ಬೆಂಗಳೂರು:ಜನ-ಸಾಮಾನ್ಯರ ನಿಕಟ ಸಂಪರ್ಕ ಹಾಗೂ ಹೆಚ್ಚು ಅವಲಂಬಿತವಾಗಿರುವ ಕಂದಾಯ ಇಲಾಖೆ ಆಡಳಿತ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿರುವ ಮೂರು ಪ್ರಮುಖ ಯೋಜನೆಗಳ ಜಾರಿಗೆ ಸಿದ್ಧತೆಗಳಾಗಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಚೇರಿಗಳಿಗೆ ಅಲೆತ, ಮಧ್ಯವರ್ತಿಗಳ ಕಾಟ ತಪ್ಪಿಸಿ, ಸುರಕ್ಷಿತ ವಿಧಾನದಲ್ಲಿ ತ್ವರಿತ ಸೇವೆ ಒದಗಿಸಲೆಂದು ತಂತ್ರಾಂಶ ಅಭಿವೃದ್ಧಿಪಡಿಸಿ ಈ ಯೋಜನೆಗಳನ್ನು ರೂಪಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಶೀಘ್ರವೇ ಚಾಲನೆ ನೀಡಲಿದ್ದಾರೆ ಎಂದರು.
ಸ್ವಾವಲಂಬಿ:ಭೂ ಹಕ್ಕುದಾರಿಕೆ, ವಿಭಜನೆಗೆ ಬೇಕಾದ ಪೋಡಿ, 11ಇ ಸ್ಕೆಚ್, ಪೂರ್ವ ಪರಿವರ್ತನೆಗೆ ‘ಸ್ವಾವಲಂಬಿ’ ಅವಕಾಶ ಕಲ್ಪಿಸಲಿದ್ದು, ಖಾಸಗಿ ಜಮೀನಿನ ಮಾಲೀಕರು ಆನ್​ಲೈನ್ (ಛಠಛ್ಟಿಡಜ್ಚಿಛಿಠ.kಚ್ಟ್ಞಠಿಚkಚ.ಜಟಡ.ಜ್ಞಿ) ಅಥವಾ ನಾಡಕಚೇರಿಯ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಈ ಸೇವೆ ಪಡೆಯಬಹುದು. ಅರ್ಜಿದಾರರು ಆಧಾರ್ ಮತ್ತು ಮೊಬೈಲ್ ಸಂಖ್ಯೆ ಹೊಂದಿರುವುದು ಕಡ್ಡಾಯ. ಚಾಲ್ತಿ ವ್ಯವಸ್ಥೆಯಲ್ಲಿ ಆರು ತಿಂಗಳಿಂದ ಒಂದು ವರ್ಷ ಹಿಡಿಯುತ್ತಿದೆ. ವಾರ್ಷಿಕ 10 ಲಕ್ಷ ಅರ್ಜಿಗಳು ಸಲ್ಲಿಕೆಯಾದರೆ ಅರ್ಧದಷ್ಟು ವಿಲೇವಾರಿಯಾಗುತ್ತಿದ್ದವು. ಸದ್ಯಕ್ಕೆ ಇಲಾಖೆ ಆರು ಲಕ್ಷ ಅರ್ಜಿಗಳು ಬಾಕಿಯಿವೆ ಎಂದು ಹೇಳಿದರು.
72 ತಾಸಿನಲ್ಲಿ ಪಿಂಚಣಿ:ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಮಂಜೂರು ಆದೇಶ ಇನ್ನು ಮುಂದೆ ಆನ್​ಲೈನ್​ನಲ್ಲೇ 72 ತಾಸುಗಳಲ್ಲಿ ಮನೆ ಬಾಗಿಲಿಗೆ ತಲುಪಲಿದೆ. ಸಹಾಯವಾಣಿಗೆ ಕರೆ ಮಾಡಿ ‘ಹಲೋ ಕಂದಾಯ ಸಚಿವರೆ ಎಂದು ನಾಗರಿಕರು ಹೇಳಿದರೆ ಸಾಕು, ಆಯಾ ಗ್ರಾಮ ಲೆಕ್ಕಾಧಿಕಾರಿ ಇಲ್ಲವೇ ಗ್ರಾಮ ಸಹಾಯಕ ಮನೆಗೆ ಭೇಟಿಯಿತ್ತು, ಅರ್ಹತೆ ಖಚಿತಪಡಿಸಿಕೊಂಡು ಮೊಬೈಲ್​ನಲ್ಲೇ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ. ರಾಜ್ಯದಲ್ಲಿ ವಿವಿಧ ಯೋಜನೆಗಳಡಿ 73.23 ಲಕ್ಷ ಫಲಾನುಭವಿಗಳಿದ್ದಾರೆ. 2020-21ರಲ್ಲಿ 7,800 ಕೋಟಿ ರೂ. ವೆಚ್ಚವಾಗಿದ್ದರೆ, ಪ್ರಸಕ್ತ ವರ್ಷ 9,483.51 ಕೋಟಿ ರೂ. ಮೀಸಲಿಡಲಾಗಿದೆ. ಮನೆ ಬಾಗಿಲಿಗೆ ಮಂಜೂರು ಆದೇಶ ವ್ಯವಸ್ಥೆ ಪ್ರಾರಂಭಿಸಿದ ಈವರೆಗೆ 43,000 ಫಲಾನುಭವಿಗಳಿಗೆ ಮಾಸಾಶನ ಮಂಜೂರು ಆದೇಶ ನೀಡಿದ್ದು, ನೇರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ ಎಂದು ತಿಳಿಸಿದರು.
ಭೂ ಪರಿವರ್ತನೆ:ಭೂಮಿಯ ಉತ್ತಮ, ಗರಿಷ್ಠ ಉತ್ಪಾದಕ ರೀತಿಯ ಬಳಕೆಗಾಗಿ ಅರ್ಜಿ ಸಲ್ಲಿಸಿದ ಮೂರು ದಿನಗಳೊಳಗೆ ಭೂ ಪರಿವರ್ತನೆ ಆದೇಶ ನೀಡಲಿದ್ದು, ಅನಗತ್ಯ ವಿಳಂಬ ಹಾಗೂ ಹಲವು ಕಚೇರಿಗಳಿಗೆ ಸುತ್ತಾಟ ಕೊನೆಗೊಳ್ಳಲಿದೆ ಎಂದರು. ಎಸ್​ಸಿ, ಎಸ್​ಟಿಗೆ ಮಂಜೂರು ಮಾಡಿದ, ಹಸಿರುಪಟ್ಟಿ, ಕೆರೆ-ಕುಂಟೆ, ಗೋಮಾಳ ಇತ್ಯಾದಿ ಸರ್ಕಾರಕ್ಕೆ ಸೇರಿದ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಲು ಅವಕಾಶವಿಲ್ಲ ಎಂದರು.
ಮಾಸ್ಟರ್​ಪ್ಲಾ್ಯನ್ ಮತ್ತು ಸುಗಮ ವ್ಯವಸ್ಥಿತ ಅಭಿವೃದ್ಧಿಗೆ ಒಳಪಟ್ಟ, ಒಂದು ವೇಳೆ ಪ್ರದೇಶಕ್ಕೆ ಮಾಸ್ಟರ್ ಪ್ಲಾ್ಯನ್ ಪ್ರಕಟವಾಗದಿದ್ದರೂ ಕೃಷಿಯೇತರ ಬಳಕೆಗೆ ಅವಕಾಶವಿದೆ. ಈ ಅನುಕೂಲತೆ ಪಡೆಯಲು ಬಯಸುವವರು ಸ್ವಯಂ ಘೋಷಿತ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ನಿಯಮ ಉಲ್ಲಂಘಿಸಿ ಘೋಷಣಾ ಪ್ರಮಾಣಪತ್ರ ಸಲ್ಲಿಸಿದ್ದರೆ, ಎನ್​ಎಗೆ ಭರಿಸಿದ ಶುಲ್ಕ ಜಪ್ತಿ ಜತೆಗೆ ಅಂತಹವರ ವಿರುದ್ಧ ಕ್ರಿಮಿನಲ್ ದಾವೆ ಹೂಡಲಾಗುತ್ತದೆ. ಮಾರ್ಗಸೂಚಿ ದರವನ್ನೇ ಎನ್​ಎಗೆ ನಿಗದಿಪಡಿಸುವ ಯೋಚನೆಯಿದ್ದು, ತ್ವರಿತ ಭೂಪರಿವರ್ತನೆಗೆ ಅವಕಾಶ ಕೊಡಲೆಂದು ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಆರ್. ಅಶೋಕ್ ಹೇಳಿದರು. ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್​ಗಿರಿನಾಥ್, ಆಯುಕ್ತ ಮನೀಷ್ ಮೌದ್ಗಿಲ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಕರೊನಾ ಪರಿಹಾರ ಬಾಕಿ:ಕರೊನಾದಿಂದ ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪ್ರಕಟಿಸಿದ್ದ ತಲಾ 50,000 ರೂ. ಪರಿಹಾರ ಕೋರಿ 55,000 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 52,000 ಅರ್ಜಿದಾರರಿಗೆ ವಿತರಿಸಿದ್ದು, ಉಳಿದ 3,000 ಅರ್ಜಿದಾರರಿಗೆ ವಾರದೊಳಗೆ ವಿತರಿಸಲಾಗುವುದು. ಒಟ್ಟು ಅರ್ಜಿದಾರರ ಪೈಕಿ 14,500 ಬಿಪಿಎಲ್ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರದಿಂದ ಪಾವತಿಸಲಾಗಿದೆ ಎಂದು ಆರ್.ಅಶೋಕ್ ಹೇಳಿದರು.
3.58 ಲಕ್ಷ ಬೋಗಸ್ ಫಲಾನುಭವಿಗಳು:ನವೋದಯ ಆಪ್ ಮೂಲಕ ವಿವಿಧ ಪಿಂಚಣಿ ಯೋಜನೆಗಳಡಿ ಫಲಾನುಭವಿಗಳ ದತ್ತಾಂಶ ಸಂಗ್ರಹ, ಆಧಾರ್ ಸಂಖ್ಯೆಗೆ ಜೋಡಿಸಿದ್ದರಿಂದ ರಾಜ್ಯದಲ್ಲಿ ಈವರೆಗೆ 3.58 ಲಕ್ಷ ಬೋಗಸ್ ಫಲಾನುಭವಿಗಳು ಪತ್ತೆಯಾಗಿದ್ದು, ಬೊಕ್ಕಸಕ್ಕೆ 430 ಕೋಟಿ ರೂ. ಉಳಿತಾಯವಾಗಿದೆ ಎಂದು ಅಶೋಕ್ ತಿಳಿಸಿದರು.
ಮಂಜೂರಾದ ಸರ್ಕಾರಿ ಭೂಮಿ ಪರಿವರ್ತನೆಗೆ ಅವಕಾಶ ಚಿಂತನೆ:ಪರಿಶಿಷ್ಟ ಜಾತಿ, ಪಂಗಡ ಸಮುದಾಯಗಳು ಹೊರತುಪಡಿಸಿ ಉಳಿದವರಿಗೆ ಮಂಜೂರಾದ ಸರ್ಕಾರಿ ಭೂಮಿ ಪರಿವರ್ತನೆಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಶೋಕ್ ಹೇಳಿದರು. ಶೀಘ್ರವೇ ಹೊಸ ನಿಯಮ ರೂಪಿಸಿ ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಅನುಮತಿ ನೀಡುವ ಯೋಚನೆಯಿದೆ. ಮೊದಲು ಮಂಜೂರಾತಿ ಪಡೆದವರಿಗೆ ಮೊದಲು ಅವಕಾಶ ಆಧಾರದಲ್ಲಿ ಅವಕಾಶ ಕಲ್ಪಿಸುವ ಯೋಚನೆಯಿದ್ದು, ಇನ್ನೂ ಅಂತಿಮವಾಗಿಲ್ಲ ಎಂದರು.
12 ತಿಂಗಳೊಳಗೆ ಪರಿಹಾರ:ಸ್ಮಶಾನ, ಶಾಲೆ, ಅಂಗನವಾಡಿ ಇನ್ನಿತರ ಸರ್ಕಾರಿ ಉಪಯೋಗಕ್ಕೆ ಬೇಕಾದ ಭೂಮಿ ಒದಗಿಸಲು ಮೊದಲ ಆದ್ಯತೆ ನೀಡಬೇಕು ಎಂದು ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸ್ಮಶಾನ, ಅಂಗನವಾಡಿ ಕಟ್ಟಡಗಳ ಜಮೀನು ಕೋರಿ ಸಲ್ಲಿಕೆಯಾಗಿದ್ದ 1,000 ಅರ್ಜಿಗಳನ್ನು ಸ್ವೀಕರಿಸಿ ಒಟ್ಟು 6,000 ಎಕರೆ ಮಂಜೂರು ಮಾಡಲಾಗಿದೆ. 12 ತಿಂಗಳೊಳಗೆ ಸ್ಮಶಾನಕ್ಕೆ ಭೂಮಿ ಒದಗಿಸಿ, ಎಲ್ಲ ಊರುಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.
ಗ್ರಾಮ ಸ್ಥಾನಮಾನ:ರಾಜ್ಯದಲ್ಲಿ ದೊಡ್ಡಿ, ತಾಂಡಾ, ಹಟ್ಟಿ ಸೇರಿ ಒಟ್ಟು 3,700 ಜನ ವಸತಿಗಳನ್ನು ಗುರುತಿಸಿ ಕಂದಾಯ ಗ್ರಾಮ ಸ್ಥಾನಮಾನ ನೀಡಲು ಕ್ರಮವಹಿಸಿದ್ದು, ಈಗಾಗಲೆ ಕೆಲವು ಅಧಿಸೂಚನೆಗಳು ಪ್ರಕಟವಾಗಿವೆ. ದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿರುವ, ದಶಕಗಳ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಆದ್ಯತೆ ನೀಡಿ, ನಿಗದಿತ ಮಾನದಂಡದ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಕಂದಾಯ ಗ್ರಾಮ ಸ್ಥಾನಮಾನ ಲಭಿಸುವುದರಿಂದ ಮೂಲ ಸವಲತ್ತುಗಳ ಅಭಿವೃದ್ಧಿ ಸೇರಿ ರೈತರ ಸಮಸ್ಯೆಗಳು ನೀಗಲಿವೆ ಎಂದು ಆರ್.ಅಶೋಕ್ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + ten =
Remember me
