ತುಮಕೂರು:ಮೈಸೂರು ವಿಚಾರಸಂಕಿರಣದಲ್ಲಿ ನಾನು ಒಟ್ಟಾರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಸಂಬಂಧದ ಬಗ್ಗೆಯಷ್ಟೇ ಮಾತನಾಡಿದ್ದು, ನರೇಂದ್ರ ಮೋದಿ ಅವರ ಸರ್ಕಾರದ ಬಗ್ಗೆಯಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟನೆ ನೀಡಿದರು.ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಪ್ರಸ್ತುತ ಇರುವ ಕೇಂದ್ರ ಸರ್ಕಾರದ ವಿರುದ್ಧ ಅಲ್ಲ, ವಿಚಾರಸಂಕಿರಣಕ್ಕೆ ಸೀಮಿತವಾಗಿ ಒಟ್ಟಾರೆ ನನ್ನ ಅಭಿಪ್ರಾಯ ಹೇಳಿದ್ದೇನೆ. ಅದನ್ನೇ ವಿವಾದವಾಗುವಂತೆ ಮಾಧ್ಯಮಗಳು ಬಿಂಬಿಸಿವೆ. ವಿಚಾರಸಂಕಿರಣದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಮಾಧ್ಯಮಗಳು ಪ್ರತಿಕ್ರಿಯೆಯಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.
ಉತ್ತರ ಭಾರತದ ಕೆಲವು ಹೊಸ ರಾಜ್ಯಗಳ ಉದಯ ಹಾಗೂ ವಿಶೇಷ ಸ್ಥಾನಮಾನದ ಬಗ್ಗೆ ಮಾತನಾಡಿದ್ದೆ. ಅದು ಮೋದಿ ಅವರ ಕಾಲದಲ್ಲಿ ಆದದ್ದಲ್ಲ, ಬಿಜೆಪಿ ಸರ್ಕಾರದ ಮಂತ್ರಿಯಾಗಿ ನಾನು ಹೇಗೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲಿ? ಎಂದು ಮಾಧುಸ್ವಾಮಿ ಪ್ರಶ್ನಿಸಿದರು.ಮಾಧ್ಯಮಗಳ ಹೇಳಿಕೆಯನ್ನು ಗಮನಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ತಪ್ಪು ತಿಳಿದಿಕೊಂಡು ನನ್ನನ್ನು ಅಭಿನಂದಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಅದು ನನ್ನ ಕೊರಳ ದನಿಯೂ ಅಲ್ಲ, ಏನೂ ಅಲ್ಲ. ಆ ವಿಚಾರಸಂಕಿರಣದ ವಿಷಯಕ್ಕೆ ಸಂಬಂಧಿಸಿದ ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ, ನಾನು ಮೋದಿ ಸರ್ಕಾರವನ್ನು ಟೀಕಿಸಿಲ್ಲ, ಅದು ರಾಜಕೀಯ ಭಾಷಣ ಕೂಡ ಅಲ್ಲ ಎಂದು ಸಿದ್ದರಾಮಯ್ಯ ಅವರ ಟೀಕೆಗೆ ಜೆಸಿಎಂ ಟಾಂಗ್ ಕೊಟ್ಟರು.
ಲವರ್​ ಮದುವೆ ನಿಶ್ಚಯವಾಗಿದ್ದಕ್ಕೆ ಸಿಟ್ಟಾಗಿ ಆತನ ಮೇಲೆ ಆ್ಯಸಿಡ್ ಎರಚಿದ ವಿವಾಹಿತೆ!

ನಿಮ್ಮೂರಿನ ಇನ್​ಸ್ಪೆಕ್ಟರ್​ ಬದಲಾಗಿದ್ದಾರಾ ನೋಡಿಕೊಳ್ಳಿ: 18 ಡಿವೈಎಸ್‌ಪಿ, 100 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ; ಇಲ್ಲಿದೆ ಪೂರ್ತಿ ಪಟ್ಟಿ

ಕರ್ನಾಟಕದಲ್ಲಿ ಮತ್ತೆ ಲಾಕ್​ಡೌನ್​ ಆಗತ್ತಾ? ಸಿಎಂ ಯಡಿಯೂರಪ್ಪ ಸ್ಪಷ್ಟನೆ ಹೀಗಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − nine =
Remember me
