ವಿಧಾನಸಭೆ ಚುನಾವಣೆಯಲ್ಲಿ ಎದುರಾದ ಸೋಲಿನಿಂದ ಮಂಕಾಗಿದ್ದ ಬಿಜೆಪಿ ಈಗ ಅಡಿಗಡಿಗೂ ಪ್ರತಿ ಹೋರಾಟದ ಉತ್ಸಾಹದಲ್ಲಿ ಕಂಗೊಳಿಸಲಾರಂಭಿಸಿದೆ. ಇದಕ್ಕೆ ಕಾರಣವಾಗಿರುವುದು ಪಕ್ಷದ ಚುಕ್ಕಾಣಿ ಹಿಡಿದ ಬಿ.ವೈ. ವಿಜಯೇಂದ್ರ ಎಂದರೆ ಅತಿಶಯೋಕ್ತಿಯಲ್ಲ. ಎದುರಾಳಿಗಳ ರಾಜಕೀಯ ಟೀಕೆಗೆ ಸಮರ್ಥವಾಗಿ ಉತ್ತರ ನೀಡದ ಸ್ಥಿತಿಯಲ್ಲೂ ಇಲ್ಲದ ಪರಿಸ್ಥಿತಿಯಿಂದ ಹೊರತಂದ ವಿಜಯೇಂದ್ರ ಅವರು ಕಾರ್ಯಕರ್ತರ ಪಡೆಯಲ್ಲಿ ಉತ್ಸಾಹ ತುಂಬಿ, ಮುಖಂಡರಲ್ಲಿ ಭರವಸೆ ಹುಟ್ಟಿಸಿದ್ದಾರೆ. ಅಂದ ಹಾಗೆ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡು ಇದೀಗ ನೂರು ದಿನ ಕಳೆದಿದೆ. ಈ ದಿನದಲ್ಲಿ ರಾಜಕೀಯವಾಗಿ ಸಂಚಲನವಂತೂ ಮೂಡಿದೆ. ಎದುರಾಳಿಗಳು ಇವರ ನಡೆಯನ್ನು ಗಮನಿಸುವ ಪರಿಸ್ಥಿತಿ ನೋಡಿದರೆ ಇವರ ಸಾಮರ್ಥ್ಯ ಕಡೆಗಣಿಸುವಂತಿಲ್ಲ ಎಂಬ ಸ್ಪಷ್ಟ ಅರಿವಿದ್ದಂತಿದೆ.
ಇಡೀ ಘಟಕದ ಸೇನಾನಿಯಾಗುವ ಅವಕಾಶ ಸಿಕ್ಕಿತೆಂದು ಸುಮ್ಮನೆ ಕೂರಲಿಲ್ಲ, ತಮ್ಮ ವಿಧಾನಸಭಾ ಕ್ಷೇತ್ರಕ್ಕೂ ಸೀಮಿತವಾಗಲಿಲ್ಲ. ಬದಲಿಗೆ ರಾಜ್ಯದ ಉದ್ದಗಲಕ್ಕೂ ಓಡಾಡಿದರು, ಪಕ್ಷದ ಜಿಲ್ಲಾ ಘಟಕಗಳನ್ನು ಸಕ್ರಿಯಗೊಳಿಸಿದರು, ಭರವಸೆ ತುಂಬಿದರು. ಅವರ ಓಡಾಟ ಯಾವ ಪರಿ ಇತ್ತೆಂದರೆ 100 ದಿನಗಳಲ್ಲಿ 29 ಜಿಲ್ಲೆ ಹತ್ತು ಸಾವಿರ ಕಿಲೋಮೀಟರ್​ಗೂ ಹೆಚ್ಚಿದೆ. ಬಿಜೆಪಿ ಹಳೆಯ ಪರಂಪರೆ ನೆನಪಿಸುವಂತೆ ಅವರ ಪ್ರವಾಸರೂಪುಗೊಂಡಿದ್ದು ವಿಶೇಷ. ಜಿಲ್ಲಾ ಭೇಟಿ ವೇಳೆ ಬೂತ್ ಅಧ್ಯಕ್ಷರ ಮನೆಗೆ ತೆರಳಿ ಅವರಿಗೆ ಸನ್ಮಾನ ಮಾಡಿ, ಮನೆಯಲ್ಲೇ ಊಟ, ಉಪಾಹಾರ ಸೇವಿಸುವ ಮೂಲಕ ಕಾರ್ಯಕರ್ತರಿಗೆ ಹತ್ತಿರವಾಗಿದ್ದಾರೆ. ಪಕ್ಷಕ್ಕೆ ಅಧಿಕಾರ ಸಿಕ್ಕ ಕೂಡಲೇ ನಾಯಕರು ದೊಡ್ಡವರಾದರೂ ಪಕ್ಷದೊಳಗಿನ ಚರ್ಚೆಗೆ ಈ ಮೂಲಕ ವಿರಾಮ ಹಾಕಿದ್ದಾರೆ. ನಾನು ನಿಮ್ಮವನು, ನಿಮ್ಮಂತೆಯೇ ಪಕ್ಷಕ್ಕೆ ದುಡಿಯುವ ಕಾರ್ಯಕರ್ತ ಎಂದು ತಿಳಿಯಪಡಿಸಿದ್ದಾರೆ. ಅಲ್ಲದೆ ಬೂತ್​ನಲ್ಲಿ ನಾವು ಗಟ್ಟಿಯಾಗಬೇಕೆಂಬ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ ಅವರ ಆಶಯಕ್ಕೆ ಪೂರಕವಾಗಿ ಪ್ರಾಮುಖ್ಯತೆ ನೀಡಲಾರಂಭಿಸಿದ್ದಾರೆ. ಪಕ್ಷದ ಕೊನೆಯ ಕೊಂಡಿ ಬೂತ್, ಆ ಬೂತ್​ಗೆ ರಾಜ್ಯಾಧ್ಯಕ್ಷರು ಬರುತ್ತಾರೆಂದರೆ ಸಹಜವಾಗಿ ಸಂಚಲನ ಮೂಡುತ್ತದೆ, ಬೂತ್ ಘಟಕದ ಸದಸ್ಯರಿಗೂ ಹುರುಪು ಬರುತ್ತದೆ. ನೆರೆ-ಹೊರೆ ಬೂತ್ ಮೇಲೂ ಈ ಭೇಟಿಯ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಪಕ್ಷದ ತಳಮಟ್ಟದಲ್ಲಿ ಕಂಪನ ಎದ್ದು ಕಾಣಿಸುತ್ತಿದೆ.
ಪ್ರವಾಸದಲ್ಲಿ ಸಂಚಲನ:ಜಿಲ್ಲಾ ಪ್ರವಾಸದ ವೇಳೆ ಪಕ್ಷದ ಕಾರ್ಯಕರ್ತರೊಂದಿಗೆ ಜನರೂ ಸ್ವಯಂಪ್ರೇರಿತವಾಗಿ ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಬಿಜೆಪಿ ನಾಯಕರಲ್ಲದೆ ಇತರ ಪಕ್ಷದವರಿಗೂ ಈ ಬೆಳವಣಿಗೆ ಅಚ್ಚರಿ ಮೂಡಿಸುತ್ತಿದೆ. ಬದಲಾಗುವ ರಾಜಕೀಯ ವಾತಾವರಣ ಹಾಗೂ ನಾಯಕತ್ವಕ್ಕೆ ಮನ್ನಣೆ ನೀಡುವ ಸುಳಿವು, ಹೊಳಹುಗಳು ಕಂಡುಬರುತ್ತಿವೆ. ನಾಡಿನ ನೇತೃತ್ವ ತೆಗೆದುಕೊಳ್ಳಬಹುದಾದ ನಾಯಕತ್ವ ಎಂದು ಜನರ ನಡುವೆ ಚರ್ಚೆಗಳೂ ಶುರುವಾಗಿವೆ. 28 ಸ್ಥಾನ ಗೆಲ್ಲುವ ಉಮೇದಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್​ಡಿಎ 28ಕ್ಕೆ 28 ಸ್ಥಾನವನ್ನೂ ಗೆಲ್ಲುವ ಹುರುಪು ಕಾಣಿಸಿದೆ. ನರೇಂದ್ರ ಮೋದಿಯವರ ನಾಯಕತ್ವ, ಗೃಹ ಸಚಿವ ಅಮಿತ್ ಷಾ ಅವರ ತಂತ್ರಗಾರಿಕೆ, ಜೆಪಿ ನಡ್ಡಾ ಅವರ ಮೇಲ್ವಿಚಾರಣೆ, ರಾಜ್ಯದಲ್ಲಿ ಬಿ.ವೈ. ವಿಜಯೇಂದ್ರ ಹಠ ಹಾಗೂ ಛಲದ ಪರಿಣಾಮಗಳು ಕಾರ್ಯಕರ್ತರಲ್ಲಿ ಅಂತದ್ದೊಂದು ವಿಶ್ವಾಸ ಬರಲು ಕಾರಣವಾಗಿದೆ. ವಿಜಯೇಂದ್ರ ಅವರೂ ಕ್ಲೀನ್ ಸ್ವೀಪ್ ಮಾಡಬೇಕೆಂಬ ಗುರಿ ಇಟ್ಟುಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ತಳಮಟ್ಟದ ತಂತ್ರಗಾರಿಕೆ ರೂಪಿಸುತ್ತಿದ್ದು, ಪ್ರತಿ ಹಂತದಲ್ಲೂ, ಎಲ್ಲ ಆಯಾಮಗಳಲ್ಲೂ ಚುನಾವಣೆ ಎದುರಿಸಲು ತಂಡವನ್ನು ಸಜ್ಜುಗೊಳಿಸುತ್ತಿರುವುದಕ್ಕೆ ಹಲವು ಉದಾಹರಣೆ ಇದೆ.
ಕರಗಿದ ಗೊಂದಲ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಮುಖ್ಯವಾಗಿ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಯಾರೊಬ್ಬರೂ ಭಿನ್ನ ಅಭಿಪ್ರಾಯ ಹೇಳಲಿಲ್ಲ. ಜತೆಗೆ ರಾಜ್ಯ ಕಾರ್ಯಕಾರಿಣಿಯನ್ನೂ ನಡೆಸಿ ಚರ್ಚೆಗೆ ಮುಕ್ತ ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೆ ಪ್ರಮುಖ ತೀರ್ಮಾನ ಕೈಗೊಳ್ಳುವಾಗ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗುತ್ತಿರುವುದರಿಂದ ಪಕ್ಷದೊಳಗಿನ ಗೊಂದಲ, ಅಸಮಾಧಾನಗಳು ಕರಗುತ್ತಾ ಬಂದಿದೆ. 30 ದಿನ 30 ಜಿಲ್ಲೆ ಅಜೆಂಡಾ ಲೋಕಸಭೆ ಚುನಾ ವಣೆಯನ್ನೇ ಪ್ರಧಾನ ಗುರಿಯಾಗಿಸಿ ಪಕ್ಷ ಸಂಘಟನೆ ಚುರುಕುಗೊಳಿಸಲಾಗುತ್ತಿದೆ. ಚುನಾವಣೆ ಉದ್ದೇಶದ ರ್ಯಾಲಿಗಳು ನಡೆಯುವ ನಡುವೆಯೂ 30 ದಿನ 30 ಜಿಲ್ಲೆಗೆ ಭೇಟಿಕೊಡುವ ಚಿಂತನೆಯೂ ಇದೆ. ಇದಕ್ಕಾಗಿ ರೂಪುರೇಷೆ ಸಿದಟಛಿವಾಗುತ್ತಿದೆ.
ಜನಪರಜನರ ಪರವಲ್ಲದ ತೀರ್ವನಗಳನ್ನು ಕೈಗೊಂಡ ಸಂದರ್ಭದಲ್ಲಿ ಸರ್ಕಾರದ ವಿರುದಟಛಿ, ಜನರ ದನಿಯಾಗಿ ಹೋರಾಟ ಮಾಡದಷ್ಟು ಸೊರಗಿದ್ದ ಬಿಜೆಪಿಯಲ್ಲಿ ಈಗ ಹೋರಾಟದ ಕಿಚ್ಚು ಹೆಚ್ಚಾಗಿದೆ. ನೂರು ದಿನಗಳಲ್ಲಿ ವಿಜಯೇಂದ್ರ ಅವರ ನೇತಾರಿಕೆಯಲ್ಲಿ ಹತ್ತಾರು ಹೋರಾಟ ನಡೆಸಲಾಗಿದೆ. ಈ ಮೂಲಕ ಸರ್ಕಾರಕ್ಕೆ ಪ್ರಬಲ ಪ್ರತಿಪಕ್ಷ ಇದೆ ಎಂಬುದನ್ನು ತೋರಿಸಿ ಬಿಸಿ ಮುಟ್ಟಿಸಲಾಗಿದೆ. ಇತ್ತೀಚಿನ ಬರ ಪರಿಹಾರ ಕುರಿತ ಹೋರಾಟ ಸರ್ಕಾರವನ್ನು ಎಚ್ಚರಿಸಿತ್ತು. ಬೆಳಗಾವಿಯಲ್ಲಿ ನಡೆದ ಪ್ರತಿಭಟನೆ, ಕರಸೇವಕರ ಬಂಧನ ವಿರುದಟಛಿ ಹೋರಾಟ, ಮಂಡ್ಯ ಹನುಮಧ್ವಜ ಇಳಿಸಿದ ಪ್ರಕರಣದಲ್ಲಿನ ಪ್ರತಿರೋಧ, ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ, ಕಾವೇರಿ ವಿಚಾರದಲ್ಲಿ ಅನ್ಯಾಯ ಖಂಡಿಸಿ ಹೋರಾಟ ನಡೆಸಿ ಸರ್ಕಾರಕ್ಕೆ ಬಿಸಿಮುಟ್ಟಿಸಲಾಗಿದ ಹೊಜನಪರ ಹೋರಾಟ. ವಿಶ್ವಾಸ ಮಂತ್ರ, ಬೇಸರ ಶಮನ ತಂತ್ರ ದೆಹಲಿ ಹೈಕಮಾಂಡ್ ಆಶ್ಚರ್ಯಪಡುವ ರೀತಿಯಲ್ಲಿ ವಿಜಯೇಂದ್ರ ಸಂಘಟನೆ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ಬಿಜೆಪಿ ವಿಷಮ ಸ್ಥಿತಿಯಲ್ಲಿತ್ತು. ಪಕ್ಷ ಸಂಘಟನೆ, ಪ್ರಮುಖ ನಾಯಕರ ನಿರ್ಗಮನ, ಪಕ್ಷಕ್ಕೆ ಆಧಾರವಾದ ಜಾತಿ ಮತಗಳ ವಿಮುಖತೆಯಿಂದ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ತಲೆ ಎತ್ತುತ್ತದೆಯೇ ಎಂಬ ಪರಿಸ್ಥಿತಿ ನಿರ್ವಣವಾಗಿತ್ತು.
ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿಯನ್ನು ಆಪೋಷನ ತೆಗೆದುಕೊಳ್ಳುವುದು ಕಾಂಗ್ರೆಸ್​ನ ಒನ್ ಪಾಯಿಂಟ್ ಅಜೆಂಡಾ ಆಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸೋತ ಎಂ. ಪಿ.ಕುಮಾರಸ್ವಾಮಿ, ಮಹದೇವಪ್ಪ ಯಾದವಾಡ, ಎಸ್.ಐ.ಚಿಕ್ಕನಗೌಡರು…ಹೀಗೆ ಅನೇಕ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿತ್ತು. ಎಲ್ಲಕ್ಕೂ ಮಿಗಿಲಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಮೂಲಕ ಬಿಜೆಪಿಯ 2ನೇ ಹಂತದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ನಾಯಕರನ್ನು ಸೆಳೆಯುವ ಉತ್ಸಾಹದಲ್ಲಿತ್ತು. ಇದು ಪಕ್ಷ ಸಂಘಟನೆಗೆ ಹೊಡೆತ ಕೊಡುತ್ತದೆ. ಲೋಕಸಭೆ ಚುನಾವಣೆಯಲ್ಲಿ ಕಷ್ಟವಾಗುತ್ತದೆ ಎಂಬ ಸೂಕ್ಷ್ಮತೆ ಅರಿತ ಬಿಜೆಪಿ ಹೈಕಮಾಂಡ್ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ಚುಕ್ಕಾಣಿ ನೀಡಿತು. ಪಕ್ಷದ ಹೊಣೆ ಹೊತ್ತ ವಿಜಯೇಂದ್ರ, ‘ಇದು ನನಗೆ ಹುದ್ದೆಯಲ್ಲ, ಜವಾಬ್ದಾರಿ’ ಎಂಬ ಧ್ಯೇಯ ಇಟ್ಟುಕೊಂಡು ಮೊದಲು ಮಾಡಿದ ಕೆಲಸವೇ ಪಕ್ಷದಿಂದ ವಿಮುಖರಾದವರ ಸಂಪರ್ಕ. ರಾಜ್ಯಾಧ್ಯಕ್ಷರಾದವರು ಬೂತ್​ವುಟ್ಟದ ಅಧ್ಯಕ್ಷರ ಮನೆ ಬಾಗಿಲಿಗೆ ಹೋದ ಉದಾಹರಣೆ ಇರಲಿಲ್ಲ. ಆದರೆ ವಿಜಯೇಂದ್ರ ಅಂಥವರ ಮನೆಗೆ ಹೋಗಿ, ಪಕ್ಷ ನಿಮ್ಮ ಜತೆ ಇದೆ. ಬಿಟ್ಟು ಹೋಗಬೇಡಿ ಎಂಬ ಸಂದೇಶ ರವಾನಿಸಿದರು. ಪ್ರತಿ ಜಿಲ್ಲೆಗೆ ಭೇಟಿ ನೀಡಿ, 120ಕ್ಕೂ ಹೆಚ್ಚು ಕ್ಷೇತ್ರಗಳಿಗೆ ತಲುಪಿ, ಪಕ್ಷ ಬಿಟ್ಟು ಹೋಗಲು ತುದಿಗಾಲಲ್ಲಿ ನಿಂತಿದ್ದ 2 ಮತ್ತು 3ನೇ ಹಂತದ ನಾಯಕರ ಮನವೊಲಿಸಿದರು. ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸೇರಿ ಬಿಜೆಪಿ ಹಲವು ನಾಯಕರು ಪಕ್ಷ ಬಿಟ್ಟು ಹೋಗಲು ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ವಣವಾಗಿದೆ. ಯಾರೂ ಊಹಿಸದ ರೀತಿಯಲ್ಲಿ ಜಗದೀಶ ಶೆಟ್ಟರ್ ಅವರನ್ನು ಬಿಜೆಪಿಗೆ ವಾಪಸ್ ಕರೆ ತಂದು ಕಾಂಗ್ರೆಸ್​ಗೆ ಮರ್ವಘಾತ ನೀಡಿದರು.
ಬಿಜೆಪಿ ವೆಟರನ್ ಲೀಡರ್​ಗಳಾದ ಡಿ.ಎಚ್.ಶಂಕರಮೂರ್ತಿ, ಬಸವರಾಜ ಪಾಟೀಲ್ ಸೇಡಂ, ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಿ ಪಕ್ಷ ಸಂಘಟನೆಗೆ ಬೇಕಾದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಗ್ಯಾರಂಟಿ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದರೂ ಈಗ ಬಿಜೆಪಿ ಸುಸ್ಥಿತಿಗೆ ಬಂದಿದೆ. ಬಿಜೆಪಿ ನಡೆಸಿದ ಲೋಕಸಭೆ ಚುನಾವಣಾ ಸಮೀಕ್ಷೆ, ಪಕ್ಷದಲ್ಲಿ ಹೊಸ ಹುಮ್ಮಸ್ಸು ತಂದಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ವಿಜಯೇಂದ್ರ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಚಾಲನೆ ಕೊಟ್ಟಿದ್ದಾರೆ. ತಂದೆ ಬಿ.ಎಸ್.ಯಡಿಯೂರಪ್ಪ, ಸಂಘ ಪರಿವಾರದ ಹಿರಿಯರ ಸಲಹೆ, ಕೇಂದ್ರ ವರಿಷ್ಠರ ಮಾರ್ಗದರ್ಶನದಲ್ಲಿ ಮುನ್ನುಗ್ಗುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಸಣ್ಣ ಸಣ್ಣ ವೈಫಲ್ಯಗಳನ್ನೂ ದೊಡ್ಡ ಮಟ್ಟದಲ್ಲಿ ವಿರೋಧಿಸುವ ಮೂಲಕ ಬಿಜೆಪಿಯಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದ್ದಾರೆ. ಯಾರಿಗೂ ಅಸಮಾಧಾನವಾಗದ ರೀತಿಯಲ್ಲಿ ಜಾತಿ ಸಮೀಕರಣದೊಂದಿಗೆ ಜಿಲ್ಲಾ ಪದಾಧಿಕಾರಿಗಳ ನೇಮಕ ಮಾಡಿ ಪಕ್ಷಕ್ಕೆ ಹೊಸ ಚೈತನ್ಯ ತುಂಬಿದ್ದಾರೆ. ಪಕ್ಷದ ವಿರುದಟಛಿ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಶ್ವಾಸ ಇಟ್ಟುಕೊಂಡಿದ್ದಾರೆ. ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿ ಆತಂಕದಲ್ಲಿದ್ದ ದೆಹಲಿ ಹೈಕಮಾಂಡ್ ಆಶ್ಚರ್ಯಪಡುವ ರೀತಿಯಲ್ಲಿ ವಿಜಯೇಂದ್ರ ಸಂಘಟನೆ ಮಾಡುತ್ತಿದ್ದಾರೆ. ಲಿಂಗಾಯತ ಸಮುದಾಯದ ಜತೆಗೆ ಇತರ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿರುವುದು ವಿಶೇಷ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
