ಬೆಂಗಳೂರು:ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆಯೇ ಶಾಸಕ ಜಮೀರ್ ಅಹಮದ್, ಶ್ರೀಲಂಕಾದಲ್ಲಿ ಬೇರೆಯವರ ಪಾಲುದಾರಿಕೆಯೊಂದಿಗೆ ತಮ್ಮದೂ ಒಂದು ಕ್ಯಾಸಿನೋ ಇದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ಪಕ್ಷದ ಶಾಸಕ ಜಮೀರ್‌ರನ್ನು ಕರೆಸಿ ಪ್ರಕರಣದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದ ಸಂದರ್ಭದಲ್ಲಿ ಜಮೀರ್, ಈ ಪ್ರಕರಣಕ್ಕೂ ನನ್ನ ಪಾಲುದಾರಿಕೆ ಕ್ಯಾಸಿನೊಗೂ ಸಂಬಂಧವಿಲ್ಲ. ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋಗಿ ಸಚಿವರಾದವರಿಗೂ ಕ್ಯಾಸಿನೊ ವ್ಯವಹಾರ ಗೊತ್ತಿದೆ. ಶ್ರೀಲಂಕಾಗೆ ಬಿಜೆಪಿ ಸೇರಿದಂತೆ ಎಲ್ಲ ಪಕ್ಷದ ನಾಯಕರು ಹೋಗಿದ್ದಾರೆ. ಅವರ ಪಾಸ್‌ಪೋರ್ಟ್ ಪರಿಶೀಲಿಸಿದರೆ ಗೊತ್ತಾಗಲಿದೆ ಎಂದು ವಿವರಣೆ ನೀಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ:ಗಾಂಜಾ ವ್ಯಸನಿಗಳ ಚಳಿ ಬಿಡಿಸಿದ ಪೊಲೀಸರು, ಉಡುಪಿಯಲ್ಲಿ 10 ಮಂದಿ ವಶಕ್ಕೆ
‘ನನ್ನದೇನೂ ತಪ್ಪಿಲ್ಲ, ಆರೋಪಿಗಳೊಂದಿಗೆ ಯಾವ ವ್ಯವಹಾರವೂ ಇಲ್ಲ. ಯಾವ ತನಿಖೆ ಬೇಕಾದರೂ ಮಾಡಲಿ. ಯಾವುದೇ ಅಕ್ರಮ ಕ್ಯಾಸಿನೊ ವ್ಯವಹಾರ ಅಲ್ಲ. ಪಾಲುದಾರಿಕೆಯಲ್ಲಿ ಸಕ್ರಮ ಕ್ಯಾಸಿನೋ ಇದೆ. ಈ ಬಗ್ಗೆ ಆಡಳಿತ ಪಕ್ಷದ ಶಾಸಕರು, ಸಚಿವರಿಗೆ ಗೊತ್ತಿದೆ. ಗೊತ್ತಿರುವ ಸಚಿವರು ಸುಮ್ಮನಿದ್ದಾರೆ’ ಎಂದು ವಿವರಿಸಿದ್ದಾರೆಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ:ರಾಜ್ಯ ಕಾಂಗ್ರೆಸ್‌ಗೆ ಇನ್ನು ಸುರ್ಜೆವಾಲಾ ಉಸ್ತುವಾರಿ; ದಿನೇಶ್‌ಗೆ 3 ರಾಜ್ಯಗಳ ಜವಾಬ್ದಾರಿ
ಸಿದ್ದರಾಮಯ್ಯ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಜಮೀರ್, ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಾನು ಇರುವುದು ಸಾಬೀತಾದಲ್ಲಿ ರಾಜ್ಯದಲ್ಲಿರುವ ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ಬಿಟ್ಟು ಕೊಡುತ್ತೇನೆ. ನನ್ನ ಮೇಲೆ ಬರುತ್ತಿರುವ ಆರೋಪ ರಾಜಕೀಯ ಪ್ರೇರಿತ. ಡ್ರಗ್ಸ್ ಆರೋಪಿ ಫಾಜಿಲ್ ನಾಲ್ಕು ವರ್ಷದ ಹಿಂದೆ ಪರಿಚಯವಾಗಿದ್ದ. ಈಗ ನಾನು ಆತನ ಸಂಪರ್ಕದಲ್ಲಿಲ್ಲ. ನಾನು ಅಲ್ಪಸಂಖ್ಯಾತನಾಗಿರುವ ಕಾರಣಕ್ಕೆ ಹಾಗೂ ನನ್ನನ್ನು ತುಳಿಯಲು ಹವಣಿಸಲಾಗುತ್ತಿದೆ. ನಟಿ ಸಂಜನಾರನ್ನು ಕರ್ನಾಟಕದಲ್ಲೇ ನೋಡಿಲ್ಲ. ಈಗ ಪೊಲೀಸ್ ಕಸ್ಟಡಿಯಲ್ಲಿರುವ ಸಂಜನಾ ಅವರನ್ನೇ ತನಿಖೆ ಮಾಡಿ ನನ್ನ ಪಾತ್ರ ಸಾಬೀತು ಮಾಡಲಿ ಎಂದರು.
ಕಂಗನಾರನ್ನು ಕರೆದೊಯ್ದ ಇಂಡಿಗೋಗೆ ಡಿಜಿಸಿಎ ನೋಟಿಸ್​ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
