ಬೆಂಗಳೂರು: ಬಸವನಗುಡಿಯ ಅಪಾರ್ಟ್​ವೆುಂಟ್​ನಲ್ಲಿ ವಾಸಿಸುತ್ತಿದ್ದ ಐಸಿಸ್ ಶಂಕಿತ ಉಗ್ರ ಡಾ. ಅಬ್ದುರ್ ರೆಹಮಾನ್ (28)ನನ್ನು ರಾಷ್ಟ್ರೀಯ ತನಿಖಾ ತಂಡ (ಎನ್​ಐಎ) ತೀವ್ರ ವಿಚಾರಣೆಗೆ ಒಳಪಡಿಸಿದೆ.
ಈತನ ಜತೆಗೆ ಗುರುತಿಸಿಕೊಂಡಿದ್ದ ಮೂವರು ಸ್ನೇಹಿತರನ್ನು ವಶಕ್ಕೆ ಪಡೆದು ಎನ್​ಐಎ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಉಗ್ರ ಕೃತ್ಯದಲ್ಲಿ ವೈದ್ಯನ ಜತೆಗೆ ಮತ್ಯಾರಾದರೂ ಕೈ ಜೋಡಿಸಿದ್ದರೇ ಎಂಬುದರ ಬಗ್ಗೆ ಎನ್​ಐಎ ವಿಚಾರಣೆ ನಡೆಸುತ್ತಿದೆ. ಇದುವರೆಗೆ ಅಬ್ದುರ್ ಜತೆ ಅವರೂ ಸಿರಿಯಾಕ್ಕೆ ಹೋಗಿರುವುದು ಖಚಿತವಾಗಿಲ್ಲ. ಕೆಲವು ಸಾದಂರ್ಭಿಕ ಸಾಕ್ಷ್ಯಗಳು ಆಧರಿಸಿ ವೈದ್ಯನ ಸ್ನೇಹಿತರನ್ನು ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:18 ಕೋಟಿಗೂ ಅಧಿಕ ಪ್ಯಾನ್ ಕಾರ್ಡ್​ಗಳು ಅನೂರ್ಜಿತಗೊಳ್ಳಲಿವೆ!
ಐಸಿಸ್ ಸಂಘಟನೆಗೆ ಅಬ್ದುರ್ ಕೆಲಸ ಮಾಡುತ್ತಿದ್ದ. ಆದರೆ, ಆ ಸಂಘಟನೆಗೆ ಸದಸ್ಯರ ನೇಮಕಾತಿ ಸೇರಿ ಬಹಿರಂಗವಾಗಿ ಚಟುವಟಿಕೆಗಳಲ್ಲಿ ಆತ ತೊಡಗಿರುವ ಬಗ್ಗೆ ಮಾಹಿತಿ ಇಲ್ಲ. ಗೌಪ್ಯವಾಗಿ ಆಪ್ ಅಭಿವೃದ್ಧಿ ಸೇರಿ ಇತರೆ ಸಂವಹನ ಕೆಲಸದಲ್ಲಿ ತೊಡಗಿದ್ದ. ಅಬ್ದುರ್ ತಂದೆಯೂ ವೈದ್ಯರಾಗಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಅಬ್ದುರ್, ಕುಟುಂಬದ ಜತೆ ವಾಸಿಸುತ್ತಿದ್ದ. ಪುತ್ರನ ಐಸಿಸ್ ನಂಟಿನ ಬಗ್ಗೆ ಮಾಹಿತಿ ಇಲ್ಲ ಎಂದು ಪಾಲಕರು ಹೇಳುತ್ತಿದ್ದಾರೆ. ಕುಟುಂಬ ಸದಸ್ಯರಿಗೆ ತಿಳಿಯದಂತೆ ಅಬ್ದುರ್ ಸಿರಿಯಾಗೆ ಹೋಗಿರುವ ಸಾಧ್ಯತೆಗಳಿವೆ ಎಂದು ಎನ್​ಐಎ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸುಶಾಂತ್ ಸಾವಿನ ಪ್ರಕರಣ: ಶಿವಸೇನೆಯಲ್ಲಿ ಶುರುವಾಗಿದೆ ನಡುಕ!
ಜಾಗತಿಕ ಭಯೋತ್ಪಾದಕ ಸಂಘಟನೆ ‘ಐಸಿಸ್​ಗೆ ಆಪ್ ಅಭಿವೃದ್ಧಿ’ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಸಲುವಾಗಿ ಆರೋಪಿಯನ್ನು ಎನ್​ಐಎ ತಂಡ ಬುಧವಾರ ದೆಹಲಿಗೆ ಕರೆದೊಯ್ದಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿಸಿ ದೇಶ ವ್ಯಾಪಿ ವಿಧ್ವಂಸಕ ಕೃತ್ಯಕ್ಕೆ ಐಸಿಸ್ ಸಹೋದರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ ಸಂಚು ರೂಪಿಸಿತ್ತು. ಈ ಸಂಘಟನೆ ಜತೆ ಸಂಪರ್ಕ ಆರೋಪದಡಿ ಡಾ. ಅಬ್ದುರ್​ನನ್ನು ಬಂಧಿಸಲಾಗಿದೆ.
ಬೆಂಗ್ಳೂರು ವೈದ್ಯ ಐಸಿಸ್ ಟೆಕ್ಕಿ: ತಂತ್ರಾಂಶ ಅಭಿವೃದ್ಧಿ ಹೊಣೆ ಹೊತ್ತಿದ್ದ ಬಂಧಿತ ಅಬ್ದುರ್ ರೆಹಮಾನ್

ಡಿಜೆಹಳ್ಳಿ ಗಲಭೆ: ಪಾಷಾಗೆ ಐಸಿಸ್‌ ನಂಟು? ಕಾರ್ಪೋರೇಟರ್‌ಗಳ ಮೇಲೂ ಪೊಲೀಸರ ಕಣ್ಣು- ನೋಟಿಸ್‌ ಜಾರಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + twenty =
Remember me
