ಶಿವಮೊಗ್ಗ:ಎಸ್​ಡಿಪಿಐ ಸಂಘಟನೆ ಕರಪತ್ರವೊಂದರಲ್ಲಿ ಮಹಾವೀರ ವೃತ್ತ ಹೆಸರಿನ ಬದಲು ಶಾ ಅಲೀಂ ದಿವಾನ್ ದರ್ಗಾ ವೃತ್ತ ಎಂದು ಕಾನೂನುಬಾಹಿರವಾಗಿ ನಮೂದಿಸಿದ್ದನ್ನು ವಿರೋಧಿಸಿ ಜೈನ ಸಮಾಜದ ಪ್ರಮುಖರು, ವಿಎಚ್​ಪಿ, ಬಜರಂಗದಳ, ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ಸಂಘಟನೆಗಳ ಪ್ರಮುಖರು ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಎಸ್​ಡಿಪಿಐ ಸಂಘಟನೆ ಅ.31ರಂದು ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭ ಕರಪತ್ರ ಹಂಚಿತ್ತು. ಇದರಲ್ಲಿ ಮಹಾವೀರ ವೃತ್ತ ಎಂದು ಹೆಸರಿಸುವ ಬದಲು ಶಾ ಅಲೀಂ ದಿವಾನ್ ದರ್ಗಾ ಎಂದು ನಮೂದಿಸಲಾಗಿತ್ತು. ಇದು ಕಾನೂನಿಗೆ ವಿರೋಧವಾಗಿದೆ. 50 ವರ್ಷಗಳ ಹಿಂದೆಯೇ ಸರ್ಕಾರ ಈ ವೃತ್ತವನ್ನು ಭಗವಾನ್ ಮಹಾವೀರ ವೃತ್ತ ಎಂದು ಘೊಷಿಸಿದೆ. ಆದರೆ ಎಸ್​ಡಿಪಿಐ ಸಂಘಟನೆ ಈ ಹೆಸರನ್ನು ಬದಲಾವಣೆ ಮಾಡಿಕೊಂಡು ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಮುಸ್ಲಿಂ ಸಂಘಟನೆಗಳು ಅನೇಕ ಬಡಾವಣೆಗಳ ಹೆಸರನ್ನು ಅನಧಿಕೃತವಾಗಿ ಬದಲಾಯಿಸುತ್ತಿವೆ. ಇದು ಹಿಂದು ಸಮಾಜದವರಿಗೆ ಭಾವನಾತ್ಮಕವಾಗಿ ನೋವು ತಂದಿದೆ. ಕೋಮುಭಾವನೆ ಕೆರಳಿಸುತ್ತದೆ. ಶಾಂತಿ ಸೌಹಾರ್ದತೆ ಹಾಳು ಮಾಡಲು ಹೊರಟಿರುವ ಎಸ್​ಡಿಪಿಐ ಮುಸ್ಲಿಮ್ ಸಂಘಟನೆಯನ್ನು ನಿಷೇಧಿಸಬೇಕು. ಆ ಸಂಘಟನೆ ಕಾರ್ಯಕರ್ತರ ಮೇಲೆ ಮೊಕದ್ದಮೆ ಹೂಡಬೇಕೆಂದು ಒತ್ತಾಯಿಸಿದರು.
ವಿಎಚ್​ಪಿ ಜಿಲ್ಲಾಧ್ಯಕ್ಷ ರಮೇಶ್​ಬಾಬು, ಪ್ರಮುಖರಾದ ದೀನದಯಾಳ್, ಎಸ್.ಆರ್.ನಟರಾಜ್, ನಾರಾಯಣ್ ಜಿ.ವರ್ಣೆಕರ್, ರಾಜೇಶ್ ಗೌಡ, ಸತೀಶ್ ಮಂಚೇಮನೆ, ಎಸ್.ಆರ್.ಸುಧಾಕರ್, ಅಂಕುಶ್ ಇತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
