
ಬೆಂಗಳೂರು:ರಾಜ್ಯದಲ್ಲಿ ಕರೊನಾ ಸೋಂಕು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ನೀಡಿದ ಸಲಹೆ, ಸೂಚನೆಗಳನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿಬಂದಿದೆ. ಸಲಹೆ ಪರಿಗಣಿಸದ ಕಾರಣಕ್ಕಾಗಿ ಸೋಂಕು ವ್ಯಾಪಿಸುತ್ತಿರುವ ವೇಗವನ್ನು ಕಟ್ಟಿ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರೊನಾ ನಿಯಂತ್ರಿಸಲು ಮೊದಲ ಅಸ್ತ್ರವಾದ ಲಾಕ್​ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದರು. ಅದರ ಪ್ರತಿಫಲವಾಗಿ ರಾಜ್ಯದಲ್ಲಿ ಸೋಂಕು ಹಿಡಿತದಲ್ಲಿತ್ತು. ಲಾಕ್​ಡೌನ್ ಸಡಿಲಿಕೆ ಸಮಯದಲ್ಲಿ ಪೊಲೀಸ್ ಇಲಾಖೆ ನೀಡಿದ ಸಲಹೆ-ಸೂಚನೆಗಳನ್ನು ನಿರ್ಲಕ್ಷ್ಯ ಮಾಡಲಾಯಿತು. ಬದಲಿಗೆ ಉದ್ಯಮಿಗಳು, ಇನ್ನಿತರ ಅಧಿಕಾರಿಗಳ ಒತ್ತಡ ದಿಂದ ಲಾಕ್​ಡೌನ್ ಅನ್ನು ಸಂಪೂರ್ಣ ಸಡಿಲ ಮಾಡ ಲಾಯಿತು ಎಂದು ಹಿರಿಯ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿ ದ್ದಾರೆ. ಮತ್ತಷ್ಟು ದಿನಗಳು ಲಾಕೌಡೌನ್ ಮುಂದುವರಿಸಬೇಕೆಂದು ಸಲಹೆ ನೀಡಲಾಗಿತ್ತು. ಸರ್ಕಾರ ಇದಕ್ಕೆ ಒಪ್ಪದೆ ತಕ್ಷಣ ಸಡಿಲ ಮಾಡಿತು. ಸಂಜೆ 7ರಿಂದ ಬೆಳಗ್ಗೆ 7 ಗಂಟೆವರೆಗೆ ನಿಷೇಧಾಜ್ಞೆ ಮುಂದುವರಿಸಬೇಕೆಂದೂ ಹೇಳಲಾಯಿತು. ಕೆಲವೇ ದಿನಕ್ಕೆ ಇದನ್ನು ತೆರವು ಮಾಡುವಂತೆ ಸರ್ಕಾರ ಪೊಲೀಸರ ಮೇಲೆ ಒತ್ತಡ ಹೇರಿತು. ಕೊನೆಗೆ ರಾತ್ರಿ 9ರಿಂದ ಬೆಳಗಿನ ಜಾವ 6 ಗಂಟೆವರೆಗೆ ನಿರ್ಬಂಧ ವಿಧಿಸಲಾಯಿತು. ಇದನ್ನು ತೆರವು ಮಾಡುವಂತೆ ಮತ್ತೆ ಸೂಚನೆ ನೀಡಿತು. ಕೊನೆಗೆ ಸಂಪೂರ್ಣ ಸಡಿಲ ಮಾಡಲಾಯಿತು.
ಇದನ್ನೂ ಓದಿ;ಪಾಕ್​ ರಾಯಭಾರ ಕಚೇರಿ ಅರ್ಧದಷ್ಟು ಸಿಬ್ಬಂದಿಗೆ ದೇಶ ತೊರೆಯಲು ಸೂಚನೆ ಕೊಟ್ಟಿದ್ದೇಕೆ ಭಾರತ?
ಇದಲ್ಲದೆ, ಕರೊನಾ ಅತಿ ವೇಗವಾಗಿ ಹರಡಿಸುವ ರಾಜ್ಯಗಳಾದ ಮಹಾರಾಷ್ಟ್ರ, ಗುಜುರಾತ್, ರಾಜಸ್ಥಾನ ಮತ್ತು ತಮಿಳುನಾಡಿನಿಂದ ಯಾರನ್ನೂ ಕರೆತರುವುದು ಬೇಡ. ಅಲ್ಲಿನ ಸರ್ಕಾರದ ಜತೆಗೆ ಮಾತುಕತೆ ನಡೆಸಿ, ಅವರಿಗೆ ಬೇಕಾದ ವ್ಯವಸ್ಥೆ ಮಾಡುವುದು ಒಳಿತು ಎಂದು ಹೇಳಲಾಯಿತು. ಆದರೆ, ಕನ್ನಡಿಗರು ಮತ್ತು ಉದ್ಯೋಗ ಅರಸಿ ಹೋಗಿದ್ದವರನ್ನು ಹಂತ ಹಂತವಾಗಿ ರೈಲು ಮತ್ತು ಬಸ್​ಗಳಲ್ಲಿ ಕರೆತರಲಾಯಿತು. ಕೆಲವರನ್ನು ಕ್ವಾರಂಟೈನ್ ಸೆಂಟರ್​ನಲ್ಲಿ ವ್ಯವಸ್ಥೆ ಮಾಡಲಾಯಿತು. ಕೆಲವರು ಕಳ್ಳದಾರಿಯಲ್ಲಿ ರಾಜ್ಯಕ್ಕೆ ನುಸುಳಿದರು. ಇದರ ಪರಿಣಾಮ, ಹೊರ ರಾಜ್ಯದಿಂದ ಬಂದವರೇ ಅತಿ ಹೆಚ್ಚು ಸೋಂಕಿತರ ಪಟ್ಟಿ ಸೇರಿದರು. ಜತೆಗೆ ಇತರರಿಗೆ ಹರಡುವಲ್ಲಿ ಮುಖ್ಯರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಖಾಕಿಗೆ ಸೋಂಕು ತಗಲಿದ್ದೆಲ್ಲೆಲ್ಲಿ?:ಪಾದರಾಯನಪುರದಲ್ಲಿ ಕರೊನಾ ವಾರಿಯರ್ಸ್ ಮೇಲೆ ಹಲ್ಲೆ ಮತ್ತು ಗಲಭೆ ನಡೆದಾಗ ನಿಯಂತ್ರಿಸುವ ಸಲುವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಯಿತು. ಇದಾದ ಮೇಲೆ ಹೊಂಗಸಂದ್ರ ಮತ್ತು ಬೊಮ್ಮನಹಳ್ಳಿಯಲ್ಲಿ ಇನ್ನಿತರ ಕಂಟೇನ್ಮೆಂಟ್ ವಲಯದಲ್ಲಿ ಕರ್ತವ್ಯದ ವೇಳೆ ಪೊಲೀಸರಿಗೆ ಸೋಂಕು ತಗಲಿರುವುದು ಹೆಚ್ಚಾಗಿದೆ. ಜತೆಗೆ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆತಂದಾಗ ಸೋಂಕು ಖಾಕಿ ಪಡೆಗೆ ಆವರಿಸಿತು ಎಂಬುದು ಅಧಿಕಾರಿಗಳ ಅಭಿಪ್ರಾಯ.
ಇದನ್ನೂ ಓದಿ;ಚೀನಾ ಸಾಗರ ಗಡಿಯಲ್ಲಿ ಅಮೆರಿಕ ನೌಕೆಗಳ ಸಮರಾಭ್ಯಾಸ; ಡ್ರ್ಯಾಗನ್​ ಹಣಿಯಲು ನಡೆದಿದೆ ಸಿದ್ಧತೆ
ಮುಂಚೂಣಿ ಸೇನಾನಿಗಳಿಗೆ ಧೈರ್ಯ ತುಂಬಿದ ಸಿಎಂ:ಮುಂಚೂಣಿ ಸೇನಾನಿಗಳ ಪೈಕಿ ಪೊಲೀಸರಿಗೂ ಕರೊನಾ ಪಿಡುಗು ಕಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತ್ಮಸ್ಥೈರ್ಯ ತುಂಬುವ ಪ್ರಯತ್ನಕ್ಕೆ ಇಳಿದಿದ್ದು, ಸರಣಿ ಟ್ವೀಟ್​ಗಳ ಮೂಲಕ ಸರ್ಕಾರ ನಿಮ್ಮ ಜತೆಗಿದೆ ಎಂಬ ಸಂದೇಶವನ್ನು ನಾಗರಿಕರು ಹಾಗೂ ಸರ್ಕಾರಿ ಸಿಬ್ಬಂದಿಗೆ ಮಂಗಳವಾರ ರವಾನಿಸಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ಹಲವು ಪೊಲೀಸರಿಗೆ ಸೋಂಕು ತಗುಲಿ ಪೊಲೀಸ್ ಠಾಣೆಗಳನ್ನು ಸೀಲ್​ಡೌನ್ ಮಾಡಲಾಗುತ್ತಿದೆ. ಕರೊನಾ ಸೋಂಕು ದೃಢಪಟ್ಟಿದ್ದ ರಾಜ್ಯ ಪೊಲೀಸ್ ಮೀಸಲು ಪಡೆ ಮುಖ್ಯಪೇದೆ ಕೋವಿಡ್ ಸೋಂಕು ದೃಢಪಟ್ಟ ಕಾರಣ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖಕರ ಎಂದು ಬಿಎಸ್​ವೈ ನೋವು ವ್ಯಕ್ತಪಡಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕರೊನಾ ಸಂಬಂಧಿತ ಕೆಲಸಗಳಲ್ಲಿ ಮುಂಚೂಣಿ ವಾರಿಯರ್​ಗಳಾಗಿ ಜೀವವನ್ನೇ ಪಣಕ್ಕಿಟ್ಟು ಶ್ಲಾಘನೀಯ ಕೆಲಸ ಮಾಡುತ್ತಿದ್ದು, ಅವರಿಗಾಗಿಯೇ ಪ್ರತ್ಯೇಕ ಕರೊನಾ ಪರೀಕ್ಷಾ ಪ್ರಾರಂಭಿಸಲಾಗುತ್ತದೆ. ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಯಾವುದೇ ಸೋಂಕಿತ ನಾಗರಿಕ ಹಾಗೂ ಸರ್ಕಾರಿ ಸಿಬ್ಬಂದಿ ಧೃತಿಗೆಡುವ ಅಗತ್ಯವಿಲ್ಲ. ಸರ್ಕಾರ ಸದಾ ನಿಮ್ಮ ಜತೆಗಿರುತ್ತದೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸಂಘರ್ಷದ ನಡುವೆ ಸದ್ದಿಲ್ಲದೆ ಚೀನಾಗೆ ಭಾರಿ ತಿರುಗೇಟು ನೀಡಿದೆ ಭಾರತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + thirteen =
Remember me
