ಬೆಂಗಳೂರು:ಈಶಾ ಸಂಸ್ಥೆಯು ಕಾವೇರಿಕೊಳ್ಳದ ಪ್ರದೇಶದ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರವಾಗಿ ಮರ ಆಧಾರಿತ ಕೃಷಿಯ ಅಳವಡಿಕೆ ಮತ್ತು ಅನುಷ್ಠಾನದ ಮೂಲಕ ಈ ಪ್ರದೇಶದ ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಸಾವಯವ ಅಂಶವನ್ನು ನೈಸರ್ಗಿಕವಾಗಿ ಹೆಚ್ಚಿಸುವ ಮೂಲಕ ಸದ್ಗುರು ನೇತೃತ್ವದ ಈಶಾ ಸಂಸ್ಥೆಯು ಪರಿವರ್ತನೆಗೆ ಅನುಕೂಲ ಮಾಡಿಕೊಡುತ್ತಿದೆ. ‘ಕಾವೇರಿ ಕೂಗು’ ಭಾಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೆ 1,07,000ಕ್ಕೂ ಹೆಚ್ಚು ರೈತರು ಮರ ಆಧಾರಿತ ಕೃಷಿ ಅಳವಡಿಸಿಕೊಳ್ಳಲು ಈಶಾ ಕಾರಣವಾಗಿದೆ. ಮರ ಆಧಾರಿತ ಕೃಷಿ ಮತ್ತು ಸರ್ಕಾರದ ಕೃಷಿ ಅರಣ್ಯ ಯೋಜನೆಗಳ ಬಗ್ಗೆ ರೈತರಲ್ಲಿ ಸಾಕಷ್ಟು ಉತ್ಸಾಹವನ್ನೂ ಮೂಡಿಸಿದೆ.
ಆರ್ಥಿಕತೆ ಮತ್ತು ಪರಿಸರ ವಿಜ್ಞಾನದ ಈ ಬೆನ್ನೆಲುಬನ್ನು ಬಲಪಡಿಸುವ ನಿಟ್ಟಿನಲ್ಲಿ, ಕಾವೇರಿ ಕೊಳ್ಳ ಪ್ರದೇಶದ ‘ನೇಗಿಲ ಯೋಗಿ’ಗಳನ್ನು ಕೈಹಿಡಿದು ಬೆಳವಣಿಗೆಯ ವಿಳಂಬವನ್ನು ಹಿಮ್ಮೆಟ್ಟಿಸಲು ಮತ್ತು ನಮ್ಮ ರೈತರು ಕೇವಲ ಸ್ವಾವಲಂಬಿಗಳಾಗುವುದಲ್ಲದೆ ಅವರನ್ನು ಕಾವೇರಿ ಕೊಳ್ಳ ಪ್ರದೇಶದ ಪರಿಸರ ಪರಿವರ್ತನೆಯ ರಾಯಭಾರಿಗಳನ್ನಾಗಿಸಲು ಈಶಾ ಫೌಂಡೇಶನ್ ಸ್ವಯಂಸೇವಕರು ಸಹಾಯ ಮಾಡುತ್ತಾರೆ.
ರೈತರು ಎಲ್ಲರಿಗೂ ಆಹಾರ ನೀಡುತ್ತಾರೆ, ಆದರೂ ಅವರು ಹಸಿವಿನಿಂದ ಬಳಲುತ್ತಾರೆ. ಹೆಚ್ಚಿನ ಸ್ಥಳಗಳಲ್ಲಿ ಭೂಮಿ, ನೀರು ಮತ್ತು ಮಾನವ ಸಂಪನ್ಮೂಲವನ್ನು ಹೊಂದಿದ್ದರು ಸಹ, ಸರಿಯಾದ ಸಮಕಾಲೀನ ಪರಿಕರಗಳು, ತಂತ್ರಗಳು ಮತ್ತು ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳುವಿಕೆಯ ಕೊರತೆಯಿಂದಾಗಿ ಅವರು ಅಭಿವೃದ್ಧಿಯ ರೇಡಾರ್‌ನಿಂದ ಹೊರಗುಳಿದಿದ್ದಾರೆ.
ಸರ್ಕಾರದ ಕೃಷಿ ಅರಣ್ಯ ಯೋಜನೆಗಳು ಬಹಳ ಹಿಂದಿನಿಂದಲೂ ಇದ್ದರೂ ರೈತರು ಅವಕಾಶ, ಅರಿವು ಮತ್ತು ಮಾಹಿತಿಯ ಕೊರತೆಯಿಂದಾಗಿ ಈ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಾವಿರಾರು ಈಶಾ ಸ್ವಯಂಸೇವಕರು ರೈತರಿಗೆ ಕೇವಲ ಅರಿವು ಮೂಡಿಸುವುದಲ್ಲದೆ, ಈ ಯೋಜನೆಗಳನ್ನು ಪಡೆದುಕೊಳ್ಳುವ ಮತ್ತು ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಸಂಪೂರ್ಣ ಪ್ರಕ್ರಿಯೆಯಲ್ಲಿ ಕೈಹಿಡಿಯುತ್ತಿದ್ದಾರೆ.
2019ರ ಸೆಪ್ಟೆಂಬರ್‌ನಲ್ಲಿ ಸದ್ಗುರು ಅವರು ಕಾವೇರಿ ನದಿಯ ಸಂಪೂರ್ಣ ವಿಸ್ತಾರದಲ್ಲಿ ಮೆಗಾ ಮೋಟಾರ್ ರ‌್ಯಾಲಿಯೊಂದಿಗೆ ಕಾವೇರಿ ಕೂಗನ್ನು ಪ್ರಾರಂಭಿಸಿದರು. ಈ ಅಭಿಯಾನದ ಮೂಲಕ ನದಿ ಕೊಳ್ಳ ಪ್ರದೇಶದ 52 ಲಕ್ಷಕ್ಕೂ ಹೆಚ್ಚು ರೈತರಿಗೆ ಮರ ಆಧಾರಿತ ಕೃಷಿ ತಲುಪಿಸುವ ಗುರಿ ಹೊಂದಿದ್ದಾರೆ. ಕಾವೇರಿ ಕೊಳ್ಳದ ಪ್ರದೇಶದಲ್ಲಿ ರೈತರು 242 ಕೋಟಿ ಮರಗಳನ್ನು ನೆಡಲು ಅನುವು ಮಾಡಿಕೊಡುವ ಮೂಲಕ, ಈ ಯೋಜನೆಯಿಂದಾಗಿ ಕಾವೇರಿ ನದಿಯ ಸವಕಳಿಯನ್ನು ಹಿಮ್ಮೆಟ್ಟಿಸಿ, ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿ, ಮಣ್ಣಿನ ಪೋಷಕಾಂಶಗಳನ್ನು ಸಮೃದ್ಧಗೊಳಿಸುವುದರ ಜೊತೆಗೆ ರೈತರ ಆದಾಯದಲ್ಲಿ 3ರಿಂದ 8 ಪಟ್ಟು ಹೆಚ್ಚಳವಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಮತ್ತು ಹಿನ್ನೆಲೆಯಲ್ಲಿ ಸ್ವಯಂಸೇವಕರ ಶ್ರಮದಿಂದಾಗಿ ಕೋವಿಡ್ ಹೊರತಾಗಿಯೂ, 68 ಲಕ್ಷ ಸಸಿಗಳನ್ನು ಕೆಎಪಿವೈ ಯೋಜನೆಯಡಿ ನೆಡಲಾಗಿದೆ.
ಆಗಸ್ಟ್ 2ರಿಂದ 1785 ಗ್ರಾಮ ಪಂಚಾಯಿತಿಗಳಲ್ಲಿ ಕಾವೇರಿ ಕೂಗು ಬೃಹತ್ ಗ್ರಾಮ ಸಂಪರ್ಕ ಅಭಿಯಾನವನ್ನು ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು, ಮೈಸೂರು, ಮಂಡ್ಯ, ರಾಮನಗರ ಮತ್ತು ತುಮಕೂರಿನಲ್ಲಿ ಮರ ಆಧಾರಿತ ಕ್ರಷಿಯ ಬಗ್ಗೆ ಅರಿವು ಮೂಡಿಸಲು ಉದ್ಘಾಟಿಸಲಾಯಿತು. ಇಲ್ಲಿಯವರೆಗೆ 475 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 27 ತಾಲೂಕು, 439 ಗ್ರಾಮ ಪಂಚಾಯಿತಿ ಮತ್ತು 09 ಜಿಲ್ಲಾ ಕಾರ್ಯಕ್ರಮಗಳಾಗಿವೆ. ಬೆಂಗಳೂರು ಗ್ರಾಮಾಂತರದಲ್ಲಿಯೇ 35 ಕಾರ್ಯಕ್ರಮಗಳನ್ನು ಈಶಾ ಸ್ವಯಂಸೇವಕರು ನಡೆಸಿದ್ದು, ರೈತರು, ಸರ್ಕಾರಿ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು, ರೇಷ್ಮೆ ಕೃಷಿ ಸಿಬ್ಬಂದಿ ಮತ್ತು ಅಂಗನವಾಡಿ ಸಿಬ್ಬಂದಿ ಸೇರಿ 460 ಜನರು ಭಾಗವಹಿಸಿದ್ದರು. ಮುಂಬರುವ ವಾರಗಳಲ್ಲಿ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರದಲ್ಲಿ 24 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದು ಆಗಸ್ಟ್ 23ರೊಳಗೆ ಮುಕ್ತಾಯಗೊಳ್ಳುತ್ತದೆ. ನಂತರದ ವಾರದಲ್ಲಿ ಈ ಗ್ರಾಮ ಸಂಪರ್ಕ ಅಭಿಯಾನವು ಉಳಿದ ಎರಡು ತಾಲೂಕುಗಳಾದ ನೆಲಮಂಗಲ ಮತ್ತು ಹೊಸಕೋಟೆಯಲ್ಲಿ ನಡೆಯುತ್ತವೆ.
ನಮ್ಮ ರೈತರು 1.25 ಶತಕೋಟಿ ಜನರಿಗೆ ಆಹಾರ ನೀಡುವಲ್ಲಿ ಯಶಸ್ವಿಯಾಗಿರುವುದು ಈ ದೇಶದ ಅತಿ ದೊಡ್ಡ ಸಾಧನೆ. ರೈತರ ಜೀವನೋಪಾಯ, ಮಣ್ಣಿನ ಗುಣಮಟ್ಟ ಮತ್ತು ನಮ್ಮ ಆಹಾರ ಭದ್ರತೆ ಸುಧಾರಿಸುವ ಸಲುವಾಗಿ ಅವರಿಗೆ ಸಹಾಯ ಮಾಡುವುದು ಈಗ ಜವಾಬ್ದಾರಿ ನಮ್ಮ ಮೇಲಿದೆ.|ಸದ್ಗುರು“ಆರೋಗ್ಯಕರ ಸಮಾಜವನ್ನು ಹೊಂದಲು ನಾವು 33% ಅರಣ್ಯ ಪ್ರದೇಶವನ್ನು ಹೊಂದಿರಬೇಕು. ಆದರೆ ಈಗ ಭಾರತದಲ್ಲಿ ಕೇವಲ 16% ಮಾತ್ರ ಇದೆ. ಕರ್ನಾಟಕ 15%, ಬೆಂಗಳೂರು ಗ್ರಾಮಾಂತರ 9% … ಈ ಶೇಕಡಾವಾರುಗಳೊಂದಿಗೆ ನಾವು ಹೇಗೆ ಆರೋಗ್ಯಕರ ಸಮಾಜವನ್ನು ನಿರ್ಮಿಸುವುದು? ಆದ್ದರಿಂದ, ಪ್ರತಿ ರೈತ ಮರ ಬೇಸಾಯ ಅಳವಡಿಸಿಕೊಂಡು ಈ ಅದ್ಭುತ ಯೋಜನೆಯಾದ ಕಾವೇರಿ ಕೂಗನ್ನು ಯಶಸ್ವಿಗೊಳಿಸಿ” ಎಂದು ಕಳೆದ ವಾರ ಬೆಂಗಳೂರು ಗ್ರಾಮಾಂತರದಲ್ಲಿ ಕಾವೇರಿ ಕೂಗಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಾಮಾಜಿಕ ಅರಣ್ಯ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಚಂದ್ರ ಕುಮಾರ್ ಹೇಳಿದ್ದಾರೆ.
ಮರ ಆಧಾರಿತ ಕೃಷಿಗೆ ಕಡಿಮೆ ನೀರು, ಕಡಿಮೆ ನಿರ್ವಹಣೆ ಬೇಕಾಗುತ್ತದೆ, ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ ಮತ್ತು ನನ್ನ ಮಕ್ಕಳಿಗೆ ದೊಡ್ಡ ಸಂಪತ್ತನ್ನು ಸೃಷ್ಟಿಸುತ್ತದೆ. ಕಾವೇರಿ ಕೂಗಿನ ಸಹಾಯದಿಂದ, ಮರ ಆಧಾರಿತ ಕೃಷಿ ಅಳವಡಿಸಿಕೊಳ್ಳುವುದು ನನಗೆ ಮತ್ತು ನನ್ನ ಮಕ್ಕಳಿಗಾಗಿ ನಾನು ಮಾಡಿದ ಅತ್ಯುತ್ತಮ ಆಯ್ಕೆಯಾಗಿದ್ದು, ಅದಕ್ಕಾಗಿ ಸರ್ಕಾರದ ಸಹಾಯಧನ ಪಡೆಯಲು ಕೂಡ ನನಗೆ ಸಹಾಯವಾಗಿದೆ.|ನವೀನ್​ ಮರ ಆಧಾರಿತ ಕೃಷಿ ಅಳವಡಿಸಿಕೊಂಡ ರೈತ, ಬೆಂಗಳೂರು ಗ್ರಾಮಾಂತರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 16 =
Remember me
