ಬೆಂಗಳೂರು:ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದೇನೆ‌. ಒಬ್ಬ ಮಾಜಿ ಸಿಎಂ, ಎರಡು ಬಾರಿ ಪ್ರತಿ ಪಕ್ಷ ನಾಯಕ, ಒಂದು ಪಕ್ಷದ ಅಧ್ಯಕ್ಷನಾಗಿದ್ದವನು ಪಕ್ಷಾಂತರ ಮಾಡುತ್ತಿರುವುದು ಬಹಳ‌ ಜನರಿಗೆ ಆಶ್ಚರ್ಯವಾಗಿರಬಹುದು… ಎನ್ನುತ್ತಲೇ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಮಗೆ ಬಿಜೆಪಿಯಲ್ಲಿ ಆದ ಅವಮಾನವನ್ನು ವಿವರಿಸಿ, ನೋವು ತೋಡಿಕೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್, “ನನಗೆ ವೇದನೆಯಾಗಿದೆ ಎಂದು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಬಿಎಸ್ ವೈ, ಅನಂತ ಕುಮಾರ್ ಪಕ್ಷ ಕಟ್ಟುವಾಗ ಉತ್ತರ ಕರ್ನಾಟಕದಲ್ಲಿ ಪಕ್ಷದ ಸಂಘಟನೆ ಮಾಡಿದೆ. ಆರು ಬಾರಿ ಶಾಸಕನಾಗಿದ್ದಾನೆ. ಏಳನೇ ಬಾರಿ ಸ್ಪರ್ಧೆ ಮಾಡುವುದಿತ್ತು. ಟಿಕೆಟ್ ಸಿಗುತ್ತದೆ ಎಂದು ಭಾವಿಸಿದ್ದೆ, ಬೇರೆ ಜವಾಬ್ದಾರಿ ಕೊಡುವುದಾಗಿ ವರಿಷ್ಠರು ಮಾತನಾಡಬೇಕಿತ್ತು” ಎಂದು ವಿವರಿಸಿದರು.
“ನಾನು ಅಧಿಕಾರ ಲಾಲಸೆಯಿಂದ ರಾಜಕಾರಣಕ್ಕೆ ಬಂದಿಲ್ಲ. ಆರ್.ಎಸ್. ಎಸ್, ಎಬಿವಿಪಿಯಿಂದ ಬಂದವನು. ಏಕೆ ಕಡೆಗಣನೆಯಾಯಿತೆಂದು ತಿಳಿದಿಲ್ಲ. ಹಠಕ್ಕೆ ಬಿದ್ದು ಶಾಸಕನಾಗಬೇಕಿಲ್ಲ. ರಾಜ್ಯ ಉಸ್ತುವಾರಿ ಪೋನ್ ಮಾಡಿ, ‘ಟಿಕೆಟ್ ಇಲ್ಲ, ಒಪ್ಪಿಗೆ ಪತ್ರ ಕಳಿಸಿ’ ಎಂದು ಹೇಳುತ್ತಾರೆ. ಒಬ್ಬ ಬಾಲಕನಿಗೆ ಹೇಳಿದಂತೆ ತಿಳಿಸುತ್ತಾರೆ. ಹಿರಿಯ ನಾಯಕನನ್ನು ನಡೆಸಿಕೊಳ್ಳುವ ರೀತಿಯೇ ಇದು?” ಎಂದು ಪ್ರಶ್ನಿಸಿದರು.
ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದ್ದರಿಂದ ಕಾರ್ಯಕರ್ತರೆಲ್ಲರ ಅಭಿಪ್ರಾಯ ಪಡೆದೆ. ಕಾಂಗ್ರೆಸ್‌ನ ನಾಯಕರು ಕರೆ ಮಾಡಿ ಆಹ್ವಾನಿಸಿದರು. ನನಗೆ ಬೇರೆ ದಾರಿ ಇಲ್ಲ. ನಾನು ಕಟ್ಟಿ ಬೆಳೆಸಿದ ಮನೆಯಿಂದ ಅವರೇ ಹೊರಗೆ ಕಳಿಸಿದರು. ಕಾಂಗ್ರೆಸ್‌ನ ತತ್ವ ಸಿದ್ಧಾಂತ ನಂಬಿ ಸೇರ್ಪಡೆಯಾಗುತ್ತಿದ್ದೇನೆ‌ ಎಂದರು.
ಕರ್ನಾಟಕದ ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯವಾಗುತ್ತಿದೆ. ಪಕ್ಷ ಈಗ ಕೆಲವು ವ್ಯಕ್ತಿಗಳ ಕಂಟ್ರೋಲ್‌ನಲ್ಲಿದೆ. ಅಮಿತ್ ಷಾ‌, ಮೋದಿ, ನಡ್ಡಾ ಅವರನ್ನು ನಾನು ಟೀಕೆ ಮಾಡಲ್ಲ.‌ ಕೆಲವು ವ್ಯಕ್ತಿಗಳು ತಮ್ಮ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುತ್ತಿದ್ದಾರೆ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಟೀಕಿಸಿದರು.
ಬಿಎಸ್‌ವೈ ಬಗ್ಗೆ ನನಗೆ ಗೌರವ ಇದೆ. ಅವರ ಜತೆ ಕೈ ಜೋಡಿಸಿ ಪಕ್ಷವನ್ನು ಬಲಪಡಿಸಿದೆ. ಬಿಎಸ್‌ವೈ ನಂತರ ನನಗೇ ಸೀನಿಯಾರಿಟಿ ಬರುವುದು. ಹೀಗಾಗಿ ನನ್ನನ್ನು ವ್ಯವಸ್ಥಿತವಾಗಿ ಹೊರಹಾಕಲಾಗಿದೆ. ಆರು ತಿಂಗಳು ಶಾಸಕನಾಗಿ ನಂತರ ರಾಜಿನಾಮೆ ಕೊಡುತ್ತೇನೆ, ಅಪಮಾನ ತೊಡೆದು ಹಾಕಿಕೊಳ್ಳುತ್ತೇನೆ ಎಂದು ಹೇಳಿದರೂ ಬಿಜೆಪಿ ನಾಯಕರು ಕೇಳಲಿಲ್ಲ. ನಮ್ಮ‌ ಲಿಂಗಾಯತ ಸಮುದಾಯ ಬಂಧುಗಳು ಕರೆ ಮಾಡಿ ಏಕೆ ಅನ್ಯಾಯ ಆಯಿತೆಂದರು. ವೇದನೆ ವ್ಯಕ್ತಪಡಿಸಿದರು. ಅವರಿಗೂ ಧನ್ಯವಾದಗಳನ್ನು ಹೇಳುವೆ ಎಂದು ಶೆಟ್ಟರ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nine =
Remember me
