ಬೆಂಗಳೂರು:ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಇದಾಗುತ್ತಿದ್ದಂತೆ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಮಂಗಳೂರಿನಲ್ಲಾದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಇಡೀ ದೇಶದಾದ್ಯಂತ ಸದ್ದು ಮಾಡಿತ್ತು. ಇದೀಗ ಮತ್ತೊಂದು ಭಯಾನಕ ಅಂಶ ಬೆಳಕಿಗೆ ಬಂದಿದೆ.
ಕುಕ್ಕರ್ ಬಾಂಬ್ ಬ್ಲಾಸ್ಟ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಶಂಕಿತ ಉಗ್ರ ಶಾರೀಕ್​​ನನ್ನು ಬೆಂಬಲಿಸಿ ಇದೀಗ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ಪೊಲೀಸರು ಬಂಧಿಸಿರುವ ನಮ್ಮ ಸಹೋದರ ಶಾರೀಕ್, ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿ ಮಾಡಲು ಯತ್ನಿಸಿದ್ದ. ನಮ್ಮ ಯೋಜನೆ ಈಡೇರದಿದ್ದರೂ, ಮತ್ತೊಮ್ಮೆ ಭಧ್ರತಾ ಇಲಾಖೆ ಕಣ್ತಪ್ಪಿಸಿ ದಾಳಿ ಮಾಡುತ್ತೇವೆ ಎಂದು ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್ ಸಂಘಟನೆ​ ಮಾಧ್ಯಮ ಹೇಳಿಕೆಯ ಮೂಲಕ ಎಚ್ಚರಿಜೆ ನೀಡಿದೆ.
ಮಾಧ್ಯಮ ಹೇಳಿಕೆಯಲ್ಲೇನಿದೆ?
ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೆಸರಿನಲ್ಲಿ ಬಿಡುಡೆಯಾಗಿರುವ ಮಾಧ್ಯಮ ಹೇಳಿಕೆ ಇಂಗ್ಲಿಷ್ ಭಾಷೆಯಲ್ಲಿದ್ದು, 23 ನವೆಂಬರ್ 2022 ದಿನಾಂಕದ ಉಲ್ಲೇಖವಿದೆ. ನಮ್ಮ ಸಹೋದರ ಶಾರೀಕ್ ಬಂಧನವನ್ನು ಸಂಭ್ರಮಿಸುತ್ತಿರುವವರ ಮತ್ತು ಎಡಿಜಿಪಿ ಅಲೋಕ್ ಕುಮಾರ್ ಅವರ ಸಂತೋಷ ಕಡಿಮೆ ಸಮಯದ್ದಾಗಿದೆ. ನಿಮ್ಮ ನಡೆಯನ್ನು ಸೂಕ್ಷವಾಗಿ ಗಮನಿಸುತ್ತಿದ್ದು, ದಬ್ಬಾಳಿಕೆಯನ್ನು ಶೀಘ್ರದಲ್ಲಿಯೇ ನಿಮಗೆ ಹಿಂತಿರುಗಿಸುತ್ತೇವೆ.
ನಮ್ಮನ್ನು ಹತ್ತಿಕ್ಕಿ, ನಮ್ಮ ಧರ್ಮದ ಮೇಲೆ ಹಸ್ತಕ್ಷೇಪ ಮಾಡಲು ಹೊಸಹೊಸ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ನಮ್ಮ ಧರ್ಮದ ಅಮಾಯಕರು ಜೈಲಿನಲ್ಲಿ ಕೊಳೆಯುವಂತಾಗಿದೆ. ಇದಕ್ಕೆ ತಕ್ಕ ಪ್ರತಿಕಾರ ತೀರಿಸಲು ನಾವು ಸಜ್ಜಾಗಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
