ಬೆಂಗಳೂರು:ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಸೆಕ್ಸ್ ವಿಡಿಯೋ ಸಿಡಿ ಬಹಿರಂಗವಾಗಿರುವ ಬೆನ್ನಲ್ಲೇ ಕಾಂಗ್ರೆಸ್​ ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದೆ. ಆ ವಿಡಿಯೋ ದೆಹಲಿಯ ಕರ್ನಾಟಕ ಭವನದಲ್ಲಿ ಮಾಡಿರುವುದು ಎನ್ನಲಾಗಿದ್ದು, ಬಿಜೆಪಿ ನಾಯಕರು ಕರ್ನಾಟಕ ಭವನವನ್ನು ಬೆಡ್​ ರೂಂ ಎಂದುಕೊಂಡಿದ್ದಾರಾ ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.
ಯುವಸಮುದಾಯಕ್ಕೆ ಉದ್ಯೋಗ ಕೊಡಿ ಎಂದರೆ, ಉದ್ಯೋಗ ಕೇಳಿ ಬಂದವರಿಗೆ ನೀವು ಏನನ್ನ ಕೊಡಲು ಹೊರಟಿದ್ದೀರಿ? ಎಂದು ರಾಜ್ಯದ ಕಾಂಗ್ರೆಸ್​ ಟ್ವಿಟ್ಟರ್ ಖಾತೆಯಿಂದ ಬಿಜೆಪಿಗೆ ಪ್ರಶ್ನೆ ಕೇಳಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯ ಆವರಣದಲ್ಲಿ ಪೊಲೀಸ್‌ ಅಧಿಕಾರಿಯ ಮೇಲೆಯೇ ಕೈ ಎತ್ತಿದ್ದ ಫೋಟೋವೊಂದನ್ನು ಶೇರ್​ ಮಾಡಿದ್ದ ಬಿಜೆಪಿ, ಕಾಂಗ್ರೆಸ್‌ ನಾಯಕರು ಹೇಳಿದಂತೆ ಕೇಳಲು ಪೊಲೀಸರೇನು ಅಂದು ಕಾಂಗ್ರೆಸ್​ ಪಕ್ಷದ ಮನೆಯ ಆಳುಗಳಾಗಿದ್ದರೇ!? ಎಂದು ಪ್ರಶ್ನೆ ಕೇಳಿತ್ತು. ಆ ಟ್ವೀಟ್​ನ್ನು ರಿಟ್ವೀಟ್​ ಮಾಡಿರುವ ಕಾಂಗ್ರೆಸ್​ ದೆಹಲಿಯ ಕರ್ನಾಟಕ ಭವನವೇನು ನಿಮ್ಮ ಬೆಡ್​ ರೂಮಾ ಎಂದು ಮರುಪ್ರಶ್ನೆ ಕೇಳಿದೆ.
ಕರ್ನಾಟಕ ಭವನವೇನು@BJP4Karnatakaಪಕ್ಷದ ಬೆಡ್ ರೂಮಾ? ಮೊದಲು ತಿಳಿಸಿhttps://t.co/PT9atQfQPO
— Karnataka Congress (@INCKarnataka)March 2, 2021

ಯುವಸಮುದಾಯಕ್ಕೆ ಉದ್ಯೋಗ ಕೊಡಿ ಎಂದರೆಉದ್ಯೋಗ ಕೇಳಿ ಬಂದವರಿಗೆ ನೀವು ಏನನ್ನ ಕೊಡಲು ಹೊರಟಿದ್ದೀರಿ@BJP4Karnataka?
— Karnataka Congress (@INCKarnataka)March 2, 2021

ರಮೇಶ್​ ಜಾರಕಿಹೊಳಿ ರಾಸಲೀಲೆ ವಿಡಿಯೋ ವೈರಲ್: ಕೆಲಸ ಕೇಳಿಕೊಂಡು ಬಂದವಳ ಜತೆ ಸಲ್ಲಾಪ

ಸೆಕ್ಸ್ ಸಿಡಿ ಬಹಿರಂಗ: ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಾರಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen + one =
Remember me
