ಹುಬ್ಬಳ್ಳಿ:ಕಾನೂನು ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇಲ್ಲಿನ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಹಾಗೂ ಗಲಭೆಯಲ್ಲಿ ಕಲ್ಲು ತೂರಾಟ ನಡೆಸಿದ ದಿಡ್ಡಿ ಓಣಿ ಹನುಮಂತ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಯುವಕನೊಬ್ಬ ವಾಟ್ಸ್ಆ್ಯಪ್​​ನಲ್ಲಿ ಸ್ಟೇಟಸ್​ ಹಾಕಿಕೊಂಡಿದ್ದಕ್ಕೆ ಪೊಲೀಸರು ಅವನನ್ನು ಕೂಡಲೇ ಬಂಧಿಸಿದ್ದರು. ನೂರಾರು ಜನರು ಸೇರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಲ್ಲದೆ ಯುವಕನನ್ನು ಒಪ್ಪಿಸಿರಿ ಎಂದು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಅವರ ವಾಹನಗಳನ್ನು ಜಖಂ ಮಾಡಿ ಓಣಿಗಳಲ್ಲಿ ಕಲ್ಲು ತೂರಾಟ ಮಾಡಿ ಅರಾಜಕತೆ ಉಂಟು ಮಾಡಿದ್ದಾರೆ. ಇದನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ. ಕಾನೂನು ಕೈಗೆ ತೆಗೆದುಕೊಳ್ಳುತ್ತೇನೆ ಎಂಬುವವರ ದುರಾಲೋಚನೆ ಇಲ್ಲಿ ನಡೆಯೋದಿಲ್ಲ. ಕಾನೂನು ಮತ್ತು ಸಂವಿಧಾನ ಯಾರು ಉಲ್ಲಂಘನೆ ಮಾಡುತ್ತಾರೋ ಅವರು ಈ ದೇಶದ ನಾಗರಿಕರಲ್ಲ. ಆ ಕಾರಣಕ್ಕಾಗಿ ಸರಿಯಾದ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಲಾಗಿದೆ. ಈಗಾಗಲೇ ಕೆಲ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಈ ಕುರಿತು ತನಿಖೆ ನಡೆದಿದೆ. ಅವರು ಯಾರೇ ಆಗಲಿ ಕಠಿಣ ಶಿಕ್ಷೆ ನೀಡಲಾಗುವುದು ಎಂದರು.
ಈ ಘಟನೆಯಲ್ಲಿ ಯಾವ ಸಂಘಟನೆಗಳಿವೆ. ಅವನ್ನೆಲ್ಲ ಹೊರಗೆ ತರುತ್ತೇವೆ. ಮುಂದೆ ಎಲ್ಲಾ ಧರ್ಮದವರು ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ತೊಂದರೆಯಾದಲ್ಲಿ ಸರ್ಕಾರವಿದೆ, ಪೋಲೀಸರಿದ್ದಾರೆ. ಅವರು ಯಾವ ರೀತಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಅವರಿಗೆ ಬಿಟ್ಟದ್ದು. ಏಕಾಏಕಿ ಗಲಭೆ ನಡೆದಿದ್ದು, ಹೀಗಾಗಿ ಇಂಟಲಿಜೆನ್ಸ್ ವೈಫಲ್ಯ ಎನ್ನುವಂತಿಲ್ಲ. ಇನ್ನು ಇದು ಪೂರ್ವಯೋಜಿತ ಗಲಾಟೆಯೇ ಎಂಬುದರ ಬಗ್ಗೆ ತನಿಖೆ ನಂತರ ತಿಳಿಯುತ್ತದೆ ಎಂದು ಗೃಹಸಚಿವರು ಹೇಳಿದರು.
ಬೆಟ್ಟದ ಇಳಿಜಾರಿನಲ್ಲಿ ಅಪಘಾತಕ್ಕೀಡಾಯ್ತು 90 ಜನರಿದ್ದ ಬಸ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + fifteen =
Remember me
