ಬೆಂಗಳೂರು:ಪರಿಸ್ಥಿತಿ ಸರಿಯಾಗಿದ್ದರೆ ಇವರೆಲ್ಲ ಎಸಿ ಕಚೇರಿಯಲ್ಲಿ ಕುಳಿತು ದುಡಿಯುತ್ತಿದ್ದರು, ವಾರಾಂತ್ಯದಲ್ಲಿ ಕುಟುಂಬದ ಜತೆ ಕಾಲಕಳೆಯುತ್ತಿದ್ದರು. ಆದರೆ ಕರೊನಾ ಇವರನ್ನು ಅಕ್ಷರಶಃ ಬೀದಿಗೆ ತಂದಿದೆ! ಅರ್ಥಾತ್ ಬಡವರು, ಕಾರ್ವಿುಕರು, ವಲಸಿಗರಿಗೆ ಆಹಾರ ಸಾಮಗ್ರಿ, ಊಟ ನೀಡುತ್ತಲೇ ಇವರೆಲ್ಲ ಉದ್ಯೋಗದ ಪ್ರತಿಷ್ಠೆ ಬಿಟ್ಟು ರಸ್ತೆಗಿಳಿದು ಮೂಟೆ ಹೊರುವ ಕಾಯಕ ಆರಂಭಿಸಿದ್ದಾರೆ. ದೂರದಲ್ಲೆಲ್ಲೋ ಇರುವ ಪಾಲಕರಿಗೆ ಅತ್ಯವಶ್ಯಕ ಔಷಧ ಬೇಕೆಂದು ಮಕ್ಕಳು ಕರೆ ಮಾಡಿದರೆ ಸಾಕು ಹಿಂದುಮುಂದು ನೋಡದೆ ಇವರೇ ಹೋಗಿ ಕೊಟ್ಟು ಬರುತ್ತಾರೆ, ವಲಸಿಗ ಕಾರ್ವಿುಕರ ಕಾಲನಿಗಳಿಗೆ ತೆರಳಿ ಊಟ, ನೀರು ಹಂಚುತ್ತಾರೆ. ಸುಮಾರು 10 ಸಾವಿರ ಐಟಿ, ಬಿಟಿ ಉದ್ಯೋಗಿಗಳು ರಾಜ್ಯ ಸರ್ಕಾರದ ಕರೊನಾ ಟಾಸ್ಕ್ ಫೋರ್ಸ್​ಗೆ ಹೆಗಲುಕೊಟ್ಟು ಬಡವರು, ನಿರ್ಗತಿಕರಿಗಾಗಿ ದುಡಿಯುತ್ತಿದ್ದಾರೆ.
ಆನ್​ಲೈನ್ ಆಹಾರ ಡೆಲಿವರಿ ಆ್ಯಪ್: ಶೇ.70 ಅಂಗವಿಕಲ ಉದ್ಯೋಗಿಗಳನ್ನು ಹೊಂದಿರುವ ಕಾಲ್​ಸೆಂಟರ್​ಗೆ (155214) ಬರುವ ಕರೆಗಳ ಆಧಾರದಲ್ಲಿ, ನೋಂದಣಿ ಯಾದ ಈ ಸ್ವಯಂಸೇವಕರಿಗೆ ಕೆಲಸ ಹಂಚಿಕೆ ಮಾಡಲಾಗುತ್ತದೆ. ಆನ್​ಲೈನ್ ಆಹಾರ ವಿತರಣೆ ಮಾಡುವ ಸ್ವಿಗ್ಗಿ ಸಂಸ್ಥೆ ತನ್ನ ಸಾಫ್ಟ್ ವೇರನ್ನು ಇದಕ್ಕಾಗಿ ಒದಗಿಸಿದ್ದು, ಆಹಾರ ತಯಾರಾಗುವ 8 ಅಡುಗೆ ಮನೆಗಳು, ಬೇಕಾಗುವ ಆಹಾರ, ಫಲಾನುಭವಿಗಳಿಗೆ ವಿತರಣೆಯನ್ನು ಸ್ವಿಗ್ಗಿ ರೀತಿ ನಿರ್ವಹಣೆ ಮಾಡಲಾಗುತ್ತಿದೆ. ಬಿಡುವಿಲ್ಲದ ಕಾಯಕ
* ಬಡವರು, ವಲಸಿಗರಿಗಾಗಿ ಪ್ರತಿನಿತ್ಯ ಮಧ್ಯಾಹ್ನ, ರಾತ್ರಿಯ ಊಟವನ್ನು ವಿಪ್ರೊ, ಆರ್ಟ್ ಆಫ್ ಲಿವಿಂಗ್, ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ, ಅದಮ್ಯ ಚೇತನ, ಮತ್ತಿತರ ಸಂಸ್ಥೆಗಳು ಪ್ರತಿದಿನ 1,80,000 ಪೊಟ್ಟಣ ಮಾಡಿ ವಿತರಿಸುತ್ತವೆ
* ಆಹಾರ ಸಾಮಗ್ರಿ ಖಾಲಿಯಾಗಿರುವ ಕುಟುಂಬಗಳಿಗೆ 1 ಲಕ್ಷ ಆಹಾರದ ಕಿಟ್​ಗಳನ್ನು ಇಸ್ಕಾನ್ ಸಂಸ್ಥೆಯಲ್ಲಿ ಹಗಲು ರಾತ್ರಿ ಪ್ಯಾಕ್ ಮಾಡಿದ್ದು ಇದೇ ಟೆಕ್ಕಿಗಳು
* ಉಡುಪಿಯಲ್ಲಿದ್ದ ಮೂರ್ಛೆ ರೋಗ ಪೀಡಿತರಿಗೆ ಬೆಂಗಳೂರಿನಿಂದ ತಮ್ಮದೇ ಕಾರಲ್ಲಿ ಹೋಗಿ ಔಷಧ ತಲುಪಿಸಿ ಬಂದಿದ್ದಾರೆ
* ಶೌರ್ಯಚಕ್ರ ಪುರಸ್ಕೃತ ಯೋಧ ಕರ್ನಲ್ ಬಾಲ್ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅಂತ್ಯಸಂಸ್ಕಾರಕ್ಕಾಗಿ ಗುಜರಾತ್​ನ ವಡೋದರಾದಿಂದ ಆಗಮಿಸಲಿರುವ ಅವರ ಪಾಲಕರನ್ನು ಬೆಳಗಾವಿ ಗಡಿಯಿಂದ ಬೆಂಗಳೂರಿನವರೆಗೆ ಕರೆತರುವ ಕಾರ್ಯವನ್ನು ಟೆಕ್ಕಿಗಳು ಮಾಡುತ್ತಿದ್ದಾರೆ
* ಬೆಂಗಳೂರಿನ ಸೀಲ್​ಡೌನ್ ಪ್ರದೇಶಗಳಲ್ಲಿ ಈ ತಂಡವೇ ಡ್ರೋನ್​ವುೂಲಕ ನಿಗಾ ವಹಿಸುತ್ತಿದೆ
* ಮನೆಯಲ್ಲೆ ಇದ್ದು ಖಿನ್ನತೆಗೆ ಒಳಗಾಗುವವರಿಗೆ, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುವವರಿಗೆ ಸಾಂತ್ವನ ಹೇಳಲು ಸುಮಾರು 120 ಮಹಿಳೆಯರ ‘ಶಿ ವಾರಿಯರ್ಸ್’ ತಂಡ ಕೆಲಸ ಮಾಡುತ್ತಿದೆ.
| ರಮೇಶ ದೊಡ್ಡಪುರ
ರಾಜ್ಯದಲ್ಲಿ ಯಾರೂ ಉಪವಾಸ ಇರಬಾರದೆಂದು ಸೂಚಿಸಿರುವ ಸಿಎಂ ಯಡಿಯೂರಪ್ಪನವರೇ ಈ ಕಾರ್ಯಕ್ಕೆ ಬೆನ್ನೆಲುಬು. ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ್, ಕಾರ್ವಿುಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಸೇರಿ ಹಲವರ ಸಹಕಾರದಿಂದ ಈ ಕಾರ್ಯ ನಡೆಯುತ್ತಿದೆ.| ಮಾಳವಿಕ ಅವಿನಾಶ್ಕರೊನಾ ವಾರಿಯರ್ಸ್ ಟಾಸ್ಕ್​ಫೋರ್ಸ್ ಮುಖ್ಯಸ್ಥೆ
ಪ್ರಾರಂಭದಲ್ಲಿ ಕೆಲವರಲ್ಲಿ ಬಳಲಿಕೆ ಇತ್ತು. ಒಂದು ದಿನ ವಿಶ್ರಾಂತಿ ಪಡೆದು ಮತ್ತೆ ಬಂದರು. ಇಂತಹ ಐತಿಹಾಸಿಕ, ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ಸಾರ್ಥಕತೆ ನಮ್ಮಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.| ಸೊನಾಲಿ ಸಿಂಗ್ಐಟಿ ಬಿಟಿ ಕಂಪನಿಯ ಎಚ್.ಆರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 1 =
Remember me
