ಬೆಂಗಳೂರು: ದೇಶದ ಆಥಿರ್ಕತೆಗೆ ರಾಜ್ಯದ ಐಟಿ ಉದ್ಯಮದಿಂದ ಶೇ. 30 ಕೊಡುಗೆ ನೀಡುವುದು, ಮುಂದಿನ 5 ವರ್ಷದಲ್ಲಿ ಐಟಿ ಕ್ಷೇತ್ರದಲ್ಲಿ 60 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನೊಳಗೊಂಡ ನೂತನ 2020-25ನೇ ಸಾಲಿನ ಐಟಿ ನೀತಿಯನ್ನು ಪ್ರಕಟಿಸಲಾಗಿದೆ.
ಬೆಂಗಳೂರು ಟೆಕ್​ ಸಮ್ಮಿಟ್​ಗೆ ಪೂರ್ವಭಾವಿಯಾಗಿ ಐಟಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಗುರುವಾರ ಐಟಿ ನೀತಿ 2020-25 ಪ್ರಕಟಿಸಲಾಯಿತು. ಉಪಮುಖ್ಯಮಂತ್ರಿ ಡಾ.ಸಿ.ಎನ್​.ಅಶ್ವತ್ಥನಾರಾಯಣ ಐಟಿ ನೀತಿಯನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅಶ್ವತ್ಥನಾರಾಯಣ, ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ನಗರಗಳಲ್ಲಿ ಐಟಿ ಸಂಸ್ಥೆಗಳ ಸ್ಥಾಪನೆ, ಅದಕ್ಕೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವುದು, ಮಾನವ ಸಂಪನ್ಮೂಲ ಮತ್ತು ಉದ್ಯೋಗ ಸೃಷ್ಟಿ ಸೇರಿ ಇನ್ನಿತರ ಅಂಶಗಳು ಐಟಿ ನೀತಿಯಲ್ಲಿದೆ. ಅದಕ್ಕೆ ಪೂರಕವಾಗಿ ಮೈಸೂರಿನ ಇನ್ಫೋಸಿಸ್​, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಕಾರ್ಯಕ್ಷೇತ್ರ ವಿಸ್ತರಿಸುವ ಪ್ರಯತ್ನಕ್ಕೆ ಉತ್ತೇಜನ ನೀಡಲಾಗುವುದು. ಇದೇ ರೀತಿಯ ಇನ್ನಷ್ಟು ಸಂಸ್ಥೆಗಳು ಬೇರೆ ನಗರಗಳಲ್ಲೂ ಸ್ಥಾಪನೆಗೆ ಒತ್ತು ನೀಡಲಾಗುವುದು.ಅಲ್ಲದೆ ಬಿಯಾಂಡ್​ ಬೆಂಗಳೂರು ಉಪಕ್ರಮದಿಂದ ಟೆಲಿಕಾಂ, ಎಲೆಕ್ಟ್ರಾನಿಕ್​, ಸಿಸ್ಟಂ ವಿನ್ಯಾಸ ಮತ್ತು ಅಭಿವೃದ್ಧಿ ಹಾಗೂ ಐಟಿ ಸಂಸ್ಥೆಗಳನ್ನು ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಕಲಬುರಗಿ, ಬೆಳಗಾವಿ ನಗರಗಳತ್ತ ಕಳುಹಿಸಲಾಗುತ್ತದೆ ಎಂದರು.ಸದ್ಯ 5ಜಿ ತಂತ್ರಜ್ಞಾನ ಬಳಕೆಯಾಗುತ್ತಿದೆ. ಆದರೆ, ರಾಜ್ಯದಲ್ಲಿ 5ಜಿಗೂ ಮುನ್ನ ಮೂಲೆ ಮೂಲೆಗೂ 4ಜಿ ತಲುಪಿಸುವ ಕೆಲಸವಾಗಬೇಕಿದೆ. ಅದಕ್ಕೆ ಸಂಪರ್ಕ ಮುಖ್ಯವಾಗಿದ್ದು, ಆನಿಟ್ಟಿನಲ್ಲಿ ಟೆಲಿಕಾಂ ಸೇವೆಗಳ ಪರಿಧಿಯನ್ನು ವಿಸ್ತರಿಸಬೇಕಿದೆ. ಆ ನಿಟ್ಟಿನಲ್ಲೂ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಐಟಿ-ಬಿಟಿ ಇಲಾಖೆ ಪ್ರಧಾನ ಕಾರ್ಯದಶಿರ್ ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್​, ರಾಜ್ಯ ಐಟಿ ವಿಷನ್​ ಗ್ರೂಪ್​ನ ಅಧ್ಯಕ್ಷ ಕ್ರಿಸ್​ ಗೋಪಾಲಕೃಷ್ಣನ್​, ಐಟಿ ಮೂಲಸೌಕರ್ಯ ಕಾರ್ಯಪಡೆ ಮುಖ್ಯಸ್ಥ ಬಿ.ವಿ.ನಾಯ್ಡು ಉಪಸ್ಥಿತರಿದ್ದರು.ನೀತಿಯಲ್ಲೇನಿದೆ:
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eleven =
Remember me
