ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ‌ ಜಗದೀಶ ಶೆಟ್ಟರ್ ಮಾತನಾಡಿದ್ದು ಈ ಸಂದರ್ಭ ಅವರು ಬಿಜೆಪಿಯ ರಾಷ್ಟ್ರೀಯ ನಾಯಕರು, ಯಡಿಯೂರಪ್ಪ ಹಾಗೂ ಇತರ ಅನೇಕರು ಸೇರಿಕೊಂಡು ತಮ್ಮನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಗದೀಶ ಶೆಟ್ಟರ್​ “ಅಮಿತ್ ಶಾ, ಯಡಿಯೂರಪ್ಪ, ಜೆಪಿ‌ ನಡ್ಡಾ, ಸ್ಮೃತಿ ಇರಾನಿ ಹೀಗೆ ಎಲ್ಲ ಎಲ್ಲರೂ ಸೇರಿ ನನ್ನ ಸೋಲಿಸಲು ಪಣ ತೊಟ್ಟಿದ್ದಾರೆ. ಬಿಜೆಪಿ ನನ್ನನ್ನ ಸೋಲಿಸುವ ಅಭಿಯಾನ ನಡೆಸುತ್ತಿದೆ. ಬಡಪಾಯಿ ಮೇಲೆ ಯಾಕೆ ಮುಗಿ ಬೀಳುತ್ತಿದ್ದಾರೆ ಗೊತ್ತಿಲ್ಲ..?
ಅಯನೂರ ಮಂಜುನಾಥ, ಲಕ್ಷ್ಮಣ ಸವದಿ, ಎನ್.ಆರ್ ಸಂತೋಷ ಎಲ್ಲರೂ ಪಕ್ಷ ತೋರೆದಿದ್ದಾರೆ. ಆದ್ರೆ ನಾನು ಪಕ್ಷ ತೊರೆದಿದ್ದನ್ನು ದೊಡ್ಡ ಅಪರಾಧ ಮಾಡಿದಂತೆ ನೋಡುತ್ತಿದ್ದು ನನ್ನ ವಿರುದ್ಧ ಮುಗಿಬಿದ್ದಿದ್ದಾರೆ. ಯಡಿಯೂರಪ್ಪ ಕೆಜೆಪಿ‌ ಕಟ್ಟುವಾಗ ಈ ಐಡಿಯಲಾಜಿ ಎಲ್ಲಿ ಹೋಗಿತ್ತು.?
ನಾನು ಪಕ್ಷ ದ್ರೋಹದ ಕೆಲಸ ಮಾಡಿಲ್ಲ. ನನ್ನ ಸ್ವಾಭಿಮಾನಕ್ಕೆ ದಕ್ಕೆಯಾಗಿದೆ. ಪಕ್ಷದಲ್ಲಿ ನನ್ನ ವಿರುದ್ಧ ನನ್ ಬಗ್ಗೆ ಕುತಂತ್ರ- ಷಡ್ಡ್ಯಂತ್ರ ನಡೆದಿದೆ. ಯಡಿಯೂರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಯಡಿಯೂರಪ್ಪ ಅವರ ಬೈಗುಳ, ಟೀಕೆಯನ್ನ ಅಶೀವಾರ್ದ ಎಂದು ತೆಗೆದುಕೊಂಡಿದ್ದೇನೆ. ಟಿಕೆಟ್ ಕೊಡಿಸುವುದಾಗಿ ಹೇಳಿ ಯಡಿಯೂರಪ್ಪ ಈಗ ಅಸಹಾಯಕರಾಗಿದ್ದಾರೆ. ನೇರವಾಗಿ ನಾನು ಟೀಕಿಸಿದ್ದು- ಬಿ ಎಲ್ ಸಂತೋಷ ಬಗ್ಗೆ. ಇದಕ್ಕೆ ಆದ್ರೇ ಸಂತೋಷ ಉತ್ತರಿಸಿಲ್ಲ.
ಯಡಿಯೂರಪ್ಪನವರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವ ಕೆಲಸ ನಡೆದಿದೆ. ಕೆಜೆಪಿ ಕಟ್ಟಿ ಶಿಗ್ಗಾಂವಿಗೆ ಪ್ರಚಾರಕ್ಕೆ‌ ಹೋದಾಗ ಇದೇ ಯಡಿಯೂರಪ್ಪ ಬೊಮ್ಮಾಯಿ‌ ಅವರನ್ನು ಬೈಯ್ದಿದ್ದರು. ಆದ್ರೆ ಬೊಮ್ಮಾಯಿ ಗೆದ್ದು ಬಂದಿದ್ದರು. ಸೆಂಟ್ರಲ್ ಕ್ಷೇತ್ರದಲ್ಲಿ ನನ್ನ ಗೆಲ್ಲುವುದು ನಿಶ್ಚಿತ. ಎಷ್ಟು ಜನ ನನ್ನ ಮೇಲೆ ಅಟ್ಯಾಕ್ ಮಾಡ್ತಾರೆ, ಟೀಕೆ ಮಾಡ್ತಾರೆ ಮಾಡಲಿ. ಅದು ನನಗೆ ಲಾಭವಾಗಲಿದೆ
ಐಡಿಯಾಲಜಿ ಬಗ್ಗೆ ಮಾತನಾಡುವವರು ಈ ಹಿಂದೆ ಆಪರೇಶನ್ ಮೂಲಕ ಕಾಂಗ್ರೆಸ್ ನವರನ್ನ ಪಕ್ಷಕ್ಕೆ ಕರೆತಂದರು. ನಾನು ಯಾವತ್ತೂ ಬಿಜೆಪಿಗೆ ಅನ್ಯಾಯ, ದ್ರೋಹ ಮಾಡಿಲ್ಲ. ಕೇವಲ ಹುದ್ದೆಗಾಗಿ ನಾನು ಪಕ್ಷ ತೊರೆದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ನಾನು ಪಕ್ಷ ತೊರೆದಿದ್ದೇನೆ. ಯಡಿಯೂರಪ್ಪ ಅವರ ಬೈಗುಳ ನನ್ನ ಗೆಲುವಿಗೆ ಅನುಕೂಲವಾಗಲಿದೆ. ನನಗೆ ಬೈದಷ್ಟು ನನ್ನ ಮೇಲೆ ಜನರ‌ ಪ್ರೀತಿ, ವಿಶ್ವಾಸ ಹೆಚ್ಚಿಗೆಯಾಗುತ್ತೆ” ಎಂದಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 4 =
Remember me
