ಬಳ್ಳಾರಿ:ಗಣಿನಾಡು ಬಳ್ಳಾರಿಯಲ್ಲಿ ಆಯೋಜಿಸಿರುವ ಎಸ್​ಟಿ ನವ ಶಕ್ತಿ ಸಮಾವೇಶಕ್ಕೆ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾನುವಾರ ಚಾಲನೆ ನೀಡಿದರು. ಕಳೆದ ತಿಂಗಳು ಜನಸಂಕಲ್ಪ ಯಾತ್ರೆ ನಡೆಸಿದ ಬೆನ್ನಲ್ಲೇ ಮೋರ್ಚಾಗಳ ಸಮಾವೇಶಕ್ಕೆ ಬಿಜೆಪಿ ಕೈಹಾಕಿದ್ದು, ಈ ಮೂಲಕ ವಿಧಾನಸಭಾ ಚುನಾವಣಾ ಕಹಳೆ ಮೊಳಗಿಸಿದೆ.
ಎಸ್​ಟಿ ಮೋರ್ಚಾ ಸಮಾವೇಶದಲ್ಲಿ ಲಕ್ಷಾಂತೆ ಜನ ಸೇರಿದ್ದು, ಬುಡಕಟ್ಟು ಜನಾಂಗದ ಕೇಂದ್ರ ಸಚಿವ ಅರ್ಜುನ ಮುಂಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಕೇಂದ್ರ ನಾಯಕರಾದ ಭಗವಂತ ಕೂಬ, ಶೋಭಾ ಕರಂದ್ಲಾಜೆ ಮತ್ತು ಎಸ್​ಟಿ ಸಮುದಾಯದ ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ 15 ಎಸ್​ಟಿ ಮೀಸಲು ಕ್ಷೇತ್ರಗಳಿವೆ. ಈ ಪೈಕಿ ರಾಯಚೂರು-4, ಬಳ್ಳಾರಿ/ವಿಜಯನಗರ-5, ಯಾದಗಿರಿ ಒಂದು ಸೇರಿ 13 ಕ್ಷೇತ್ರಗಳು ಕಲ್ಯಾಣ ಕರ್ನಾಟಕದಲ್ಲಿವೆ. ಚಿತ್ರದುರ್ಗ 3, ಮೈಸೂರು ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಒಂದೊಂದು ಎಸ್​ಟಿ ಮೀಸಲು ಕ್ಷೇತ್ರಗಳಿವೆ. ಸದ್ಯ 6 ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್​ 1 ಹಾಗೂ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಶಾಸಕರಿದ್ದಾರೆ. ರಾಜ್ಯ ಸರ್ಕಾರ ಎಸ್​ಟಿ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸಿದೆ. ಅದರ ಆಧಾರದ ಮೇಲೆ ಮೀಸಲು ಕ್ಷೇತ್ರಗಳ ಗೆಲುವಿಗೆ ಸಮಾವೇಶದ ಮೂಲಕ ರಣತಂತ್ರ ಹೆಣೆಯುತ್ತಿದೆ.
ಈ ಭಾಗದಲ್ಲೇ ಏಕೆ?:ಕಲ್ಯಾಣ ಕರ್ನಾಟಕ ಭಾಗದಲ್ಲೇ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯಗಳ ಸಂಖ್ಯೆ ಗರಿಷ್ಠವಾಗಿದೆ. ಸಮಾವೇಶಕ್ಕೆ ವೇದಿಕೆಯಾಗಿರುವ ಬಳ್ಳಾರಿಯ ಒಟ್ಟು ಜನಸಂಖ್ಯೆಯಲ್ಲಿ ಶೇ.18.41, ರಾಯಚೂರು ಶೇ.19.03, ಯಾದಗಿರಿ ಶೇ.12.51, ಚಿತ್ರದುರ್ಗ ಶೇ.18.23, ಬೀದರ್​ ಶೇ.13.85, ಕೊಪ್ಪಳ ಶೇ.11.82 ಎಸ್​ಟಿ ಸಮುದಾಯವಿದೆ. 2011ರ ಈ ಹಿನ್ನೆಲೆಯಲ್ಲಿ ಎಸ್​ಟಿ ಸಮುದಾಯದ ಗರಿಷ್ಠ ಮತದಾರರನ್ನು ತಲುಪುವ ದೃಷ್ಟಿಯಿಂದ ಬಳ್ಳಾರಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಶ್ರೀರಾಮುಲು ರಕ್ತ ಪವಿತ್ರ, ಮುಂದೊಂದು ದಿನ ಮುಖ್ಯಮಂತ್ರಿ ಆಗ್ತಾನೆ: ಸಿಎಂ ಬೊಮ್ಮಾಯಿ

ಮಾಲೂರಿಗೆ ಬಂದ ಪಂಚರತ್ನ ರಥಯಾತ್ರೆ: ದಾರಿಯುದ್ದಕ್ಕೂ ಎಚ್​ಡಿಕೆ ಅದ್ದೂರಿ ಸ್ವಾಗತ, ಜೆಡಿಎಸ್​ ಶಕ್ತಿ ಪ್ರದರ್ಶನ

ಮಂಗಳೂರಿನಲ್ಲಿ ಆಟೋ ಸ್ಫೋಟ: ಪ್ರಯಾಣಿಕನೇ ತನಿಖೆಯ ಮೂಲ ವ್ಯಕ್ತಿ! ಅನುಮಾನ ಹುಟ್ಟಿಸಿದೆ ಪಂಪ್‌ವೆಲ್​ಗೆ ಪ್ರಯಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + twenty =
Remember me
