| ವೇಣುವಿನೋದ್ ಕೆ.ಎಸ್. ಮಂಗಳೂರು
ರಾಜ್ಯದಲ್ಲಿ ಸದ್ಯ ಸುದ್ದಿಯಲ್ಲಿರುವ ಮಾದಕ ವಸ್ತು ಜಾಲದ ನಿಯಂತ್ರಣಕ್ಕೆ 8 ವರ್ಷಗಳ ಹಿಂದೆ ಆಗಿನ ಉಪ ಸಭಾಪತಿ ಎನ್. ಯೋಗೀಶ್ ಭಟ್ ನೀಡಿದ್ದ ವರದಿಯ ಅಂಶಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಇಂಗಿತ ವ್ಯಕ್ತಪಡಿಸಿದೆ.
ಬೆಂಗಳೂರು, ಮಂಗಳೂರಿನಲ್ಲಿ ವ್ಯಾಪಕವಾಗಿರುವ ಡ್ರಗ್ಸ್ ಜಾಲದ ಬಗ್ಗೆ ಆಗ ಯೋಗೀಶ್ ಭಟ್ ಸ್ವಯಂ ಆಸಕ್ತಿ ವಹಿಸಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಸಲ್ಲಿಸಿದ್ದರು. 2012ರಲ್ಲಿ ಅವರು ಅಧ್ಯಕ್ಷರಾಗಿದ್ದ ವಿಧಾನಸಭೆಯ ದೂರುಗಳ ಸಮಿತಿ ವರದಿ ಸಲ್ಲಿಸಿತ್ತು. ಪ್ರಾರಂಭಿಕ ಹಂತದಲ್ಲಿ ಆಗಿನ ಸರ್ಕಾರ ಆ ಬಗ್ಗೆ ಒಂದಷ್ಟು ಆಸಕ್ತಿ ತೋರಿಸಿದ್ದರೂ ಬಳಿಕ ವರದಿ ಮೂಲೆಗುಂಪಾಗಿತ್ತು.
ಹಿಂದೆ ಕರಾವಳಿಯಲ್ಲಿ ನಿರಂತರ ನಡೆಯುತ್ತಿದ್ದ ಕೋಮುಗಲಭೆಗೂ ಡ್ರಗ್ ಮಾಫಿಯಾ ಕೆಲಸ ಮಾಡುತ್ತಿತ್ತು. ಭಯೋತ್ಪಾದನೆಯಷ್ಟೇ ವ್ಯವಸ್ಥಿತ ಜಾಲ ಇದರ ಹಿಂದಿದೆ. ಅದಕ್ಕಾಗಿ ಎನ್​ಐಎ ಮಾದರಿಯಲ್ಲೇ ನಮ್ಮಲ್ಲೂ ಪ್ರತಿಭಾವಂತ ಅಧಿಕಾರಿಗಳ ಸೆಲ್ ರಚನೆಯಾಗಬೇಕು ಎನ್ನುತ್ತಾರೆ ಯೋಗೀಶ್ ಭಟ್. ಗೃಹ ಸಚಿವರು ಈ ಬಗ್ಗೆ ಆಸಕ್ತಿ ವಹಿಸಿದ್ದಾರೆ.
ವರದಿಯಲ್ಲಿನ ಅಂಶ:ರಾಜ್ಯದ ಮಾದಕ ವಸ್ತು ನಿಯಂತ್ರಣ ಘಟಕಕ್ಕೆ ಕ್ರಿಯಾಶೀಲ ಅಧಿಕಾರಿಗಳನ್ನು ನಿಯೋಜಿಸಬೇಕು. ರಾಷ್ಟ್ರೀಯ ತನಿಖಾ ದಳದವರಂತೆ ಮಾದಕ ವಸ್ತು ದಳದವರೂ ಬೇರುಮಟ್ಟಕ್ಕೆ ಹೋಗಿ ಕೆಲಸ ಮಾಡದಿದ್ದರೆ ಡ್ರಗ್ಸ್ ವಿರುದ್ಧ ಹೋರಾಟದಲ್ಲಿ ಜಯ ಸಿಗದು ಎನ್ನುವುದು ಭಟ್ ಅವರ ವರದಿಯ ಅಂಶ. ಆಗ ಪೊಲೀಸ್ ವ್ಯವಸ್ಥೆಯಲ್ಲಿರುವ ಕೆಲವರಿಗೆ ಮಾದಕ ಜಾಲದೊಂದಿಗೆ ನಂಟು ಇದ್ದದ್ದು ಈ ಹೋರಾಟದಲ್ಲಿನ ದೌರ್ಬಲ್ಯ ಎನ್ನಲಾಗಿದೆ.
ದಂಧೆ ಮುಂದುವರಿಯಲು ಕಾರಣ: ಬೆಂಗಳೂರು ಬಿಟ್ಟರೆ ಮಂಗಳೂರಿನಲ್ಲೂ ಅತ್ಯಧಿಕ ಮಾದಕ ವಸ್ತು ಪ್ರಕರಣಗಳು ನಡೆಯುತ್ತಿದ್ದು, ಅಲ್ಲೊಂದು ಇಲ್ಲೊಂದು ವರದಿಯಾಗುತ್ತಿವೆ. ಕೆಲವರು ಮಾರುವವರನ್ನಷ್ಟೇ ಬಂಧಿಸುತ್ತಾರೆ ಬಿಟ್ಟರೆ ಕಿಂಗ್​ಪಿನ್-ಫೈನಾನ್ಸ್ ಮೂಲಕ್ಕೆ ಹೋಗುವುದಿಲ್ಲ. ಅದುವೇ ಈ ದಂಧೆ ಮುಂದುವರಿಯಲು ಕಾರಣ. ಇದೆಲ್ಲದರ ನಿಯಂತ್ರಣಕ್ಕೆ ವ್ಯವಸ್ಥಿತ ಕಾರ್ಯತಂತ್ರ ಅಗತ್ಯ.
ಅಧ್ಯಾಪಕರ ದೂರು ಪ್ರೇರಣೆ
ನನ್ನ ಕಚೇರಿಗೆ ಆಗ ಕೆಲವು ಕಾಲೇಜು ಪ್ರಾಧ್ಯಾಪಕರು ಬಂದು ವಿದ್ಯಾರ್ಥಿಗಳಲ್ಲಿ ಕೆಲವರ ಚಲನ-ವಲನ ವ್ಯತ್ಯಾಸ ಆಗುತ್ತಿದೆ ಎಂದಿದ್ದರು. ಆ ಬಗ್ಗೆ ನಾನು ವಿಚಾರಣೆ ನಡೆಸಿದಾಗ ಅದು ಡ್ರಗ್ಸ್ ಪರಿಣಾಮ ಎನ್ನುವುದು ಗೊತ್ತಾಯಿತು. ಮಕ್ಕಳು ಶಾಲೆ ಬಿಟ್ಟು ಹೋಗುವಾಗ ಕೆಲ ಅಂಗಡಿಗಳಲ್ಲಿ ಮಾರುವ ಬ್ರೆಡ್ ಜಾಮ್ಲ್ಲೂ ಡ್ರಗ್ಸ್ ಮಿಶ್ರಣವಾಗುತ್ತಿದ್ದ ಬಗ್ಗೆ ತಿಳಿಯಿತು. ಇದರ ಬಗ್ಗೆ ನಾನು ವಿಸõತ ಅಧ್ಯಯನಕ್ಕೆ ಮುಂದಾದೆ ಎನ್ನುತ್ತಾರೆ ಯೋಗೀಶ್ ಭಟ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 4 =
Remember me
