
‘ಕುರುಕ್ಷೇತ್ರ’ ಚಿತ್ರದಲ್ಲಿ ಅಂಬರೀಷ್ ಅವರೇ ಭೀಷ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಮೊದಲೇ ನಾನು ಮತ್ತು ನಿರ್ವಪಕ ಮುನಿರತ್ನ ತೀರ್ವನಿಸಿದ್ದೆವು. ಆದರೆ, ತಮಗೆ ನಟಿಸುವುದಕ್ಕೆ ಸಾಧ್ಯವಿಲ್ಲ ಎಂದು ಅಂಬರೀಷ್ ಹೇಳಿಬಿಟ್ಟರು. ಅದಕ್ಕೆ ಸರಿಯಾಗಿ, ನೀವು ಆ ಪಾತ್ರ ಮಾಡುವುದಿಲ್ಲ ಎಂದರೆ ನಾವೂ ಆ ಚಿತ್ರ ಮಾಡುವುದಿಲ್ಲ ಎಂದು ನಿರ್ವಪಕರು ಹೇಳಿಬಿಟ್ಟರು. ಕೊನೆಗೆ ಒಪ್ಪಿದ ಅವರು, ಚಿತ್ರದಲ್ಲಿ ಭೀಷ್ಮನಾದರು. ಅವರು ಯಾವಾಗ ಬರುತ್ತಾರೋ, ಅದಕ್ಕೆ ತಕ್ಕ ಹಾಗೆ ಚಿತ್ರೀಕರಣ ಮಾಡುವುದಕ್ಕೆ ನಾವು ತಯಾರಾಗಿದ್ದೆವು. ಆದರೆ, ಪ್ರತಿದಿನ ಬೆಳಿಗ್ಗೆ 10ಕ್ಕೆ ಬಂದವರು, ಸಂಜೆ ಪ್ಯಾಕಪ್ ಆದರೂ ಸೆಟ್ ಬಿಟ್ಟು ಹೋಗುತ್ತಿರಲಿಲ್ಲ. ಈ ಚಿತ್ರವನ್ನು ನಾವು 2ಡಿ ಮತ್ತು 3ಡಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದರಿಂದ, ಪ್ರತಿ ದೃಶ್ಯವನ್ನು ಎರಡೆರಡು ಬಾರಿ ಚಿತ್ರೀಕರಿಸಬೇಕಿತ್ತು. ಆದರೆ, ಒಮ್ಮೆಯೂ ಅಂಬರೀಷ್ ಇದಕ್ಕೆ ಬೇಸರಿಸಿಕೊಳ್ಳುತ್ತಿರಲಿಲ್ಲ. ಪ್ರತಿ ಶಾಟ್ ಸರಿಯಾಗಿ ಬರಬೇಕು ಎಂದು ಪ್ರಯತ್ನಿಸುತ್ತಿದ್ದರು. ಇನ್ನು ಕಿರೀಟ, ಕಾಸ್ಟೂಮ್ಳು ಭಾರವಾಗಿದ್ದರಿಂದ ಅದೆಷ್ಟು ಕಿರಿಕಿರಿಯಾಗುತ್ತಿತ್ತೋ ಗೊತ್ತಿಲ್ಲ. ಆದರೆ, ಸಂತೋಷದಿಂದ ಅಭಿನಯಿಸುತ್ತಿದ್ದರು. ಇನ್ನು ಅವರು ಸೆಟ್​ನಲ್ಲಿ ಇದ್ದಾರೆಂದರೆ, ಬೇರೆ ನಟರೆಲ್ಲ ಅವರ ಜತೆಗೇ ಇರುತ್ತಿದ್ದರು. ಅವರ ಜತೆಗೆ ಕಾಲ ಕಳೆಯುತ್ತಿದ್ದರು. ಇನ್ನು ಅಂಬರೀಷ್ ಅವರಿಗೆ ಸುಸ್ತು ಮಾಡುವುದು ಬೇಡ, ಕೊನೆಯಲ್ಲಿ ಡಬ್ಬಿಂಗ್ ಮಾಡಿಸಿದರಾಯಿತು ಅಂತ ಅಂದುಕೊಂಡಿದ್ದೆವು. ಆದರೆ, ಅವರು ತಾವೇ ಬಂದು ಡಬ್ಬಿಂಗ್ ಮಾಡುವುದಾಗಿ ಹೇಳಿ ಒಂದೂವರೆ ದಿನಗಳಲ್ಲಿ ತಮ್ಮ ಕರ್ತವ್ಯವನ್ನು ಮುಗಿಸಿಕೊಟ್ಟು ಹೋದರು.
|ನಾಗಣ್ಣಕುರುಕ್ಷೇತ್ರ ಚಿತ್ರದ ನಿರ್ದೇಶಕ

ಅಂಬರೀಷ್ ವ್ಯಕ್ತಿತ್ವ ಹೇಗೆಂದರೆ, ಮಕ್ಕಳ ಜತೆ ಮಗುವಾಗಿ, ಹಿರಿಯರ ಜತೆ ಹಿರಿಯರಾಗಿ ಇದ್ದವರು. ತಾನೊಬ್ಬ ದೊಡ್ಡ ನಟ, ರಾಜಕಾರಣಿ ಎಂಬ ಅಹಂ ಅವರಿಗಿರಲಿಲ್ಲ. ಸಿನಿಮಾ ಸೆಟ್​ನಲ್ಲಿಯೂ ಎಲ್ಲರಂತೆ ತಾನೂ ಒಬ್ಬ ಎಂಬಂತಿದ್ದರು. ಸೆಟ್​ನಲ್ಲಿರುವವರಿಗೂ ಆ ಅಳುಕು ಬರದಂತೆ ಸ್ವತಃ ಅವರೇ ನಮ್ಮನ್ನು ನೋಡಿಕೊಳ್ಳುತ್ತಿದ್ದರು. ‘ಅಂಬಿ ನಿಂಗ್ ವಯಸ್ಸಾಯ್ತೋ’ ಶೀರ್ಷಿಕೆ ನೋಡಿ ತುಂಬ ಇಷ್ಟಪಟ್ಟಿದ್ದರು. ಆ ಬಳಿಕ ‘ಫ್ಯಾನ್ಸ್ ಗರಂ ಆಗ್ತಾರೆ ಕಣೋ…’ ಎಂದು ಹೇಳಿ ಬಳಿಕ.. ‘ವಯಸ್ಸಾಗಿದ್ದೇ ನಿಜ ಅಲ್ವಾ…’ ಎಂದು ನಕ್ಕಿದ್ದರು. ಸಿನಿಮಾ ಶುರುವಾಗುವುದಕ್ಕೂ ಮುನ್ನ ‘ನೋಡಪ್ಪ ನಾನು ಸೆಟ್​ಗೆ ಚೂರು ತಡವಾಗಿ ಬರ್ತೆನೆ.. ಬಂದ ಮೇಲೆ ನೀ ಹೇಳಿದ್ಹಾಗೆ ಕೇಳ್ತಿನಿ ಸರೀನಾ…’ ಎಂದಿದ್ದರು. ಅದೇ ಥರ ಇದ್ದರು. ಅಷ್ಟೇ ಅಲ್ಲ ಅಂಥ ಮೇರು ನಟನಿಗೆ ನಿರ್ದೇಶನ ಮಾಡಬೇಕಾದರೆ ಕೊಂಚ ನರ್ವಸ್ ಆಗುವುದು ಸಹಜ. ಅದಕ್ಕವರು, ‘ನೋಡಪ್ಪ ನಾನು ಸೆಟ್ ಆಚೆಗಷ್ಟೇ ಅಂಬರೀಷ್… ಸೆಟ್ ಒಳಗೆ ನಟ ಮಾತ್ರ. ನೀನು ಹೇಳಿದ್ದನ್ನ ಮಾಡುವುದಷ್ಟೇ ನನ್ನ ಕೆಲಸ’ ಎಂದು ಹೇಳಿದ್ದರು. ಅವರ ಪಾಲಿಗೆ ಪುಟ್ಟಣ್ಣ ಆದರೂ ಅಷ್ಟೇ ಪುಟ್ಟ ಹುಡುಗ ಆದರೂ ಅಷ್ಟೇ ನಿರ್ದೇಶಕ ನಿರ್ದೇಶಕನೇ. ಸೆಟ್​ನಲ್ಲಿ ಹೋಗೋ ಬಾರೋ ಎಂದು ಏಕವಚನದಲ್ಲಿ ಅವರು ನನ್ನನ್ನು ಕರೆದಿಲ್ಲ. ಅವರ ಆ ಒಂದು ಬೃಹತ್ ಇಮೇಜ್​ನ ಭಾರವನ್ನು ನಮ್ಮ ಮೇಲೆ ಬೀಳದಂತೆ ಅವರೇ ನೋಡಿಕೊಂಡರು.
|ಗುರುದತ್ ಗಾಣಿಗಅಂಬಿ ನಿಂಗ್ ವಯಸ್ಸಾಯ್ತು ಚಿತ್ರದ ನಿರ್ದೇಶಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
