ಮಡಿಕೇರಿ:ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಿವಾಸದಿಂದ ಐಟಿ ಅಧಿಕಾರಿಗಳು 25 ಲಕ್ಷ ರೂ. ವಶಪಡಿಸಿಕೊಂಡಿದ್ದು, ಜ.21ರಂದು ಮೈಸೂರು ಕಚೇರಿಗೆ ಆಗಮಿಸುವಂತೆ ರಶ್ಮಿಕಾ ಹಾಗೂ ಅವರ ತಂದೆ ಮದನ್ ಮಂದಣ್ಣಗೆ ನೋಟಿಸ್ ಜಾರಿ ಮಾಡಿದ್ದಾರೆ.
ವಶಪಡಿಸಿಕೊಂಡಿರá-ವ ಹಣ ಸೆರೆನಿಟಿ ಹಾಲ್​ನಲ್ಲಿ ನಿಗದಿಯಾಗಿರುವ ವಿವಾಹಕ್ಕೆ ಸಂಬಂಧಿಸಿದಂತೆ ಮುಂಗಡವಾಗಿ ಪಡೆದಿದ್ದು ಎಂದು ಮದನ್ ಮಂದಣ್ಣ ಐಟಿ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಮುಂಗಡ ಹಣ ನೀಡಿದವರ ದೂರವಾಣಿ ಸಂಖ್ಯೆ ಇತ್ಯಾದಿ ಮಾಹಿತಿಯನ್ನು ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ.
2 ಪಾನ್ ಕಾರ್ಡ್:ರಶ್ಮಿಕಾ ಹೆಸರಿನಲ್ಲಿ ಎರಡು ಪಾನ್​ಕಾರ್ಡ್ ಇರುವುದು ಬೆಳಕಿಗೆ ಬಂದಿದೆ. ಒಂದು ಪಾನ್​ಕಾರ್ಡ್ ಅನ್ನು ಎಲ್ಲಿಯೂ ಬಳಸಿಲ್ಲ. ಎಂ.ಎ. ರಶ್ಮಿಕಾ, ಎಂ.ಎಂ. ರಶ್ಮಿಕಾ ಹೆಸರಿನಲ್ಲಿ 2 ಪಾನ್​ಕಾರ್ಡ್ ಪತ್ತೆಯಾಗಿದೆ. ಎಂ.ಎ. ರಶ್ಮಿಕಾ, ಅಯ್ಯಣ್ಣ ಅವರ ಪುತ್ರಿ ಎಂದಿದೆ. ಮದನ್ ಮಂದಣ್ಣ ಅವರ ತಂದೆ ಅಯ್ಯಣ್ಣ ಆಗಿದ್ದು, ಪಾನ್ ಕಾರ್ಡ್​ನಲ್ಲಿ ಲೋಪವಾಗಿರುವುದನ್ನು ಐಟಿ ಗಮನಕ್ಕೆ ತರಲಾಗಿದೆ.
ರಶ್ಮಿಕಾ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ 2012ರಲ್ಲಿ ಪಾನ್​ಕಾರ್ಡ್ ಮಾಡಿಸಲಾಗಿತ್ತು. ಮೊದಲು ಎಂ.ಎ. ರಶ್ಮಿಕಾ (ತಂದೆ- ಅಯ್ಯಣ್ಣ) ಎಂಬ ಹೆಸರಿನಲ್ಲಿ ಬಂದ ಕಾರ್ಡ್ ಅನ್ನು ಬದಲಾಯಿಸಲಾಯಿತು. ಆರು ತಿಂಗಳಿನಲ್ಲಿ ಎಂ.ಎಂ. ರಶ್ಮಿಕಾ (ತಂದೆ- ಮಂದಣ್ಣ) ಹೆಸರಿನಲ್ಲಿ ಹೊಸ ಕಾರ್ಡ್ ಬಂದಿದೆ. ಆದರೆ, ಹಳೇ ಕಾರ್ಡ್ ರದ್ದಾಗದಿರುವುದು ಎಡವಟ್ಟಾಗಿದೆ.
ಆಸ್ಪತ್ರೆ ನಿರ್ಮಾಣದ ಕನಸು:ಹುಟ್ಟೂರಿನಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ದೊರೆಯುವಂತೆ ಮಾಡುವ ಉದ್ದೇಶದಿಂದ ಬಿಟ್ಟಂಗಾಲದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಲು ಕನಸು ಕಾಣುತ್ತಿದ್ದಾರೆ. ಆ ಕಾರಣಕ್ಕಾಗಿ ಬಿಟ್ಟಂಗಾಲದಲ್ಲಿ ಐದುವರೆ ಎಕರೆ ಕೃಷಿ ಜಮೀನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಗಳ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲದ್ದರಿಂದ ತಂದೆ ಹೆಸರಿನಲ್ಲಿ ಜಾಗ ಖರೀದಿಸಲಾಗಿದೆ. ಆಸ್ಪತ್ರೆ ನಿರ್ವಿುಸಲು ಉದ್ದೇಶಿಸಿ ಖರೀದಿಸಿರುವ ಜಾಗದಲ್ಲಿ 5 ಸೆಂಟ್ ಜಾಗವನ್ನು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಕಟ್ಟಡ ನಿರ್ವಣಕ್ಕೆ ಉದಾರವಾಗಿ ನೀಡಲು ಉದ್ದೇಶಿಸಲಾಗಿದೆ.
4 ಕೋಟಿ ಸಾಲ:ವಿರಾಜಪೇಟೆ ಪಟ್ಟಣದಲ್ಲಿ ಸೆರೆನಿಟಿ ಹಾಲ್ ಕಟ್ಟಲು ಮದನ್ ಮಂದಣ್ಣ 4 ಕೋಟಿ ರೂ.ಸಾಲ ಪಡೆದುಕೊಂಡಿದ್ದರು. ಸಾಲ ತೀರಿಸಲು ಮಲ್ಲಮಟ್ಟಿಯಲ್ಲಿದ್ದ 12 ಎಕರೆ ಕಾಫಿ ತೋಟ, ವಿರಾಜಪೇಟೆ ಪಟ್ಟಣದ ವಿಜಯನಗರದಲ್ಲಿದ್ದ 2 ಮನೆ, ಮೈಸೂರು, ಬೆಂಗಳೂರಿನಲ್ಲಿದ್ದ ಸೈಟ್​ಗಳನ್ನು ಮಾರಾಟ ಮಾಡಿದ್ದರು. ಸೆರೆನಿಟಿ ಹಾಲ್ ನಿರ್ವಣಕ್ಕೆ ಮಾಡಿದ್ದ ಸಾಲ ಮರುಪಾವತಿ ಮಾಡಲು ಆಸ್ತಿಪಾಸ್ತಿ, ಮನೆ ಮಾರಾಟ ಮಾಡಿದ್ದೇನೆಂದು ಮದನ್ ಮಂದಣ್ಣ ಹೇಳುತ್ತಾರೆ.
-ಠಿ;60 ಲಕ್ಷ ಸಂಭಾವನೆ
ರಶ್ಮಿಕಾ ತೆಲುಗು ಚಿತ್ರವೊಂದಕ್ಕೆ 60 ಲಕ್ಷ ರೂ. ಪಡೆದಿರುವುದು ಗರಿಷ್ಠ ಸಂಭಾವನೆ ಎಂದು ಕುಟುಂಬಸ್ಥರು ಹೇಳುತ್ತಾರೆ. 1 ಕೋಟಿ ರೂ. ಸಂಭಾವನೆ ಇದುವರೆಗೂ ಪಡೆದಿಲ್ಲ. ಸಂಭಾವನೆಗೆ ಸಂಬಂಧಿಸಿದ ತೆರಿಗೆಯನ್ನು ಹೈದರಾಬಾದ್​ನಲ್ಲಿ ಸಕಾಲದಲ್ಲಿ ಪಾವತಿಸುತ್ತಿದ್ದಾರೆ. ವ್ಯವಸ್ಥಾಪಕರು ಮತ್ತು ಲೆಕ್ಕ ಪರಿಶೋಧಕರು ಇದನ್ನು ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾನು ಒಮ್ಮೆಯೂ ಡಿ.ಕೆ. ಶಿವಕುಮಾರ್ ಅವರನ್ನು ಖುದ್ದು ಭೇಟಿ ಮಾಡಿಲ್ಲ. ಹೀಗಿರುವಾಗ ನನಗೆ ಅವರೊಂದಿಗೆ ಒಡನಾಟ ಇದೆ ಎಂಬ ಸುಳ್ಳು ಸುದ್ದಿ ಹರಿದಾಡು ತ್ತಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ನಾನು ಮತ್ತು ಮಗಳು ಯಾವ ತಪ್ಪೂ ಮಾಡಿಲ್ಲ. 21ರಂದು ಮೈಸೂರು ಕಚೇರಿಗೆ ಹಾಜರಾಗುತ್ತೇವೆ.
| ಮದನ್ ಮಂದಣ್ಣ
| ಅಜ್ಜಮಾಡ ರಮೇಶ್ ಕುಟ್ಟಪ್ಪ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
