ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನದ ವತಿಯಿಂದ ಯುವ ಲೇಖಕರ ಅತ್ಯುತ್ತಮ ಕೃತಿಗೆ ನೀಡುವ ‘ಶಾ. ಬಾಲುರಾವ್ ಯುವಬರಹಗಾರ’ ಪ್ರಶಸ್ತಿಗೆ ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ’ ಕೃತಿ ಆಯ್ಕೆಯಾಗಿದೆ. ಅ.30ರಂದು ಬಿ.ಎಂಶ್ರೀ. ಪ್ರತಿಷ್ಠಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಪ್ರಶಸ್ತಿಯಲ್ಲಿ 25 ಸಾವಿರ ರೂ. ಹಾಗೂ ಸ್ಮರಣಿಕೆ ಒಳಗೊಂಡಿದೆ.
ಇಸ್ಮಾಯಿಲ್ ತಳಕಲ್ ಪ್ರಥಮ ಕಥಾ ಸಂಕಲನದಲ್ಲಿ ಕೌಶಲ್ಯದಿಂದ ವೈವಿಧ್ಯಮಯವಾದ ವಸ್ತುಗಳನ್ನು ಸ್ವಾರಸ್ಯಪೂರ್ಣವಾಗಿ ಹೆಣೆದಿದ್ದಾರೆ. ಸಮಾಜದ ಅಹಿತಕರ ಘಟನೆಗಳು ಬಹುವಾಗಿ ಕಾಡಿ, ಏನೂ ಮಾಡಲಾಗದ ಅಸಹಾಯಕತೆಯಿಂದ ಎದೆ ಭಾರವಾಗಿಸಿದಾಗ, ಅದನ್ನು ಹಗುರ ಮಾಡಿಕೊಳ್ಳುವ ಸಾಧನವಾಗಿ ಕಥೆ ಪ್ರಯೋಗ ಮಾಡಿದ್ದಾರೆ. ಶೋಷಣೆಯ ಮಗ್ಗುಲಗಳನ್ನು ನೈಜವಾಗಿ ಚಿತ್ರಿಸುವಲ್ಲಿ ಇಸ್ಮಾಯಿಲ್ ತಳಕಲ್ ಯಶಸ್ವಿಯಾಗಿದ್ದಾರೆ ಎಂದು ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯ ಡಾ. ಕೂಡ್ಲೂರು ಮೆಂಕಟಪ್ಪ ಮತ್ತು ಡಾ. ಪ್ರಮೀಳಾ ಮಾಧವ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 17 =
Remember me
