ಬೆಂಗಳೂರು:ನಟ ಜಗ್ಗೇಶ್ ಮತ್ತು ದರ್ಶನ್ ಫ್ಯಾನ್ಸ್ ವಿವಾದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಮ್ಮ ನೆಚ್ಚಿನ ನಾಯಕನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ ನಟ ಜಗ್ಗೇಶ್​ಗೆ ದರ್ಶನ್​ ಅಭಿಮಾನಿಗಳು ಸಿನಿಮಾ ಸೆಟ್​ನಲ್ಲೇ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬೆನ್ನಲ್ಲೇ ಈ ಘರ್ಷಣೆ ಸಂಬಂಧ ಖಾಸಗಿ ಪತ್ರಿಕೆ ಹಾಗೂ ಮಾಧ್ಯಮ ಒಂದರ ವರದಿಯ ಮೇಲೆ ನವರಸ ನಾಯಕ ಜಗ್ಗೇಶ್​ ಆಕ್ರೋಶಗೊಂಡಿದ್ದರು. ಅಲ್ಲದೆ, ಒಬ್ಬ ನಟನ ಸಿನಿಮಾ ಹಿಟ್​ ಆಯ್ತು ಅಂದ್ರೆ ಇನ್ನೊಬ್ಬ ನಟ ಇನ್ನೊಂದು ಹುನ್ನಾರ ಮಾಡ್ತಾನೆ. ನಾವು ಒಗ್ಗಟ್ಟಾಗಿ ಬೆಳೆಯೋಣ, ನಾವು ಕನ್ನಡದವರು, ನಮ್ಮ ಸಿನಿಮಾ ಎಂಬ ಭಾವನೆ ಯಾರಲ್ಲೂ ಬಂದಿಲ್ಲ. ನಾನೊಬ್ಬನೇ ಬೆಳೆಯಬೇಕು. ನಾನೊಬ್ಬನೆ ಉದ್ಧಾರ ಆಗಬೇಕು ಎಂಬ ಮನಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ್ದ ವಿಡಿಯೋ ತುಣಕನ್ನು ಜಾಲತಾಣದಲ್ಲಿ ಹಾಕಿ ಭಾರಿ ಸದ್ದು ಮಾಡಿದ್ದರು.
ಇಂದು(ಬುಧವಾರ) ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜಗ್ಗೇಶ್​, ದರ್ಶನ್‌ನನ್ನ ಬಹಳ ಪ್ರೀತಿಸುತ್ತೇನೆ. ಅವತ್ತು ಪೊಲೀಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಸಿದ್ರಲ್ಲ, ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ? ಜಗ್ಗೇಶ್ ಬಂದಿದ್ದ ಅಲ್ವಾ… ಅಷ್ಟು ದೊಡ್ಡ ನಟನನ್ನ ಸಣ್ಣ ಹೀರೋಯಿನ್ ಮನೆಯೊಳಗೆ ಚಪ್ಪಲಿ ಇಲ್ಲದೆ ನಿಲ್ಲಿಸೋದು ಸರಿಯಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಂಡು ಆತನನ್ನ ಕಳುಹಿಸಿ ಎಂದು ಪೋಲಿಸರೊಂದಿಗೆ ಜಗಳ ಮಾಡಿದ್ದೆ. ಗೃಹ ಸಚಿವರ ಬಳಿಯೂ ಗಲಾಟೆ ಮಾಡಿದ್ದೆ. ಇದನ್ನು ದರ್ಶನ್ ನೆನೆಯಬೇಕು ಎಂದರು.ಇದನ್ನೂ ಓದಿರಿರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!
ಕನ್ನಡದ ರಜನಿಕಾಂತ್ ಅಂತ ನಾನು ದರ್ಶನ್‌ಗೆ ಹೇಳಿದ್ದೆ. ಆತ ಈ ಘಟನೆ ಬಳಿಕ ನನಗೆ ಫೋನ್ ಮಾಡಬೇಕಿತ್ತು. ನನ್ನ ಹೆಂಡತಿ ಹೇಳ್ತಿದ್ಳು ‘ದರ್ಶನ್​ಗೆ ಆಕ್ಸಿಡೆಂಟ್ ಆದಾಗ ಕಾಲ್ ಮಾಡಿ ವಿಚಾರಿಸಿದ್ದೆ. ಈಗ ಎಲ್ಲಿದ್ದಾರೆ ಅವರೆಲ್ಲಾ?’ ಅಂತ. ಇದು ಕೃತಜ್ಞತೆ ಇಲ್ಲದ ಸಮಾಜ. ನನ್ನ ಕೈಕೆಳಗೆ ಎಷ್ಟೋ ನಟ-ನಟಿಯರು ತಯಾರಾಗಿದ್ದಾರೆ. ನಾನು ಅನ್ನೋದು, ವಯಸ್ಸು ಅನ್ನೋದು ಶಾಶ್ವತ ಅಲ್ಲ, ಕಡೆವರೆಗೂ ಬರುವುದು ಗುಣ ಅಷ್ಟೆ ಎಂದು ಜಗ್ಗೇಶ್​ ಕಿಡಿಕಾರಿದರು.ಅವತ್ತು ಗಲಾಟೆ ಮಾಡಲು ಬಂದಿದ್ದ ಒಂದಿಬ್ಬರು ದಿನಬೆಳಗಾದರೆ ದರ್ಶನ್ ಜೊತೆ ಇರುತ್ತಾರೆ. ಎಲ್ಲ ಕಡೆ ಅವರ ಫೋಟೋ ಇದೆ. ಇದೆಲ್ಲವನ್ನೂ ಮುಂದುವರಿಸಲ್ಲ. ನಂತರ ಮಾತನಾಡ್ತೀನಿ ಎಂದರು.
ಈ ಗಲಾಟೆ ಇಲ್ಲಿ ನಡೆಯಬೇಕಾಗಿದ್ದಲ್ಲ. ಇದು ರಾಮನಗರ ಸರ್ಕಲ್‌‌ನಲ್ಲಿ ನಡೆಯಬೇಕಿತ್ತು. ನನ್ನ ಚಲನವಲನಗಳನ್ನೆಲ್ಲ ಗಮನಿಸಿದ್ರು. ಇದನ್ನ ನಾನು ಫ್ರೂವ್​ ಮಾಡುತ್ತೇನೆ. ನಾನು ಬೇರೆ ಬೇರೆ ಕಾರಣಗಳಿಂದಾಗಿ ರಾಮನಗರ ಸರ್ಕಲ್‌ನಲ್ಲಿ ಬರಲಿಲ್ಲ. ಬಳಿಕ ಸೆಟ್‌ನಿಂದಲೇ ಯಾರೋ ನನ್ನ ಬಗ್ಗೆ ಮಾಹಿತಿ ಹಂಚಿದ್ದಾರೆ. ನಾವು ಅವನನ್ನ ಕಂಡು ಹಿಡಿಯುತ್ತೇವೆ. ಇಲ್ಲಿ ಗಲಾಟೆ ಮಾಡಿ ವಿಡಿಯೋ ಮಾಡಿ ಜಗ್ಗೇಶ್ ಮಾನ ಹರಾಜು ಹಾಕಲು ಯತ್ನಿಸಿದ್ರು. ನಾವು ಮಾಡುವ ಗಲಾಟೆಯಿಂದ ಹೆದ್ದಾರಿ ಬಂದ್ ಆಗಿದೆ ನೋಡಿ ಅಂತ ತೋರಿಸಬೇಕಿತ್ತು. ಅದಕ್ಕಾಗಿ ಎಲ್ಲ ಪ್ಲಾನ್ ಮಾಡಿಕೊಂಡಿದ್ದರು. ಆದ್ರೆ ಗಲಾಟೆ ಇಲ್ಲಿ ಆಯ್ತು ಎಂದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ನಾಟಕ ಪ್ರದರ್ಶನದಲ್ಲಿ ಮೈಮೇಲೆ ಬಂದ ಚಾಮುಂಡಿ ದೇವಿ! ವಿಡಿಯೋ ವೈರಲ್​

ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!

ಕೋಟಿ ಮೌಲ್ಯದ ಜಮೀನು ದಾನ ಕೊಡ್ತೀನಿ, ತಾಕತ್​ ಇದ್ರೆ ರಾಮಮಂದಿರ ಕಟ್ಟಿಸಿ: ಸಿದ್ದುಗೆ ರೈತನ ಸವಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − nine =
Remember me
