ಮ್ಯಾಪಿಂಗ್ ತಂತ್ರಜ್ಞಾನದೊಂದಿಗೆ ನಿಗಾಜಿಲ್ಲಾಡಳಿತದಿಂದ ಹೊಸ ಪ್ರಯೋಗ
ಮಂಡ್ಯ:ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಿಷೇಧದ ನಡುವೆಯೂ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮೇಲೆ ಹದ್ದಿನ ಕಣ್ಣಿಡಲು ಹಾಗೂ ಅಕ್ರಮಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಇಸ್ರೋ ಮ್ಯಾಪಿಂಗ್ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ.
ಜಿಲ್ಲಾಡಳಿತ ತಾತ್ಕಾಲಿಕ ನಿಷೇಧ ವಿಧಿಸಿದ್ದರೂ ಆದೇಶ ಉಲ್ಲಂಘಿಸಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ ಎನ್ನುವ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದ ಮೇಲೆ ನಿಗಾ ಇಡಲು ಇಸ್ರೋ ಮ್ಯಾಪಿಂಗ್ ತಂತ್ರಜ್ಞಾನ ಬಳಸಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ತೀರ್ವನಿಸಲಾಗಿದೆ.
ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನುವ ದೂರು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ಮ್ಯಾಪಿಂಗ್ ಮೂಲಕ ಅಲ್ಲಿ ನಡೆಯುತ್ತಿರುವ ಚಟುವಟಿಕೆ ಮೇಲೆ ಕಣ್ಣಿಡಲಾಗುವುದು. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುತ್ತಿದ್ದು, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್​ನಿಂದ ಒಪ್ಪಿಗೆ ಸಿಕ್ಕ ಬಳಿಕ ಚಾಲನೆ ನೀಡಲಾಗುವುದು.| ಡಾ.ಎಂ.ವಿ.ವೆಂಕಟೇಶ್ಜಿಲ್ಲಾಧಿಕಾರಿ
ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆ ನಡೆದರೂ ಇಸ್ರೋ ಮ್ಯಾಪಿಂಗ್​ನಿಂದ ಪತ್ತೆ ಹೆಚ್ಚಬಹುದು. ಜಿಲ್ಲಾಡಳಿತ ಏನಾದರೂ ಮಾಡಲಿ, ಮೊದಲು ಗಣಿಗಾರಿಕೆ ನಿಲ್ಲಿಸಬೇಕು.| ಕೆಂಪೂಗೌಡ
ರೈತ ಸಂಘದ ಜಿಲ್ಲಾಧ್ಯಕ್ಷ
ತಂತ್ರಜ್ಞಾನದ ಬಳಕೆ ಹೇಗೆ?:ಇಸ್ರೋ ಮ್ಯಾಪಿಂಗ್​ನಲ್ಲಿ ಭೂಮಿಯ ಮೇಲಿನ ಹವಾಮಾನ, ಕಲ್ಲಿನ ಸ್ವರೂಪ, ಪ್ರಾಕೃತಿಕ ಬದಲಾವಣೆ, ಭೂಮಿಯ ವೈವಿಧ್ಯತೆ, ಅರಣ್ಯ ಪ್ರದೇಶದಲ್ಲಿ ನೀರು ಹಾಗೂ ಮೇವಿನ ಸಂಗ್ರಹವನ್ನು ತಿಳಿಯಬಹುದು. ಈಗಾಗಲೇ ದೇಶದ ವಿವಿಧೆಡೆ ಈ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಬೆಟ್ಟದಲ್ಲಿ ನಡೆಯುವ ಚಟುವಟಿಕೆಗಳ ನಿಖರ ಮಾಹಿತಿ ಸಂಗ್ರಹಿಸುವುದರ ಜತೆಗೆ 2ಡಿ ಮತ್ತು 3ಡಿ ಚಿತ್ರಗಳನ್ನು ಪಡೆದುಕೊಳ್ಳಬಹುದು. ರಿಮೋಟ್ ಸೆನ್ಸಿಂಗ್ ಡೇಟಾದಿಂದ ಪ್ರತಿ ವಾರದ ಮಾಹಿತಿಯನ್ನು ತೆಗೆದುಕೊಳ್ಳಬಹುದು. ಈ ಸಂಬಂಧ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಅನ್ನು ಜಿಲ್ಲಾಡಳಿತ ಸಂರ್ಪಸಿ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದೆ.
ಗಣಿಗಾರಿಕೆ ಮೇಲೆ ನಿಷೇಧ:
2018, ಸೆ.25ರಂದು ಬೇಬಿ ಬೆಟ್ಟದಲ್ಲಿ ನಡೆದಿದ್ದ ಸ್ಪೋಟದ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ನೀಡಿದ್ದ ವರದಿ ಗಣಿಗಾರಿಕೆ ನಿಷೇಧಕ್ಕೆ ಮುನ್ನುಡಿ ಬರೆದಿತ್ತು. ಸ್ಪೋಟದಿಂದಾಗಿ ಭೂಮಿಯಲ್ಲಿ ಸೃಷ್ಟಿಯಾದ ಕಂಪನದಿಂದ ತೀವ್ರತೆ ಹಾಗೂ ಅಲೆಗಳ ಮಾರ್ಗವನ್ನು ಗುರುತಿಸಿ ಉಪಗ್ರಹ ಚಿತ್ರದೊಂದಿಗೆ ಅಧಿಕಾರಿಗಳು ವರದಿ ನೀಡಿದ್ದರು. ಇದರ ಆಧಾರದ ಮೇಲೆ ಜಿಲ್ಲಾಡಳಿತ ಗಣಿಗಾರಿಕೆ ಮೇಲೆ ನಿಷೇಧ ವಿಧಿಸಿ ಆದೇಶ ನೀಡಿದೆ.
ಸಿಸಿ ಕ್ಯಾಮರಾ ಅಳವಡಿಕೆಗೂ ಸಿದ್ಧತೆ:ಮ್ಯಾಪಿಂಗ್ ತಂತ್ರಜ್ಞಾನದ ಜತೆಗೆ ಗಣಿಗಾರಿಕೆಗೆ ಬಳಸುತ್ತಿರುವ ವಾಹನಗಳ ಮೇಲೆ ಕಣ್ಣಿಡುವ ಉದ್ದೇಶದಿಂದ ಕೆಲ ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದೊಡ್ಡ ಕಂದಕ ನಿರ್ವಿುಸುವುದರ ಜತೆಗೆ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಂಡು ಅಕ್ರಮ ಗಣಿಗಾರಿಕೆ ತಡೆಗೆ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ. ಒಟ್ಟಾರೆ, ಉತ್ತಮ ಯೋಜನೆ ಮೂಲಕ ಅಕ್ರಮ ಗಣಿಗಾರಿಕೆ ತಡೆಗೆ ಜಿಲ್ಲಾಡಳಿತ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಇದನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಿ ಗಣಿಗಾರಿಕೆಗೆ ಬ್ರೇಕ್ ಹಾಕಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಸರ್ಕಾರದ ಮೇಲೆ ನಿರಂತರ ಒತ್ತಡ:ಕೆಆರ್​ಎಸ್ ಡ್ಯಾಂಗೆ ಅಪಾಯವಿರುವ ಹಿನ್ನೆಲೆಯಲ್ಲಿ ಡ್ಯಾಂ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಜಿಲ್ಲೆಯಲ್ಲಿ ನಿರಂತರ ಹೋರಾಟಗಳು ನಡೆಯುತ್ತಿವೆ. ಪ್ರಗತಿಪರ ಸಂಘಟನೆಗಳ ಮುಖಂಡರು ಸಮಿತಿ ರಚಿಸಿ ಹೋರಾಟದ ತೀವ್ರತೆಯನ್ನು ಹೆಚ್ಚಿಸಿದ್ದರು. ಇದಲ್ಲದೆ, ಗಣಿಗಾರಿಕೆ ನಿಷೇಧಿಸಬೇಕೆಂಬ ಹೋರಾಟಕ್ಕೆ ಸಾಥ್ ನೀಡಿದ ಸಂಸದೆ ಸುಮಲತಾ ಅಂಬರೀಷ್, ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಬಂದರು. ಇತ್ತೀಚೆಗೆ ಕೆಆರ್​ಎಸ್ ಡ್ಯಾಂಗೆ ಬಾಗಿನ ಸಲ್ಲಿಸಲು ಆಗಮಿಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೂ ಮನವಿ ಸಲ್ಲಿಸಿ ಗಮನ ಸೆಳೆದಿದ್ದರು.
ಕಾಶ್ಮೀರದಲ್ಲಿ ನಾಲ್ವರು ಉಗ್ರರ ಹತ್ಯೆ, ಒಬ್ಬನ ಶರಣಾಗತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + twenty =
Remember me
