ಬೆಂಗಳೂರು:ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸುವುದು, ರಾಜ್ಯದ ಶ್ರೀಮಂತ ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು ಮತ್ತು ಅರಣ್ಯ ಪರಿಸರ ವ್ಯವಸ್ಥೆಗಳ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವುದು ಅರಣ್ಯ ಇಲಾಖೆಯ ಪ್ರಾಥಮಿಕ ಕರ್ತವ್ಯವಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ರಾಡಿಸನ್ ಬ್ಲೂನಲ್ಲಿ ಆಯೋಜಿಸಲಾಗಿದ್ದ ‘ನೀತಿ ಚೌಕಟ್ಟು ಕುರಿತ ಅಂತಾರಾಜ್ಯ ಸಚಿವರ ಸಂವಾದ, ಅಂತರ್​ಜೀವಿ ಹಣ ಆಂದೋಲನದ ಮೂಲಕ ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯತೆಯ ಸಂರಕ್ಷಣೆಗೆ ವೇಗವರ್ಧನೆ’ ಸಮಾವೇಶದಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ಅಪರೂಪದ ಜೀವ ವೈವಿಧ್ಯತೆಯೊಂದಿಗೆ, ಅತ್ಯುತ್ತಮ ಸಾರ್ವತ್ರಿಕ ಮೌಲ್ಯದ ಪ್ರದೇಶವಾಗಿದೆ ಎಂದು ಹೇಳಿದರು.
ಕಾಡಿನ ನಾಶವನ್ನು ತಪ್ಪಿಸಲು ಅರಣ್ಯ (ಸಂರಕ್ಷಣೆ) ಕಾಯ್ದೆ, 1980 ಜಾರಿಗೆ ತರಲಾಯಿತು. ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಯ ಮೂಲಕ ವನ್ಯಜೀವಿಗಳ ಆವಾಸಸ್ಥಾನಗಳ ಸಮಗ್ರ ಅಭಿವೃದ್ಧಿ ಎಂಬ ಯೋಜನೆಯನ್ನು ರೂಪಿಸಲಾಯಿತು ಎಂದರು.
ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಪಶ್ಚಿಮ ಘಟ್ಟಗಳನ್ನೊಳಗೊಂಡಿದ್ದು, ಜೀವವೈವಿಧ್ಯತೆಯ ವಿಶ್ವದ ಎಂಟು ‘ಅದ್ಭುತ ತಾಣಗಳಲ್ಲಿ’ ಒಂದಾಗಿವೆ. ಪಶ್ಚಿಮ ಘಟ್ಟಗಳು ಅಂತಾರಾಜ್ಯ ಶ್ರೇಣಿಯಾಗಿರುವುದರಿಂದ ಸಂರಕ್ಷಣಾ ಕಾರ್ಯಗಳನ್ನು ಅಂತರರಾಜ್ಯ ಮಟ್ಟದಲ್ಲಿ ಸಮನ್ವಯಗೊಳಿಸಬೇಕಾಗಿದೆ. ಸರ್ಕಾರ ಮತ್ತು ಸ್ವಾಯತ್ತ ಸಂಸ್ಥೆಗಳ ಧನಸಹಾಯ ಮತ್ತು ಅಭಿವೃದ್ಧಿಯ ಬೆಂಬಲದೊಂದಿಗೆ, ಜೀವವೈವಿಧ್ಯತೆ, ಸಂರಕ್ಷಣೆ ಮತ್ತು ಮೌಲ್ಯ ಸೃಷ್ಟಿ ಸಾಧ್ಯವಾಗುತ್ತದೆ ಎಂಬ ಹೊಸ ಕಲ್ಪನೆಯ ಸಾಧಕ ಬಾಧಕದ ಬಗ್ಗೆ ಚಿಂತನ ಮಂಥನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಸ್ತೂರಿರಂಗನ್ ಸಮಿತಿ ವರದಿ ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಅದಕ್ಕೂ ಮುನ್ನ ಗಾಡ್ಗೀಳ್ ಸಮಿತಿ ವರದಿಗೂ ಇದೇ ದುಃಸ್ಥಿತಿ ಎದುರಾಗಿತ್ತು. ಕರ್ನಾಟಕವು ಇತರ 6 ನೆರೆಯ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸಲಿದೆ. ವರದಿ ಜಾರಿಗೆ ಕಾನೂನು ರೂಪಿಸುವುದರ ಜೊತೆಗೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು. ಗ್ರಾಮ ಪಂಚಾಯಿತಿಗಳಲ್ಲಿ ಅರಣ್ಯ ಸಮಿತಿಗಳು, ಅಂಗನವಾಡಿಗಳು ಮತ್ತು ಶಾಲಾ ಮಕ್ಕಳನ್ನು ಈ ಬಗ್ಗೆ ಜಾಗೃತಿ ಅಭಿಯಾನಕ್ಕೆ ತೊಡಗಿಸಿಕೊಳ್ಳಬಹುದು ಎಂದು ಸಹ ಸಲಹೆ ನೀಡಿದರು.
ಜೀವವೈವಿಧ್ಯ ಕಾಯ್ದೆ, 2002 ತನ್ನ ಜೀವ ವೈವಿಧ್ಯ ಸಂಪನ್ಮೂಲಗಳ ಮೇಲೆ ಭಾರತದ ಸಾರ್ವಭೌಮ ಹಕ್ಕನ್ನು ಪುನರುಚ್ಚರಿಸುತ್ತದೆ. ಸ್ಥಳೀಯ ಜೀವಸಂಕುಲ, ಸಸ್ಯ ಸಂಕುಲ ಉಳಿಸಲು ನಾವು ಪ್ರಯತ್ನಿಸಬೇಕು. ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ರಾಜ್ಯ ಸರ್ಕಾರವು ಬಳಸುತ್ತಿರುವ ಪ್ರಸ್ತುತ ಕಾರ್ಯತಂತ್ರಗಳಿಗೆ ಅಂತರ ಜೀವಿ (INTERSPECIES) ಹಣ ಆಂದೋಲನವು ಹೇಗೆ ಹೊಂದಿಕೆಯಾಗುತ್ತದೆ ಎಂಬ ಬಗ್ಗೆ ತಜ್ಞರು ಬೆಳಕು ಚೆಲ್ಲಬೇಕು ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fifteen =
Remember me
