ಹುಬ್ಬಳ್ಳಿ:ಟಿಕೆಟ್ ಕೊಡದೇ ಇರುವುದಕ್ಕೆ ಕಾರಣ ಬಹಿರಂಗ ಮಾಡಿ ಎಂದು ಜಗದೀಶ ಶೆಟ್ಟರ್ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಯಡಿಯೂರಪ್ಪನವರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯುವ ಕೆಲಸ ಮಾಡಲಾಗುತ್ತಿದೆ ಎಂದಿದ್ದರು. ಅದಾದ ಬಳಿಕ ಇದೀಗ ಕಾರಣ ಹೇಳಿದ್ದರೆ ಪಕ್ಷ ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗೂಂಡಾ ಕಾಯ್ದೆಯಡಿ ಬಂಧಿತ ಆಪ್ತನ ಮನೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಭೇಟಿ!
ಸುದ್ದಿಗೋಷ್ಟಿಯಲ್ಲಿ ಜಗದೀಶ ಶೆಟ್ಟರ್​, “ರೀಜನ್ ಹೇಳಿದ್ರೆ ನಾನು ಪಕ್ಷ ಬಿಡುತ್ತಿಲಿಲ್ಲ. ನನ್ನ ಹಿಚಕಬೇಕು ಎಂದು ಹಾಗೆ ಮಾಡಿದ್ರು. ನಾನೇನು ಗುಲಾಮನಾ?’ ಎಂದು ಶೆಟ್ಟರ್ ಪ್ರಶ್ನಿಸಿದ್ದು ವಾಗ್ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಅವರು “ಬಿಜೆಪಿಯಲ್ಲಿ 224 ಕ್ಷೇತ್ರ ಗೆಲ್ಲಿಸೋ ವ್ಯಕ್ತಿಗಳು ಇದ್ದಾರೆ. ಯಾರು ಬಂದರೂ ನನಗೆ ಭಯ ಇಲ್ಲ. ಅಂಡರ್ ಕರೆಂಟ್​ ಏನಿದೆ ನನಗೆ ಗೊತ್ತಿದೆ. ಜೋಶಿ ಅವರೇ ಪಕ್ಷದಲ್ಲಿ ತತ್ವ ಸಿದ್ದಾಂತ ಏನಿದೆ?
ಇದನ್ನೂ ಓದಿ:ಯಡಿಯೂರಪ್ಪ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯುತ್ತಿದ್ದಾರೆ: ಜಗದೀಶ​ ಶೆಟ್ಟರ್​
ಕೆಲ‌ಮಂತ್ರಿಗಳು ಸಿಡಿ ಸಲುವಾಗಿ ಸ್ಟೇ ತಗೊಂಡಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ನನ್ನ ಸಲುವಾಗಿ ಯಾರೂ ಬರಲಿ ಎಂದು ಕರೆಯಲ್ಲ. ನಾನು ಎಲ್ಲಿಯೂ ಕ್ಷಮೆ ಕೇಳಿಲ್ಲ” ಎಂದರು.
ಇನ್ನು ಯಡಿಯೂರಪ್ಪ ಕಾಂಗ್ರೆಸ್ ಸೇರಲಿಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶೆಟ್ಟರ್, “ಒಟ್ಟು ಪಕ್ಷ ಅಂತಾ ಒಡೆದರಲ್ಲ. ಸೈದ್ದಾಂತಿಕ ವಿರೋಧಿ ಯಾಕೆ,ಪಕ್ಷದಲ್ಲಿ ಸಿದ್ದಾಂತ ಎಲ್ಲಿದೆ. ಸಿದ್ದಾಂತ ಇದ್ರೆ ಇವರು ಅಧಿಕಾರಕ್ಕೆ ಬರ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
