ಬೆಂಗಳೂರು: ತಂತ್ರಜ್ಞಾನದ ಬೆಳವಣಿಗೆ, ಆವಿಷ್ಕಾರಗಳಲ್ಲಿ ಅದ್ವಿತೀಯ ಸಾಧನೆ ಸಂತೋಷದಾಯಕ‌. ಅದೇ ಕಾಲಕ್ಕೆ ಡಿಜಿಟಲ್ ಅಂತರದ ಸವಾಲು ಜಗತ್ತಿನ ಮುಂದಿರುವುದು ಗಮನಾರ್ಹ. ತಂತ್ರಜ್ಞಾನದ ಪ್ರಯೀಜನಗಳು ಪ್ರತಿಯೊಬ್ಬರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಅರಮನೆಯಲ್ಲಿ ಆಯೋಜಿಸಿರುವ ಮೂರು ದಿನಗಳ ಬೆಂಗಳೂರು ತಾಂತ್ರಿಕ ಶೃಂಗ 26ನೇ ಆವೃತ್ತಿಯ ಸಮಾವೇಶಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಡಿಜಿಟಲ್ ವಿಭಜನೆಯು ನಾವು ಪರಿಹರಿಸಬೇಕಾದ ವಾಸ್ತವಿಕ ಸವಾಲಾಗಿದೆ.  ಪ್ರತಿಯೊಬ್ಬ ನಾಗರಿಕರನ್ನು ಅವರ ಹಿನ್ನೆಲೆಯನ್ನು ಲೆಕ್ಕಿಸದೆ ತಂತ್ರಜ್ಞಾನದ ಪ್ರಯೋಜನ ತಲುಪಿಸಬೇಕಾಗಿದೆ ಎಂದರು.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಆಡಳಿತದಲ್ಲಿ ತಿಳುವಳಿಕೆಯುಳ್ಳ ನಿರ್ಧಾರ ಕೈಗೊಳ್ಳಲು ಡೇಟಾ ಮತ್ತು ವಿಶ್ಲೇಷಣೆಗಳ ಶಕ್ತಿಯನ್ನು ಬಳಸಿಕೊಳ್ಳುವ ಉದ್ದೇಶಿತ ಉಪಕ್ರಮಗಳ ಮೂಲಕ ಡಿಜಿಟಲ್ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದರು.
ಬೆಂಗಳೂರಿನಾಚೆಗಿನ ಪ್ರದೇಶಗಳಲ್ಲಿ ಪೂರಕ ವಾತಾವರಣ ಸೃಷ್ಟಿ, ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿ ಡಿಜಿಟಲ್ ವಿಭಜನೆಯನ್ನು ಸೇತುವೆಯಾಗಿಸಿಕೊಳ್ಳಲು ಮೊದಲ ಪ್ರಾಶಸ್ತ್ಯನೀಡಿದ್ದು, ಬಿಯಾಂಡ್ ಬೆಂಗಳೂರು ಉಪಕ್ರಮದ ವಿಶೇಷತೆಯಾಗಿದೆ ಎಂದು ಹೇಳಿದರು.
ತಂತ್ರಜ್ಣಾನ, ನಾವೀನ್ಯತೆ, ನವೋದ್ಯಮವು ಒಳಗೊಂಡು ರಾಜ್ಯದಲ್ಲಿ 12 ಲಕ್ಷ ನೇರ, 31 ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ದೇಶದ ಒಟ್ಟು ಐಟಿ ರಫ್ತಿನಲ್ಲಿ ಶೇಕಡ 40ರಷ್ಟು ಕರ್ನಾಟಕದ ಪಾಲಿದೆ‌ ಅಷ್ಟೇ ಅಲ್ಲ, ಜಾಗತಿಕ ಟೆಕ್ ಹಬ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ, ಪ್ರಿಯಾಂಕ್ ಖರ್ಗೆ, ಉದ್ಯಮಿಗಳು, ಹಿರಿಯ ಅಧಿಕಾರಿಗಳು ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − four =
Remember me
