ಬೆಂಗಳೂರು:ಶಾಸಕರ ಅಮಾನತು ಕುರಿತು ಮಾತನಾಡಿದ ಸ್ಪೀಕರ್​ ಯು.ಟಿ. ಖಾದರ್, “ಸದನವನ್ನು ಗೌರವಯುತವಾಗಿ ನಡೆಸುವುದು ನನ್ನ ಕರ್ತವ್ಯ, ಇಲ್ಲಿ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಪೀಠಕ್ಕೆ ಅಗೌರವ ತೋರಿದ್ದಕ್ಕೆ ಕ್ರಮ ಕೈಗೊಂಡಿದ್ದೇವೆ. ನನ್ನ ಕರ್ತವ್ಯವನ್ನು ನಾನು ಶಿಸ್ತಿನಿಂದ ನಿರ್ವಹಿಸಿದ್ದೇನೆ” ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯದಲ್ಲಿ ಜೆಡಿಎಸ್ ವಿಸರ್ಜಿಸಿ ಉಪಕಾರ ಮಾಡಿ: ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ವ್ಯಂಗ್ಯ
“ಅತೀವ ಬೇಸರದಿಂದ ಅಮಾನತು ಮಾಡಿದ್ದೇವೆ. ಅವರೆಲ್ಲರೂ ನಮ್ಮ ಸದಸ್ಯರೆ. ಐಎಎಸ್ ಅಧಿಕಾರಿಗಳ ದುರ್ಬಳಕೆ ಆರೋಪ ಬಂತು, ಆದರೆ ನೊಟೀಸ್ ಕೊಡದಿದ್ದರು ಚರ್ಚೆಗೆ ಮುಕ್ತ ಅವಕಾಶ ಕೊಟ್ಟಿದ್ದೆ, ರೈತರ ಸಮಸ್ಯೆಗಳಿದ್ದವು ಚರ್ಚೆ ಮಾಡಬಹುದಿತ್ತು. ಅವರನ್ನು ಕರೆಸಿ 15ಕ್ಕೂ ಹೆಚ್ಚು ನಿಮಿಷಗಳ ಮಾತನಾಡಿದ್ದೇನೆ. ಕಲಾಪಕ್ಕೆ ಸಹಕರಿಸುವಂತೆ ಮನವಿ ಕೂಡ ಮಾಡಿದ್ದೇನೆ. ನಾವು ಈ ಬಗ್ಗೆ ಹೇಳುತ್ತೀವಿ ಎಂದವರು ಮತ್ತೆ ಹೇಳಲಿಲ್ಲ” ಎಂದು ಹೇಳಿದರು.
“ಬಿಲ್​​ಗಳನ್ನು ಪಾಸ್ ಮಾಡುವುದು ನಮ್ಮ ಮುಂದಿತ್ತು. ಆದ್ರೆ, ಧರಣಿಯ ನಡುವೆಯೂ ನಾವು ಬಿಲ್ ಪರಿಗಣಿಸಿದ್ದೆವು. ಅಧಿಕ ಸಮಯ ಧರಣಿಯಲ್ಲೇ ಕಳೆದುಹೋಯಿತು” ಎಂದು ಬಿಜೆಪಿ, ಜೆಡಿಎಸ್ ಶಾಸಕರ ನಡೆಗೆ ಸ್ಪೀಕರ್ ಯು.ಟಿ. ಖಾದರ್​ ಬೇಸರ ವ್ಯಕ್ತಪಡಿಸಿದರು.
ಗ್ರಾಹಕರ ಗಮನಸೆಳೆಯುತ್ತಿದೆ ನಥಿಂಗ್ ಫೋನ್-2; ಏನಿದರ ವಿಶೇಷತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 1 =
Remember me
