ಬೆಂಗಳೂರು:ತೆಲಂಗಾಣದಿಂದ ಗಾಂಜಾ ತಂದು ನಗರದಲ್ಲಿ ಪೂರೈಕೆ ಮಾಡುತ್ತಿದ್ದ ಅತಿಥಿ ಶಿಕ್ಷಕ ಸೇರಿ ಮೂವರು ಆರೋಪಿಗಳನ್ನು ಜೆ.ಪಿ. ನಗರ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ಮೂಲದ ಅತಿಥಿ ಶಿಕ್ಷಕ ಕಿರಣ್ (22), ಮಹಿಪಾಲ್ (22) ಹಾಗೂ ಆನೇಕಲ್​ನ ಅಡಿಗಾರ ಕಲ್ಲಹಳ್ಳಿ ನಿವಾಸಿ ಅಸ್ಗರ್ ಖಾನ್ (24) ಬಂಧಿತರು. ಆರೋಪಿಗಳಿಂದ 76 ಲಕ್ಷ ರೂ. ಮೌಲ್ಯದ 127 ಕೆ.ಜಿ. ಗಾಂಜಾ, ಕಾರು ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಅಸ್ಗರ್ ಖಾನ್ ಆನೇಕಲ್ ಸಮೀಪ ಕಂಪನಿಯೊಂದರಲ್ಲಿ ಲಿಫ್ಟ್ ಆಪರೇಟರ್ ಕೆಲಸ ಮಾಡಿಕೊಂಡಿದ್ದ. ಈತ ಮಾದಕವ್ಯಸನಿಯಾಗಿದ್ದು, ಜೂಜಾಟ, ಮದ್ಯಸೇವನೆ ಇನ್ನಿತರ ದುಶ್ಟಟ ಹೊಂದಿದ್ದ. ಕುಟುಂಬ ನಿರ್ವಹಣೆಗೆ ಹಣದ ಸಮಸ್ಯೆಯಾಗಿದ್ದು, ಸುಲಭವಾಗಿ ಸಂಪಾದನೆ ಮಾಡಬಹುದು ಎಂಬ ಉದ್ದೇಶದಿಂದ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ. ಬಾಡಿಗೆ ಕಾರು ಮಾಡಿಕೊಂಡು ಬೀದರ್​ಗೆ ಹೋಗಿ ಅಗ್ಗದ ದರದಲ್ಲಿ ಗಾಂಜಾ ಖರೀದಿಸಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ. ಒಂದೂವರೆ ತಿಂಗಳ ಹಿಂದೆ 12 ಕೆ.ಜಿ. ಗಾಂಜಾ ತಂದು ಮಾರಾಟ ಮಾಡಿದ್ದ. ಅದರಲ್ಲಿ ಉಳಿದಿದ್ದ 600 ಗ್ರಾಂ ಗಾಂಜಾವನ್ನು ವಿಶ್ವೇಶ್ವರಯ್ಯ ಆಟದ ಮೈದಾನದ ಬಳಿ ಮಾರಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ವಿಚಾರಣೆ ವೇಳೆ ತೆಲಂಗಾಣದ ಕಿರಣ್ ಮತ್ತು ಮಹಿಪಾಲ್ ಎಂಬುವರು ದಂಧೆಯಲ್ಲಿರುವ ಬಗ್ಗೆ ಬಾಯ್ಬಿಟ್ಟಿದ್ದ.
ಬೀದರ್​ನಿಂದ ಬೆಂಗಳೂರಿಗೆ: ಕಿರಣ್ ತೆಲಂಗಾಣದ ಕೃಷ್ಣಾಪುರದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಶಿಕ್ಷಕನಾಗಿದ್ದು, ಮಹಿಪಾಲ್ ಬಿ.ಎ ಪದವೀಧರ. ಇಬ್ಬರೂ ಸಂಬಂಧಿಕರು. ಕರೊನಾ ಹಿನ್ನೆಲೆಯಲ್ಲಿ ಕೆಲಸ ಇಲ್ಲದಿದ್ದರಿಂದ ಖರ್ಚಿಗೆ ಹಣದ ಸಮಸ್ಯೆ ಉಂಟಾಗಿತ್ತು. ಜಹಿರಾಬಾದ್​ನಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಬೀದರ್ ಜಿಲ್ಲೆಯ ಹೆದ್ದಾರಿಗಳಲ್ಲಿ ಮಾರಾಟ ಮಾಡುತ್ತಿದ್ದ. ಈ ವೇಳೆ ಬೆಂಗಳೂರಿನ ಅಸ್ಗರ್ ಖಾನ್ ಪರಿಚಯವಾಗಿದ್ದು, ಬೆಂಗಳೂರಿನಲ್ಲಿ ಗಾಂಜಾಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂಬುದು ಗೊತ್ತಾಗಿತ್ತು. ಬೀದರ್​ನಲ್ಲಿ ಪರಿಚಿತರ ಕಾರನ್ನು ಪಡೆದು ತನ್ನ ಸಂಬಂಧಿಕ ಮಹಿಪಾಲ್ ಜತೆ ನಗರಕ್ಕೆ ಗಾಂಜಾ ತಂದಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − sixteen =
Remember me
