| ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಮಳೆ ಕೊರತೆಯಿಂದ ಬರದ ಭೀತಿ ಆವರಿಸಿದ್ದು, ಈಗ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಬರ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ತಾಲೂಕಿನಾದ್ಯಂತ ಐದಾರು ಹಳ್ಳಿಗಳಲ್ಲಿ ಬೋರ್ ವೆಲ್​ಗಳಲ್ಲಿ ನೀರು ಬತ್ತಿದೆ. ಮುಂದೆ ಮತ್ತಷ್ಟು ಹಳ್ಳಿಗಳಲ್ಲೂ ಇದೇ ರೀತಿ ಪರಿಸ್ಥಿತಿ ಎದುರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ತಾಲೂಕಿಗೆ ಯಾವುದೇ ನದಿ ಮೂಲಗಳಿಲ್ಲ. ಅರ್ಕಾವತಿ ನದಿ ಪಾತ್ರದ ಕೆರೆಗಳು ಜಿಲ್ಲೆಯ ಜೀವನಾಡಿಗಳಾಗಿವೆ. ಆದರೆ ಈ ಬಾರಿ ಮಳೆ ಕೊರತೆ ಕೆರೆಗಳನ್ನು ಬರಿದಾಗಿಸಿದೆ. 2022ರಲ್ಲಿ 2-3 ಬಾರಿ ಕೋಡಿ ಹರಿದಿದ್ದ ಕೆರೆಗಳು ಈ ಬಾರಿ ಮಳೆಗಾಲದಲೇ ಬರಿದಾಗಿದ್ದವು. ಇದರಿಂದ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯಾಗುವ ಸಂಭವವಿದೆ. ಇದರ ನಡುವೆ, ದೊಡ್ಡಬಳ್ಳಾಪುರ ನಗರ ಹಾಗೂ ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ಜಕ್ಕಲಮಡು ಜಲಾಶಯ ಕೂಡ ಬರಿದಾಗುತ್ತಿದೆ.
25 ಅಡಿಗೆ ಕುಸಿದ ಜಲಾಶಯ: ದೊಡ್ಡಬಳ್ಳಾಪುರ ನಗರ ಹಾಗೂ ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರೊದಗಿಸುವ ಜಕ್ಕಲಮಡು ಜಲಾಶಯವೂ ಬರಿದಾಗುತ್ತಿದೆ. ಜಲಾಶಯದ ನೀರಿನಲ್ಲಿ ಶೇ.67 ಚಿಕ್ಕಬಳ್ಳಾಪುರ ಹಾಗೂ ಶೇ.33 ದೊಡ್ಡಬಳ್ಳಾಪುರ ನಗರಕ್ಕೆ ಮೀಸಲಿಡಲಾಗಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ 58 ಅಡಿ ಇದ್ದು, ಪ್ರಸ್ತುತ ನೀರಿನಮಟ್ಟ ಕೇವಲ 25 ಅಡಿಗೆ ಕುಸಿದಿದೆ. ಸುಮಾರು 1.30 ಲಕ್ಷ ಜನಸಂಖ್ಯೆ ಹೊಂದಿರುವ ದೊಡ್ಡಬಳ್ಳಾಪುರಕ್ಕೆ ನಿತ್ಯ ಕುಡಿಯಲು 2 ಎಂಎಲ್ಡಿ ಅಂದರೆ 2 ದಶಲಕ್ಷ ಲೀಟರ್ ನೀರು ಪೂರೈಕೆ ಆಗುತ್ತಿದೆ. ಬಿಸಿಲು ಕಡಿಮೆಯಾಗಿ ಕನಿಷ್ಠ ಮಳೆಯಾದರೆ ನೀರಿನ ಹಾಹಾಕಾರದಿಂದ ಪಾರಾಗಬಹುದು. ತಾಲೂಕಿನಲ್ಲಿ ಕಳೆದ ಬಾರಿ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆ ಎದುರಾಗಿತ್ತು. ಇದರ ಪರಿಣಾಮ ಈಗ ಸಾಕಷ್ಟು ಹಳ್ಳಿಗಳಲ್ಲಿ ಬೋರ್​ವೆಲ್​ಗಳು ನೀರಿಲ್ಲದೆ ಸ್ಥಗಿತವಾಗಿದ್ದು, ಕುಡಿಯುವ ನೀರಿನ ಕೊರತೆ ಎದುರಾಗಿದೆ. ಪರ್ಯಾಯವಾಗಿ ನೀರಿನ ಪೂರೈಕೆಗಾಗಿ ಜೆಜೆಎಂ ಕಾಮಗಾರಿಯನ್ನು ಚುರುಕುಗೊಳಿಸಲಾಗುತ್ತಿದೆ.
ಮಳೆಕೊರತೆ ತಲೆಬಿಸಿ
ಮಳೆಕೊರತೆಯುಂಟಾಗಿ ತೀವ್ರ ಬರ ಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೊಷಣೆ ಮಾಡಿದೆ. ಬಹುತೇಕ ಕೆರೆ- ಕಟ್ಟೆಗಳಲ್ಲಿ ನೀರಿಲ್ಲ. ಹೀಗಾಗಿ ಜಾನುವಾರುಗಳಿಗೂ ನೀರಿನ ಸಮಸ್ಯೆ ಕಾಡುತ್ತಿದ್ದು, ಬೇಸಿಗೆಯ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೇಕಿದೆ.
ಬೇಸಿಗೆಯಲ್ಲಿ ನೀರಿನ ಅಭಾವ ಆಗದಂತೆ ಸಾಕಷ್ಟು ಜಾಗ್ರತೆ ವಹಿಸಲಾಗಿದೆ. ನಗರಸಭೆ ಮತ್ತು ಪಿಡಿಒ, ನರೇಗಾ, ಜೆಜೆಎಂ ಅಧಿಕಾರಿಗಳೊಂದಿಗೆ ರ್ಚಚಿಸಿದ್ದೇನೆ. ಬೋರ್​ವೆಲ್​ಗಳು ಬತ್ತಿ ಹೋಗಿರುವ ಕಡೆ ಜೆಜೆಎಂನಲ್ಲಿ ಹೊಸದಾಗಿ ಬೋರ್​ವೆಲ್ ಕೊರೆಯಲು ಸೂಚಿಸಿದ್ದೇನೆ. ನಗರದಲ್ಲಿ 95 ಬೋರ್​ವೆಲ್​ಗಳಲ್ಲಿ ನೀರು ಇದೆ. ಹೊಸದಾಗಿ 10 ಬೋರ್​ವೆಲ್ ಕೊರೆಸಲು ಅಧಿಕಾರಿಗಳಿಗೆ ಕಾರ್ಯಪ್ರವೃತ್ತರಾಗಿದ್ದಾರೆ. ಜಕ್ಕಲಮಡು ಜಲಾಶಯದಿಂದ ಬರುವ ನೀರನ್ನು ಸಮರ್ಪಕವಾಗಿ ಪೂರೈಸಿ, ಎಲ್ಲಿಯೂ ಸಮಸ್ಯೆಯಾಗದಂತೆ ಎಚ್ಚರವಹಿಸಲಾಗುವುದು.| ಧೀರಜ್ ಮುನಿರಾಜು ಶಾಸಕ
ಜಕ್ಕಲಮಡು ಜಲಾಶಯದಲ್ಲಿ 25 ಅಡಿ ನೀರಿದೆ. ಅದರಲ್ಲಿ ಪ್ರತಿನಿತ್ಯ ಎರಡು ಎಂಎಲ್ಡಿ ನೀರು ಪೂರೈಕೆಯಾಗುತ್ತಿದೆ. ಬೋರ್​ವೆಲ್​ಗಳ ಕಾರ್ಯಕ್ಷಮತೆ ಮತ್ತು ನೀರಿನ ಪ್ರಮಾಣ ಪರಿಶೀಲಿಸಲಾಗಿದೆ. ನೀರಿಗೆ ಅಭಾವ ಆಗದಂತೆ ಕ್ರಮ ವಹಿಸಲಾಗಿದೆ.| ರಾಮೇಗೌಡ,ಕಾರ್ಯನಿರ್ವಾಹಕ ಇಂಜಿನಿಯರ್, ನಗರಸಭೆ.
ಮಳೆನೀರು ಸಂಗ್ರಹಕ್ಕೆ ಒತ್ತು ಸಿಗಲಿ
ಸರ್ಕಾರಿ ಕಚೇರಿ, ಶಾಲೆಗಳನ್ನು ಹೊರತು ಪಡಿಸಿ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಂಡಿರುವ ಇತರ ನಿದರ್ಶನಗಳು ವಿರಳ. ದೊಡ್ಡ ಪ್ರಮಾಣದ ಕಟ್ಟಡಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆ ಇರುವುದರಿಂದ ಅಲ್ಲಿ ಮಳೆನೀರು ಸಂಗ್ರಹಿಸುವ ಪದ್ಧತಿ ಅಳವಡಿಸಿಕೊಂಡು ನೀರು ಸಂಗ್ರಹಿಸಿ ಅದನ್ನು ಬಳಸಲು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ.
ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 16 =
Remember me
