ಬೆಂಗಳೂರು:‘ಏನೇ ಆದರೂ ಕುಡಿಯುವ ಅಭ್ಯಾಸವನ್ನು ನಿಲ್ಲಿಸಲಾಗುತ್ತಿಲ್ಲ’ ಎಂಬುವವರಿಗೆ ಮದ್ಯವ್ಯಸನ ಮುಕ್ತರಾಗಲು ಈ ಲಾಕ್​ಡೌನ್ ಅವಧಿಯೇ ಸಕಾಲ. ಇಂಥದ್ದೊಂದು ಅಭಿಪ್ರಾಯವನ್ನು ತಜ್ಞವೈದ್ಯರೇ ವ್ಯಕ್ತಪಡಿಸಿದ್ದು, ಲಾಕ್​ಡೌನ್ ಸಮಯದಲ್ಲಿ ಕುಡಿಯಲು ಮದ್ಯ ಸಿಗದೇ ಖಿನ್ನರಾಗುವ ಬದಲು, ಅದೇ ಅವಧಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಮದ್ಯವ್ಯಸನ ತೊರೆದು ವಿಭಿನ್ನ ವ್ಯಕ್ತಿತ್ವದವರಾಗಿ ಹೊರಹೊಮ್ಮುವ ಅವಕಾಶವೂ ಇದೆ ಎನ್ನುತ್ತಾರೆ ತಜ್ಞರು. ವ್ಯಸನಿಗಳು ಮದ್ಯ ಸಿಗದೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆಂದು ಮತ್ತೆ ಆಲ್ಕೋಹಾಲ್ ಕೊಟ್ಟು ಸಂತೈಸುವ ಬದಲು ಸೂಕ್ತ ಚಿಕಿತ್ಸೆ ಕೊಡಿಸಿ ಶಾಶ್ವತವಾಗಿ ಮದ್ಯವ್ಯಸನ ಮುಕ್ತರನ್ನಾಗಿಸಬೇಕು. ಅಲ್ಲದೆ ಆಪ್ತ ಸಮಾಲೋಚನೆ ಸೌಲಭ್ಯ ಒದಗಿಸಿ ಮನೋಸ್ಥೈರ್ಯ ತುಂಬಬೇಕು. ಲಾಕ್​ಡೌನ್ ಅವಧಿಯನ್ನು ಹೀಗೆ ಸದುದ್ದೇಶಕ್ಕೆ ಬಳಸಿಕೊಳ್ಳಬಹುದು ಎನ್ನುತ್ತಾರೆ ಮನಶಾಸ್ತ್ರಜ್ಞರು.
ಮದ್ಯ ಸಿಗದ್ದಕ್ಕೆ ಆತ್ಮಹತ್ಯೆ:ಲಾಕ್​ಡೌನ್​ನಿಂದ ಕುಡಿಯಲು ಮದ್ಯ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಇದು ಕರೊನಾ ಜತೆಗೆ ಸರ್ಕಾರಕ್ಕೆ ಮತ್ತೊಂದು ತಲೆನೋವು ತಂದೊಡ್ಡಿದೆ. ಮುಂದಿನ ಕೆಲ ದಿನಗಳಲ್ಲಿ ಮದ್ಯವ್ಯಸನಿಗಳ ಆತ್ಮಹತ್ಯೆ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಮನೋವೈದ್ಯರು ಆತಂಕ ವ್ಯಕ್ಯಪಡಿಸಿದ್ದಾರೆ. ದಿನನಿತ್ಯ ಕುಡಿಯುವವರಿಗೆ ಹಠಾತ್ ಮದ್ಯ ಸಿಗದಂತಾದಾಗ ಕೆಲವರು ಹಲವಾರು ದೈಹಿಕ-ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಮದ್ಯ ಸಿಗದ 48 ಗಂಟೆಗಳಲ್ಲಿ ಸಮಸ್ಯೆಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತವೆ. 72 ಗಂಟೆ ತರುವಾಯ ಸಮಸ್ಯೆಗಳು ಉಲ್ಬಣಿಸುತ್ತವೆ.
ಸಾಮಾನ್ಯ ಸಮಸ್ಯೆಗಳು:ಒಮ್ಮೆಲೇ ಆಲ್ಕೊಹಾಲ್ ಸೇವನೆ ನಿಲ್ಲಿಸುವುದ ರಿಂದ ಗಾಬರಿ ಆಗುವುದು, ಕೈ ನಡುಗುವುದು, ಬೆವರುವುದು, ಹೃದಯ ಬಡಿತ ಹೆಚ್ಚಳ, ನಿದ್ರೆ ಬಾರದಿರುವ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.
ಸಂಕೀರ್ಣ ಸಮಸ್ಯೆಗಳು:ದಿನ ಕಳೆದಂತೆ ಸಮಸ್ಯೆಗಳು ಸಂಕೀರ್ಣ ಗೊಂಡಾಗ ಬೇರೆಯವರಿಗೆ ಕಾಣದಿರುವುದು ಇವರಿಗೆ ಕಾಣುತ್ತದೆ (Visual Hallucinations). ಇಲ್ಲದಿದ್ದರೂ ಚಿಕ್ಕಚಿಕ್ಕ ಹುಳುಗಳು ಓಡಾಡಿದಂತಾಗುವುದು, ದಾರದ ಎಳೆ ಕಣ್ಮುಂದೆ ಕಾಣುವುದು, ಅಲ್ಲೇನೋ ಕಾಣುತ್ತದೆ, ಇಲ್ಲೇನೋ ಕಾಣುತ್ತದೆ, ಯಾರೋ ನನ್ನನ್ನು ಹೊಡೆಯಲು ಬರುತ್ತಾರೆ, ಯಾರೋ ನನ್ನನ್ನು ಸಾಯಿಸುತ್ತಾರೆ ಎಂಬ ಭ್ರಮೆಗಳು ಶುರುವಾಗುತ್ತವೆ. ಈ ರೀತಿಯ ಭಯಗಳನ್ನು ಕೆಲವರು ಎದುರಿಸಿದರೆ ಮತ್ತೆ ಕೆಲವರಿಗೆ ಅದನ್ನು ಸಹಿಸುವ ಶಕ್ತಿ ಇರುವುದಿಲ್ಲ. ಅಂಥವರು ಆತ್ಮಹತ್ಯೆಯಂಥ ನಿರ್ಧಾರ ತಳೆಯುತ್ತಾರೆ.
ಎಚ್ಚರ ಅತ್ಯಗತ್ಯ:ಕುಡಿತ ಮಿದುಳಿನ ಗಾಬಾ ರಿಸೆಪ್ಟರ್ ಮೇಲೆ ಪರಿಣಾಮ ಬೀರುತ್ತದೆ. ಮಿದುಳಿನ ಕ್ರಿಯಾಶೀಲತೆಗೆ ಅವಶ್ಯವಾಗಿರುವ ಚಿಕಿತ್ಸೆ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಬೇಕು. ಮದ್ಯಪಾನದಿಂದ ಆಗುವ ವಿಟಮಿನ್ ಬಿ-1 ಕೊರತೆ ನೀಗಿಸಬೇಕು. ಅತಿಯಾಗಿ ಕುಡಿಯುವವರು ಸರಿಯಾಗಿ ಊಟ ಮಾಡುವುದಿಲ್ಲ. ಅಂಥವರಲ್ಲಿ ಪೊ›ಟೀನ್ ಕಡಿಮೆಯಾಗಿ ಫಿಟ್ಸ್ ಬರುವ ಸಾಧ್ಯತೆಯೂ ಇರ ುತ್ತದೆ. ಮಧುಮೇಹ, ರಕ್ತದೊತ್ತಡದಂಥ ಕಾಯಿಲೆಗಳಿದ್ದರೆ ಇಂಥ ಸಂದರ್ಭದಲ್ಲಿ ಎಚ್ಚರ ವಹಿಸುವುದು ಅತ್ಯಗತ್ಯ.
ಗಾಬರಿ ಬೇಕಿಲ್ಲ:ಮದ್ಯ ಸೇವನೆ ಒಮ್ಮೆಲೇ ನಿಲ್ಲಿಸಿದವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಗಾಬರಿ, ಖಿನ್ನತೆ, ಮಾನಸಿಕ ಗಲಿಬಿಲಿಗೆ ಒಳಗಾಗದಂತೆ ಸಮಾಧಾನ ಚಿತ್ತ ತರುವಂಥ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಕುಡಿತದಿಂದ ಎದುರಾಗುವ ದೈಹಿಕ-ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಇದೆ. ಆರಂಭಿಕ ಹಂತದಲ್ಲಿ ವೈದ್ಯರು ಉದ್ವಿಗ್ನತೆ ಶಮನಗೊಳಿಸಲು ಪೂರಕ ಚಿಕಿತ್ಸೆ ನೀಡುತ್ತಾರೆ. ವಿಟಮಿನ್ ಬಿ-1 ಚುಚ್ಚುಮದ್ದು ನೀಡುತ್ತಾರೆ. ಜತೆಗೆ ಮಾನಸಿಕ ಸ್ಥೈರ್ಯವನ್ನೂ ತುಂಬುತ್ತಾರೆ.
ಮದ್ಯಸೇವನೆಯ ಚಟದಿಂದ ಬಿಡಿಸಿಕೊಳ್ಳಲು ಲಾಕ್​ಡೌನ್ ಅವಧಿಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ವ್ಯಸನಮುಕ್ತ ಗೊಳಿಸಲು ಸಕಾಲಿಕ ಮತ್ತು ಸೂಕ್ತ ಚಿಕಿತ್ಸೆ ನೀಡಬೇಕು.
| ಡಾ. ಎಸ್. ಧನಂಜಯ ಮನೋವೈದ್ಯರು, ಬೆಂಗಳೂರು
ಮದ್ಯದ ಅಂಗಡಿ ತೆರೆಯಲು ಸಿಎಂಗೆ ಪತ್ರ
ಕರೊನಾ ವೈರಸ್ ಹಿನ್ನೆಲೆಯಲ್ಲಿ ದೇಶವೇ ಲಾಕ್​ಡೌನ್ ಆಗಿದೆ. ಒಂದೆಡೆ ಜನಸಾಮಾನ್ಯರು ದಿನಬಳಕೆಯ ಅಗತ್ಯ ವಸ್ತುಗಳ ಖರೀದಿಗೆ ಪರದಾಡುತ್ತಿದ್ದರೆ, ಇನ್ನೊಂದೆಡೆ ಮದ್ಯ ಸಿಗದೇ ಕುಡುಕರ ಕಾಟ ತಾರಕಕ್ಕೇರಿದೆ. ಲಾಕ್​ಡೌನ್​ನಿಂದ ಮದ್ಯ ಮಾರಾಟ ಸ್ಥಗಿತಗೊಂಡಿ ರುವುದರಿಂದ ಸಿಎಂ ಯಡಿಯೂರಪ್ಪ ಅವರಿಗೆ ಹಾಗೂ ಅಬಕಾರಿ ಸಚಿವರಿಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿಯೊಬ್ಬ, ‘ದಯ ವಿಟ್ಟು ಮದ್ಯದಂಗಡಿ ತೆರೆಯಿರಿ, ಸಾಮಾಜಿಕ ಅಂತರ ಕಾಯ್ದುಕೊಂಡೇ ಮದ್ಯ ಖರೀದಿಸುತ್ತೇವೆ’ ಎಂದು ಪತ್ರ ಮುಖೇನ ಗೋಗರೆದಿದ್ದಾನೆ.
ವೈದ್ಯರ ಸಲಹೆಗಳು
ಮದ್ಯ ಸಿಗದಿದ್ದಕ್ಕೆ ಆತ್ಮಹತ್ಯೆ
ಬೆಂಗಳೂರು: ರಾಜ್ಯದಲ್ಲಿ ಮದ್ಯ ಸಿಗದೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 6ಕ್ಕೆ ಏರಿದ್ದು, ಕರೊನಾ ಸೋಂಕಿನಿಂದ ಮೃತರಾದವರಿಗಿಂತ (ಮೂವರು) ಇವರೇ ಹೆಚ್ಚಾಗಿದ್ದಾರೆ. ಕೋಲಾರ ಜಿಲ್ಲೆ ಡಿ.ಕೆ.ಹಳ್ಳಿಯಲ್ಲಿ ರಮೇಶ್ (24) ಎಂಬಾತ ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ದುರ್ಗಾ ಗ್ರಾಮದ ತೆಳ್ಳಾರು ಬೆದ್ರಪಲ್ಕೆ ನಿವಾಸಿ ನಾಗೇಶ್ ಆಚಾರ್ಯ (37), ಕಡಬ ನಿವಾಸಿ ಟೋನಿ ಥಾಮಸ್ (50), ಉಡುಪಿ ಜಿಲ್ಲೆ ಉದ್ಯಾವರ ಬೋಳಾರಗುಡ್ಡೆ ನಿವಾಸಿ ಗಣೇಶ (42) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಉಡುಪಿ ಜಿಲ್ಲೆ ಹೆಮ್ಮಾಡಿಯ ಸಂತೋಷ ನಗರ ನಿವಾಸಿ ರಾಘವೇಂದ್ರ (37) ಬೀದರ್ ಜಿಲ್ಲೆ ಭಾಲ್ಕಿಯಲ್ಲಿ ಕುಂದಾಪುರ ಮೂಲದ ಭಾಸ್ಕರ್(40) ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆ ಐ.ಡಿ.ಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಹನುಮಂತರಾಯಪ್ಪ (60) ಕತ್ತು ಕೊಯ್ದುಕೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ.
ಲಾಕ್​ಡೌನ್​ನಿಂದ ಆಲ್ಕೋಹಾಲ್​ ಸಿಗದಿದ್ದಕ್ಕೆ ಮನನೊಂದು ಉಡುಪಿಯಲ್ಲಿ ಸರಣಿ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − nine =
Remember me
