್ಲೆಯಲ್ಲಿ ತೀವ್ರವಾಗಿ ಹರಡುತ್ತಿದ್ದು, ಸೋಂಕಿತರ ಸಂಖ್ಯೆ 600 ಗಡಿ ದಾಟಿದೆ. ಈ ಪೈಕಿ 356 ಜನರು ಜಿಂದಾಲ್ ಸಂರ್ಪಕಿತರಾಗಿದ್ದಾರೆ. ಶುಕ್ರವಾರ 47 ಮಂದಿಗೆ ಸೋಂಕು ತಗುಲಿದ್ದರೆ, ಇವರಲ್ಲಿ 21 ಜನ ಜಿಂದಾಲ್ ಮೂಲದವರು. ಜಿಂದಾಲ್​ನಲ್ಲಿ ಕೆಲಸ ಮಾಡಿದ್ದ ಹರಪನಹಳ್ಳಿ ತಾಲೂಕಿನ ಪೊಲೀಸ್ ಕಾನ್ಸ್​ಟೇಬಲ್​ಗೂ ಕರೊನಾ ದೃಢಪಟ್ಟಿದೆ. ಬಳ್ಳಾರಿಯಲ್ಲಿ ಶಿಕ್ಷಕಿಯೊಬ್ಬರ ಪತಿಗೆ (ಜಿಂದಾಲ್ ಉದ್ಯೋಗಿ) ಸೋಂಕು ತಗುಲಿದ್ದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಎಲ್ಲ ಸಿಬ್ಬಂದಿಯನ್ನು ಬದಲಿಸಲಾಗಿದೆ. ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಬದಲಿಗೆ ಜಿಂದಾಲ್ ಆಡಳಿತವಿದೆ. ಹೀಗಾಗಿ ಸರ್ಕಾರ ಜಿಂದಾಲ್ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಮಾಜಿ ಶಾಸಕನಿಗೆ ಸೋಂಕು:ವಿಜಯಪುರ ಜಿಲ್ಲೆಯ 72 ವರ್ಷದ ಮಾಜಿ ಶಾಸಕರೊಬ್ಬರಿಗೆ ಕರೊನಾ ಅಂಟಿಕೊಂಡಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಜಿ ಶಾಸಕ ಪುತ್ರನಿಗೂ ಕರೊನಾ:ಸುರತ್ಕಲ್​ನ ಮಾಜಿ ಶಾಸಕರೊಬ್ಬರ 24ರ ಹರೆಯದ ಪುತ್ರನಿಗೂ ಕರೊನಾ ಸೋಂಕು ದೃಢವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಗುರುವಾರ ದಾಖಲಿಸಲಾಗಿದೆ. ಮನೆ, ಅಂಗಡಿ ಸೀಲ್​ಡೌನ್ ಮಾಡಲಾಗಿದೆ. ಮಾಜಿ ಶಾಸಕರಿಗೆ ತುಮಕೂರಿನಲ್ಲಿ ಕಾಮಗಾರಿಯೊಂದರ ಗುತ್ತಿಗೆ ದೊರೆತಿದ್ದು, ಅಲ್ಲಿಗೆ ತೆರಳಿದ್ದ ಅವರ ಪುತ್ರನಿಗೆ ಸೋಂಕು ತಗುಲಿರಬೇಕು ಎಂದು ಶಂಕಿಸಲಾಗಿದೆ. ಮಾಜಿ ಶಾಸಕ ಮತ್ತು ಅವರ ಪತ್ನಿಗೆ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಲಾಕ್​ಡೌನ್​ ಮರೆತು ಬಿಡಿ, ಅನ್​ ಲಾಕ್​ಡೌನ್ 2.0 ಗೆ ಸಿದ್ಧರಾಗಿ; ಶಾಲಾ- ಕಾಲೇಜು, ಮೆಟ್ರೋ ಆರಂಭಕ್ಕೆ ಮಾರ್ಗಸೂಚಿ ಸಜ್ಜು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − two =
Remember me
